`ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಮಣಕಿ ಗ್ರೌಂಡ್ ಅಂದರೆ ಅದು ಬ್ಯಾಟು ಹೆಗಲೇರಿಸಿಕೊಂಡ ಕ್ರಿಕೆಟ್ ಪ್ರೇಮಿಗಳ ಅಡ್ಡೆ. ಅಲ್ಲಿ ನಡೆದಷ್ಟು ಕ್ರಿಕೆಟ್ ಟೂರ್ನಮೆಂಟ್ ಸುತ್ತಮುತ್ತಲ ತಾಲೂಕುಗಳಲ್ಲಿ ಎಲ್ಲೂ ನಡೆಯುವುದಿಲ್ಲ. ಅದೇ ಮೈದಾನದಿಂದ ಬೆಳಕಿಗೆ ಬಂದ ಹುಡುಗ ಅಂದರೆ ಕೊಮೆಂಟ್ರಿ ಜಾಯ್ಸನ್ ಡ್ಯಾನಿಲ್.
ಹೌದು, ಆತನನ್ನು ಕರೆಯುವುದೇ ಕೊಮೆಂಟ್ರಿ ಜಾಯ್ಸನ್ ಅಂತ. ಶಾಲೆ-ಹೈಸ್ಕೂಲು ಓದುವಾಗಲೇ ಕ್ರಿಕೆಟ್ ಹುಚ್ಚು ಹಿಡಿಸಿಕೊಂಡು ದೊಡ್ಡವರು ಆಟ ಆಡುವಾಗೆಲ್ಲ ಬಾಲ್ ಹೆಕ್ಕಿಕೊಡಲು ಹೋಗುತ್ತಿದ್ದ ಆತ ಕೊನೆಗೆ ತಾನೇ ಬ್ಯಾಟು ಹೆಗಲಿಗೇರಿಸಿಕೊಂಡು ಮೈದಾನಕ್ಕಿಳಿದ. ಕ್ರಿಕೆಟ್ ಆಡುವ ತನ್ನ ಗೆಳೆಯರನ್ನೆಲ್ಲ ಕಟ್ಟಿಕೊಂಡು ಅಕ್ಕಪಕ್ಕದ ಊರುಗಳಿಗೆ ಮ್ಯಾಚ್ ಕೊಡಲು ಹೋಗ ತೊಡಗಿದ. ಹಲವೆಡೆ ಕಪ್ ತಂದ. ಮ್ಯಾನ್ ಆಫ್ ದಿ ಮ್ಯಾಚ್, ಬೌಲರ್ ಅಂತೆಲ್ಲ ತನ್ನದಾಗಿಸಿಕೊಂಡ. ದೂರದ ಶಿವಮೊಗ್ಗದಲ್ಲಿ ಕ್ರೈಸ್ತ ಸಮುದಾಯ ಹಮ್ಮಿಕೊಂಡ ಟರ್ನಮೆಂಟ್ನಲ್ಲೂ ಬೆವರು ಸುರಿಸಿ ಮ್ಯಾನ್ ಆಫ್ ದಿ ಸಿರೀಸ್ ಕೂಡ ಆದ ಜಾಯ್ಸನ್ ಜೊತೆ ಜೊತೆಗೇ ಮ್ಯಾಚ್ಗಳಲ್ಲಿ ವೀಕ್ಷಕ ವಿವರಣೆ (Running Commentary) ಮಾಡುವವರನ್ನು ಕುತೂಹಲದಿಂದ ನೋಡತೊಡಗಿದ. ತಾನೂ ಯಾಕೆ ಕೊಮೆಂಟ್ರಿ ಮಾಡಬಾರದು ಎಂದು ಆಸೆ ಪಟ್ಟ ಜಾಯ್ಸನ್ ಆ ಮನಸ್ಸಿನಲ್ಲೇ ಕಾಮೆಂಟ್ರಿ ಶೈಲಿಯನ್ನು ಮನನ ಮಾಡಿಕೊಂಡು, ಈ ಬಗ್ಗೆ ತನ್ನ ಮಿತಿಯಲ್ಲಿ ಒಂದಿಷ್ಟು ಹೋಂ ವರ್ಕ್ ಮಾಡಿಕೊಂಡು ಸಜ್ಜಾದ ಜಾಯ್ಸ್ನ್ ಅವಕಾಶಕ್ಕಾಗಿ ಕಾದ.

ಮೊದಲು ಜಾಯ್ಸ್ನ್ ಕೈ ಹಿಡಿದದ್ದು ಮಣಕಿ ಗ್ರೌಂಡ್ ನಲ್ಲಿ ನಡೆಯುತ್ತಿದ್ದ ರವಿರಾಜ್ ಟ್ರಾಫಿ. ದೂರದಲ್ಲಿ ನಿಂತು ಆಟ ನೋಡುತ್ತಿದ್ದ ಜಾಯ್ಸ್ನ್ ನೇರವಾಗಿ ಸಂಘಟಕರ ಬಳಿ ಹೋಗಿ ‘ನಾನೂ ಕೊಮೆಂಟ್ರಿ ಮಾಡ್ತೇನೆ. ಒಂದು ಅವಕಾಶ ಕೊಡಿ ಸರ್’ ಅಂತ ವಿನಂತಿಸಿದಾಗ ಸಂಘಟಕರು ಹುಡುಗನ ಆಸಕ್ತಿ ಗುರುತಿಸಿ ಅವಕಾಶ ಕೊಟ್ಟರು. ಮೈಕ್ ತಗೊಂಡ ಜಾಯ್ಸನ್ ತನ್ನ ಧ್ವನಿ ಏರಿಳಿತದಲ್ಲಿ ಕೊಮೆಂಟ್ರಿ ಶುರು ಹಚ್ಚಿಕೊಂಡ. ಎಲ್ಲರ ಗಮನ ಕೊಮೆಂಟ್ರಿ ಟೇಬಲ್ ಹತ್ತಿರ ಹೋಯಿತು. ಈ ಹುಡುಗನ ಬೆನ್ನು ತಟ್ಟಿದರು. ಆಗ ಜಾಯ್ಸನ್ ವಯಸ್ಸು ಕೇವಲ ಹದಿನೇಳು! ಮೊದಲು ತನ್ನ ಕೈ ಹಿಡಿದ ರವಿರಾಜ್ ಟ್ರಾಫಿಯ ರಾಘು ನಾಯಕ, ಕುಮಾರ ಕವರಿ, ವಿನಾಯಕ ನಾಯಕ, ಸುಬ್ರಾಯ ಶಾಸ್ತ್ರಿ ಇವರನ್ನೆಲ್ಲ ಜಾಯ್ಸನ್ ಮರೆಯದೇ ನೆನೆಯುತ್ತಾನೆ.
ಅನಂತರ ಕ್ರಿಕೆಟ್ ಕೊಮೆಂಟ್ರಿ ಹಾದಿಯಲ್ಲಿ ಜಾಯ್ಸ್ನ್
ಹಿಂತಿರುಗಿ ನೋಡಿಯೇ ಇಲ್ಲ. ಇವರ ಕೊಮೆಂಟ್ರಿ ಶೈಲಿ ನೋಡಿ
ಮಣಕಿ ಗ್ರೌಂಡ್ನಲ್ಲಿ ನಡೆಯುವ ಎನ್.ಪಿ.ಎಲ್ ಪ್ರಿಮಿಚಿiÀÄರ್,
ನಾಮಧಾರಿ ಟ್ರೋಫಿ, ಮಡಿವಾಳ ಟ್ರೋಫಿ, ಎ.ಪಿ.ಎಲ್
ಹೊನ್ನಾವರ, ಮಾತೋಶ್ರೀ ಟ್ರೋಫಿ, ಹರಿಕಾಂತ ಪ್ರಿಮಿಯರ್
ಲೀಗ್, ಜಿ.ಪಿ.ಎಲ್. ಗಂಗಾವಳಿ ಹೀಗೆ ಎಲ್ಲ ಕಡೆಯೂ ಜಾಯ್ಸನ್
ಅವರನ್ನು ಕ್ರಿಕೆಟ್ ಪ್ರೇಮಿಗಳು ಕರೆದು ಕೊಮೆಂಟ್ರಿ
ಮಾಡಿಸಿದರು. ಕಾರವಾರ ಅಂಕೋಲಾ ಸಿದ್ದಾಪುರ ಅಷ್ಟೇ ಅಲ್ಲ,
ಜಿಲ್ಲೆಯ ಹೊರಗೂ ಹೋಗಿ ಕ್ರಿಕೆಟ್ ಟರ್ನಮೆಂಟ್ಗೆ
ಕೊಮೆAಟ್ರಿ ಮಾಡಿ ಬಂದಿದ್ದಾರೆ ಜಾಯ್ಸöನ್! ಇದೀಗ ಜಿಲ್ಲೆಯ
ಒಳಗೂ, ಹೊರಗೂ ಈ ಕ್ರಿಕೆಟಿಗ ಕೊಮೆಂಟ್ರಿ ಜಾಯ್ಸ್ನ್
ಅಂತಲೇ ಮನೆ ಮಾತಾಗಿದ್ದಾರೆ. ತನ್ನ ಬೆಳವಣಿಗೆಗೆ
ನಾಮಧಾರಿ ಟ್ರಾಫಿಯ ರಾಜೇಶ ನಾಯ್ಕ, ಗಾಣಿಗ
ಟ್ರೋಫಿಯ ಗಣಪತಿ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿ, ಹಾಲಕ್ಕಿ
ಟ್ರೋಫಿಯ ಸಂಘಟನೆಯ ಪುರಸಭೆ ನೌಕರ ಶ್ರಿಧರ
ಗೌಡ ಮುಂತಾದ ಅನೇಕರು ಪ್ರೋತ್ಸಾಹ ನೀಡಿದರು ಎಂದು
ಹೇಳುವ ಜಾಯ್ಸನ್ ತನಗೆ ನಂದಿನಿ ಮಿಲ್ಕ್ ಪಾರ್ಲರ್ ನಲ್ಲಿ ಕೆಲಸ
ಕೊಟ್ಟು, ತನ್ನ ತಾಯಿಯ ಅನಾರೋಗ್ಯದಲ್ಲೂ ಧೈರ್ಯ
ತುಂಬಿದ ಮಾಲಕರಾದ ಯಶವಂತ್ ಶಾನಭಾಗ್, ವಿಲಾಸ್
ಶಾನಬಾಗ್ ಅವರನ್ನೂ ಗೌರವಪೂರ್ವಕವಾಗಿ ಸ್ಮರಿಸುತ್ತಾರೆ.
ಕ್ರಿಕೆಟ್ ಟರ್ನಮೆಂಟ್ ಇದ್ದಾಗಲೆಲ್ಲ ಶಾನಭಾಗ್
ಸಹೋದರರು ತನಗೆ ಕೊಮೆಂಟ್ರಿ ಮಾಡಲು ಅವಕಾಶ
ಕೊಟ್ಟು ಬೆಳೆಸಿದ್ದಾರೆ ಎಂದು ಹೇಳುತ್ತಾರೆ. ಇಂಥ
ಹಿರಿಯರೆಲ್ಲರ ಪ್ರೋತ್ಸಾಹದಿಂದ ನಾನು ಒಂದು ದಾರಿ
ಕಂಡುಕೊAಡೆ. ಕೊಮೆಂಟ್ರಿಗೆ ಹೋದಾಗಲೆಲ್ಲ ಯಾರೂ
ತನಗೆ ಬರಿಗೈಲಿ ಕಳುಹಿಸದೇ ಗೌರವಧನ ಕೊಟ್ಟೇ
ಹುರಿದುಂಬಿಸಿದ್ದಾರೆ ಎಂದು ಅಭಿಪ್ರಾಯ ಪಡುತ್ತಾರೆ
ಜಾಯ್ಸ್ನ್.
‘ನಾನು ಯೂ ಟ್ಯೂಬ್ ನೋಡಿಯೂ ಕೊಮೆಂಟ್ರಿ ಸಿದ್ಧತೆ
ಮಾಡಿಕೊಳ್ಳುತ್ತೇನೆ. ಒಮ್ಮೆಮ್ಮೆ ಕ್ರಿಕೆಟ್
ಟರ್ನಮೆಂಟ್ಗೆ ದೂರದ ಮುಂಬೈ, ಪ್ರಣಾ,
ಗುಜರಾಥ್ನಿಂದಲೂ ಆಟಗಾರರು ಬರುತ್ತಾರೆ. ಆಗೆಲ್ಲ ನಾನು
ಯೂ ಟ್ಯೂಬ್ ನೋಡಿ ಆ ಆಟಗಾರರೆಲ್ಲರ ಮೈದಾನದ ಹಿನ್ನೆಲೆ
ತಿಳಿದುಕೊಂಡು ಕೊಮೆಂಟ್ರಿ ಹೇಳಲು
ಆರಮಭಿಸುತ್ತೇನೆ. ಆಗ ದೂರದಿಂದ ಬಂದ ಆಟಗಾರರಿಗೂ
ಹುರಿದುಂಬಿಸಿದAತಾಗುತ್ತದೆ. ಒಟ್ಟೊಟ್ಟಿಗೇ ನಮ್ಮಲ್ಲಿಯ
ಆಟಗಾರರಿಗೆ ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ದೂರದ
ಆಟಗಾರರ ಬಗ್ಗೆ ಮಾಹಿತಿ ತಿಳಿದಂತಾಗುತ್ತದೆ. ಇದರಿಂದಾಗಿ
ಕೇಳುಗರಿಗೂ ನನ್ನ ಕೊಮೆಂಟ್ರಿ ಹಿತವಾಗಿರುತ್ತದೆ’
ಎಂದು ಜಾಯ್ಸನ್ ಡ್ಯಾನಿಲ್ ತಮ್ಮ ಬದ್ಧತೆ ಮೆರೆಯುತ್ತಾರೆ.
ತಂದೆ ಡ್ಯಾನಿಲ್ ಕಳೆದ ಒಂದು ವರ್ಷದ ಹಿಂದ
ನಿಧನರಾದ್ದರಿAದ ಇದೀಗ ೨೨ ವರ್ಷದ ಜಾಯ್ಸ್ನ್ ಹೆಗಲ
ಮೇಲೆ ಮನೆಯ ಸಂಪೂರ್ಣ ಹೊಣೆ ಬಿದ್ದಿದೆ. ಮಿಲ್ಕ ಪಾರ್ಲರ್
ಮತ್ತು ಕೊಮೆಂಟ್ರಿ ನನ್ನ ಕುಟುಂಬದ ಹಸಿವು
ನೀಗಿಸುತ್ತಿದೆ ಎಂದು ಅವರು ವಿನಯದಿಂದ ಹೇಳುತ್ತಾರೆ.
ಗೆಳೆಯರೊಂದಿಗೆ ಎಂ.ಪಿ.ಎಲ್. ಸ್ಪೋರ್ಟ್ಸ ಕ್ಲಬ್ (
ಮಹಾಗಣಪತಿ ಪ್ರಿಮೀಯರ್ ಲೀಗ್) ಎಂಬ ಹೆಸರಿನ ತಂಡ
ಕಟ್ಟಿಕೊAಡು ತುಂಬ ಕಡೆ ಗೆದ್ದು ಬಂದ ಜಾಯ್ಸನ್ ತನ್ನ
ಸಹ ಆಟಗಾರ ಗೆಳೆಯರ ಪ್ರೋತ್ಸಾಹವನ್ನೂ
ಮೆರೆಯುವುದಿಲ್ಲ,. ಈ ಸಂಘಟನೆಯಡಿ ದೊಡ್ಡ ಮಟ್ಟದ
ಟರ್ನಮೆಂಟ್ ಮಾಡಿ ಶಾಲಾ ಕಾಲೇಜಿಗೆ ಹೋಗುವ
ಅಸಹಾಯಕ ವiಕ್ಕಳಿಗೆ ಕೊಂಚ ಸಹಾಯ ಮಾಡಬೇಕು
ಎಂಬ ಇರಾದೆ ಜಾಯ್ಸ್ನ್ ಅವರದ್ದು. ಕುಮಟಾ ಪಟ್ಟಣದ
ಸಿದ್ದನಬಾವಿ ಕಾಲನಿಯಲ್ಲಿನ ಜಾಯ್ಸನ್ ಡ್ಯಾನಿಲ್ ಇಂದು
ಕೊಮೆAಟ್ರಿ ಜಾಯ್ಸನ್ ಆಗಿ ಬೆಳೆದ ರೀತಿ ಸಣ್ಣ ಸಂಗತಿ ಅಲ್ಲವೇ
ಅಲ್ಲ.
(ಕೊಮೆಂಟ್ರಿ ಜಾಯ್ಸನ್ ಅವರನ್ನು ಸಂಪರ್ಕಿಸಲು ಈ
ಮೊಬೈಲ್ ನಂಬರ್ ಬಳಸಬಹುದು : ೮೮೬೧೧೬೪೪೬೩)