ಮೃದು ಕೌಶಲ್ಯಗಳು ಏಕೆ ಮುಖ್ಯ?

ಮೃದು ಕೌಶಲ್ಯಗಳು ಏಕೆ ಮುಖ್ಯ? ಸಾಮಾನ್ಯವಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳು ತಂಡವಾಗಿ ಕೆಲಸ ಮಾಡಬೇಕಾಗುತ್ತದೆ. ಉದ್ಯೋಗಿಗಳ ಸಾಮರ್ಥ್ಯಗಳನ್ನು ಇತರರೊಂದಿಗೆ ಧನಾತ್ಮಕವಾಗಿ ಹೊಲಿಸಲು ಸಂವಹನ ಒಂದು ಪ್ರಮುಖ ಅಂಶವು ಹೌದು. ಇದು ತಾಂತ್ರಿಕ ಕಾರ್ಯಗಳಷ್ಟೇಮೌಲ್ಯಯುತವಾಗಿದೆ.
ಇದರ ಪರಿಣಾಮವಾಗಿ, ಸಂಸ್ಥೆಗಳು ಭೌಗೋಳಿಕವಾಗಿ ಮತ್ತು/ಅಥವಾ ಸಾಂಸ್ಕೃತಿಕವಾಗಿ ಬಹುಸದಸ್ಯ, ಬಹುಶಿಸ್ತೀಯ ತಂಡಗಳಲ್ಲಿ ಕೆಲಸ ಮಾಡಲು ಬೇಕಾಗುವ ಟೀಮ್‌ವರ್ಕ್, ಸಹಯೋಗ, ಸಂವಹನ ಮತ್ತು ಸಮಸ್ಯೆ–ಪರಿಹರಿಸುವ ಕೌಶಲ್ಯಗಳು ಮತ್ತು ಇತರ ಭಾವನಾತ್ಮಕ ಮತ್ತು ಅರಿವಿನ ಸಾಮರ್ಥ್ಯಗಳನ್ನು ಹೊಂದಿರುವ ಕೆಲಸಗಾರರನ್ನು ಹುಡುಕುತ್ತಿರುತ್ತಾರೆ.
ಮೃದು ಕೌಶಲ್ಯವು ಸಾಂದರ್ಭಿಕ ಅರಿವನ್ನು ಬೆಂಬಲಿಸುವ ಮತ್ತು ಕೆಲಸವನ್ನು ಮಾಡುವ ವ್ಯಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸುವ ವ ೈಯಕ್ತಿಕ ಗುಣಲಕ್ಷಣವಾಗಿದೆ. ಮೃದು ಕೌಶಲ್ಯಗಳು ಎಂಬ ಪದವನ್ನು ಸಾಮಾನ್ಯವಾಗಿ ಜನರ ಕೌಶಲ್ಯ ಅಥವಾ ಭಾವನಾತ್ಮಕ ಬುದ್ಧಿವಂತಿಕೆಗೆ ಸಮಾನಾರ್ಥಕವಾಗಿ ಬಳಸಲಾಗುತ್ತದೆ. ನಿರ್ದಿಷ್ಟವಾಗಿ-ವ್ಯಾಖ್ಯಾನಿಸಲಾದ ಕಾರ್ಯವನ್ನು ನಿರ್ವಹಿಸುವ ವ್ಯಕ್ತಿಯ ತಾಂತ್ರಿಕ ಸಾಮರ್ಥ್ಯವನ್ನು ವಿವರಿಸುವ ಕಠಿಣ ಕೌಶಲ್ಯಗಳಿಗಿಂತ ಭಿನ್ನವಾಗಿ ,ಸಾಫ್ಟ್ ಸ್ಕಿಲ್‌ಗಳು ಉದ್ಯೋಗ ಮತ್ತು ಉದ್ಯಮಗಳಲ್ಲಿ ವ್ಯಾಪಕವಾಗಿ ಅನ್ವಯಿಸುತ್ತವೆ.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನೇಮಕ ಮಾಡಿಕೊಳ್ಳುವಾಗ ಸಾಫ್ಟ್ ಸ್ಕಿಲ್‌ಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ, ಏಕೆಂದರೆ ಸಂಸ್ಥೆಗಳು ಯಶಸ್ವಿಯಾಗಲು ಕೆಲಸಗಾರರಿಗೆ ತೀರಾ ಅತ್ಯಗತ್ಯ. 2023 ರಲ್ಲಿ, ಲಿಂಕ್ಡ್‌ಇನ್ ನಾಯಕತ್ವ, ಸಂವಹನ, ಸಹಯೋಗ ಮತ್ತು ಸಮಯ ನಿರ್ವಹಣೆಯನ್ನು ಅಗ್ರ ನಾಲ್ಕು ಹೆಚ್ಚು ಬೇಡಿಕೆಯ ಸಾಫ್ಟ್ ಸ್ಕಿಲ್‌ಗಳಾಗಿ ಪಟ್ಟಿಮಾಡಿದೆ. ಟೆಕ್ನಾಲಜಿ ಕಂಪನಿಯಾದ iCIMS Inc., ನೇಮಕಾತಿ ಮತ್ತು ಇತರ ಉದ್ಯೋಗಿ ನಿರ್ವಹಣೆ-ಸಂಬಂಧಿತ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುತ್ತದೆ. ಮತ್ತು ತನ್ನ ಬಳಿ ಇರುವ ಡೇಟಾವನ್ನು ವಿಶ್ಲೇಷಿಸಿದಾಗ ಕಂಡು ಬಂದ ಅಂಶಗಳೆಂದರೆ ಸಮಸ್ಯೆ-ಪರಿಹರಿಸುವುದು, ಹೊಂದಿಕೊಳ್ಳುವಿಕೆ ಮತ್ತು ಸಮಯ ನಿರ್ವಹಣೆ ಅಭ್ಯರ್ಥಿಗಳಲ್ಲಿ ಬಯಸುವ ಪ್ರಮುಖ ಮೂರು ಸಾಫ್ಟ್ ಸ್ಕಿಲ್ಸ್ ನೇಮಕಾತಿಗಳಾಗಿವೆ ಎಂದುಕಂಡುಹಿಡಿದಿದೆ. ಭಿನ್ನಾಭಿಪ್ರಾಯಗಳ ಸಮಯದಲ್ಲಿಯೂ ಸಹ ಹೊಂದಾಣಿಕೆ, ರಾಜತಾಂತ್ರಿಕತೆ ಮತ್ತು ಗೌರವಿಸುವಿಕೆ ಇತರ ಪ್ರಮುಖ ಮೃದು ಕೌಶಲ್ಯಗಳು ಒಳಗೊಂಡಿವೆ ಎಂದು ವರದಿಯಲ್ಲಿ ತಿಳಿಸಿದೆ.
ವೃತ್ತಿರಂಗದಲ್ಲಿ ಯಶಸ್ಸು ಸಾಧಿಸಲು ಜ್ಞಾನದ ಜತೆ ಕೌಶಲಗಳೂ ಮುಖ್ಯ. ಅದರಲ್ಲೂ ಸಾಫ್ಟ್ ಸ್ಕಿಲ್ಸ್‌ಗಳಿದ್ದರೆ, ಗೊಂದಲ, ಸಮಸ್ಯೆಗಳಿಲ್ಲದೆ ಕರ್ತವ್ಯ ನಿಭಾಯಿಸಬಹುದು. ದಿನದಿಂದ ದಿನಕ್ಕೆ ಬದಲಾಗುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಬೇಕೆಂದರೆ ಕೇವಲ ಜ್ಞಾನವಿದ್ದರಷ್ಟೇ ಸಾಲದು. ಅದರ ಜತೆಗೆ ಕೌಶಲಗಳೂ ಮುಖ್ಯ, ಕೆಲಸದ ಸ್ವರೂಪ ಬದಲಾದಂತೆ, ಅದಕ್ಕೆ ಹೊಂದಿಕೊಳ್ಳಬೇಕು. ಹಾಗಾಗಿ, ಪ್ರತಿ ಉದ್ಯೋಗಿಯೂ ಮೃದು ಕೌಶಲ (ಸಾಫ್ಟ್ ಸ್ಕಿಲ್ಸ್)ಗಳನ್ನು ಹೊಂದಿರುವುದು. ಅತ್ಯಗತ್ಯ. ಸಂವಹನ ಮತ್ತು ಸಹಯೋಗದ ಜತೆಗೆ ಸಮಸ್ಯೆ ಪರಿಹರಿಸುವ ಕೌಶಲಗಳು ಬಹಳ ಮುಖ್ಯ.
ಮೃದು ಕೌಶಲ್ಯಗಳ ವಿಧಗಳು

ಸಾಫ್ಟ್ ಸ್ಕಿಲ್‌ಗಳ ವೈಯಕ್ತಿಕ ಗುಣ ಲಕ್ಷಣಗಳು ವ್ಯಕ್ತಿತ್ವದ ಲಕ್ಷಣಗಳ ಜೊತೆಯಲ್ಲಿ ಕೆಲಸದ ಯಶಸ್ಸಿಗೆ ಅಗತ್ಯವಾದ ಸಂವಹನ ಸಾಮರ್ಥ್ಯ ಗಳನ್ನು ಒಳಗೊಂಡಿರುತ್ತವೆ. ಮೃದು ಕೌಶಲ್ಯಗಳು ವ್ಯಕ್ತಿಯು ಇತರರೊಂದಿಗೆ ತನ್ನ ಸಂಬಂಧಗಳಲ್ಲಿ ಹೇಗೆ ಸಂವಹನ ನಡೆಸುತ್ತಾನೆ ಎಂಬುದನ್ನು ನಿರೂಪಿಸುತ್ತದೆ.ಸಾಫ್ಟ್ ಸ್ಕಿಲ್‌ಗಳೆಂದರೆ, ವೈಯಕ್ತಿಕ ಗುಣಲಕ್ಷಣಗಳು, ಸಾಮರ್ಥ್ಯಗಳು ಎಂದರ್ಥ, ವ್ಯಕ್ತಿಗಳು ವೃತ್ತಿಪರ ನೆಲೆಯಲ್ಲಿ ಸಹೋದ್ಯೋಗಿಗಳೊಂದಿಗೆ ಸಂವಹನ ನಡೆಸಲು ಇವು ಸಹಕಾರಿ. ಮೃದುಕೌಶಲಗಳನ್ನು ಅಳೆಯುವುದು ಅಥವಾ ಪ್ರಮಾಣೀಕರಿಸುವುದು ಬಲು ಕಷ್ಟ. ಆದರೂ, ವೃತ್ತಿ ಯಶಸ್ಸಿನಲ್ಲಿ ಇವು ಅತ್ಯಗತ್ಯ.
ಮುಂದಿನ ವಾರದ ಲೇಖನದಲ್ಲಿಉದ್ಯೋಗದಾತರು ನಿಮ್ಮಿಂದ ನಿರೀಕ್ಷಿಸಲಾಗುವ ಮೃದು ಕೌಶಲಗಳು ಕುರಿತಾಗಿ ಮಾಹಿತಿಯನ್ನು ಪಡೆದುಕೊಳ್ಳೋಣ.

ಲೇಖಕರು :
ಆರ್.ಕೆ. ಬಾಲಚಂದ್ರ