ಇಂದಿನ ದಿನಗಳಲ್ಲಿ ನವೋದಯ ಪರೀಕ್ಷೆ ಈ ಹೆಸರು ಕೇಳದವರಿಲ್ಲ. ಈ ನವೋದಯಕ್ಕೆ ಆಯ್ಕೆಯಾಗಬೇಕು, ಆಯ್ಕೆಯಾಗಲು ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು… ಇದರಿಂದ ಒಂದು ರೀತಿಯ ಮರ್ಯಾದೆ ಸಮಾಜದಲ್ಲಿ ವಿದ್ಯಾರ್ಥಿಯಾದವನಿಗೆ ಹೆಚ್ಚುತ್ತದೆ ಎನ್ನುವುದು ಪಾಲಕರ ಮತ್ತು ವಿದ್ಯಾರ್ಥಿಗಳ ನಡುವೆ ಹುಟ್ಟಿಕೊಂಡಿರುವ ನಂಬಿಕೆ…
ಈ ಪರೀಕ್ಷೆಯ ಪೂರ್ವ ತಯಾರಿಗಾಗಿ ಅದೆಷ್ಟೋ ಬರಹಗಾರರ ಪುಸ್ತಕಗಳು ಕೋರ್ಸ್ ಗಳು, ತರಬೇತಿಯ ಹೆಸರಿನಲ್ಲಿ ಅದೆಷ್ಟೋ ಯೂಟ್ಯೂಬ್ ಚಾನೆಲ್ ಗಳು ಇವೆಲ್ಲದರ ಜೊತೆಗೆ ನವೋದಯ ಪರೀಕ್ಷೆಯನ್ನು ಗೆದ್ದೇ ಗೆಲ್ಲಬೇಕೆನ್ನುವ ಪಾಲಕ ಹಾಗೂ ಬಂಧುಗಳ ಕಡೆಯಿಂದ ಒತ್ತಡದ ಮಾತುಗಳು …

ಈ ಪರೀಕ್ಷೆಯ ನಿಯಮಗಳು ಲಾಭಗಳ ಬಗ್ಗೆ ನಾನಿಲ್ಲಿ ಮಾತನಾಡಲು ಬಯಸುವುದಿಲ್ಲ. ಬದಲಾಗಿ ಈ ಪರೀಕ್ಷೆಯ ಬಗೆಗೆ ಪ್ರಶ್ನೆಯನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ” ನವೋದಯ ಪರೀಕ್ಷೆ ” ಈ ಒಂದು ಪದವು ಕೇಳುತ್ತಿದ್ದಂತೆಯೇ ನನ್ನ ಮನದಲ್ಲಿ ಒಂದು ಪ್ರಶ್ನೆ ಏಳುತಲೇ ಇರುತ್ತದೆ. ನಾವು ಈ ಮಟ್ಟಿನ ಮಹತ್ವ ಈ ಪರೀಕ್ಷೆಗೆ ಕೊಡಬೇಕೇ ?
ಯಾಕೆಂದರೆ, ನವೋದಯ ಆಯ್ಕೆಯ ಪರೀಕ್ಷೆಯು ಹಲವು ರೀತಿಯ ಚುರುಕು ಬುದ್ದಿ ಯನ್ನು ಉಪಯೋಗಿಸಿ ಬಗೆಹರಿಸಬವುದಾದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇಂತಹ ಪ್ರಶ್ನೆಗಳನ್ನು ಕೆಲವು “ಹುಷಾರಿ ” ಎನಿಸಿಕೊಂಡಿರುವ ವಿದ್ಯಾರ್ಥಿಗಳೇ ಸರಿಯಾಗಿ ಉತ್ತರಿಸಬಹುದಾಗಿರುತ್ತದೆ. ಅಂದರೆ ” ನವೋದಯ” ದ ಉದ್ದೇಶ ಕೇವಲ ಬುದ್ದಿವಂತ ಮಕ್ಕಳನ್ನು ಮಾತ್ರ ತನ್ನ ತೆಕ್ಕೆಗೆ ಎಳೆದು ಕೊಳ್ಳುವುದು ಎಂದಾಯಿತು. ಕೇವಲ ಚುರುಕು ವಿದ್ಯಾರ್ಥಿಗಳಿಗೆ ಮಾತ್ರ ಉಜ್ವಲ ಭವಿಷ್ಯ ನೀಡುವ ಉದ್ದೇಶ ಹೊಂದಿರುವ ನವೋದಯ ನಿಜಕ್ಕೂ ನವೋದಯವೇ?
ಒಂದು ವೇಳೆ “ಸಮಾಜದಲ್ಲಿ ಕಾರಣಾಂತರಗಳಿಂದ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿ” ಗಳನ್ನು ಆಯ್ದು, ಅವರ ಓದಿನ ವಿಷಯವಾಗಿ ಇರುವ ಆರ್ಥಿಕ, ಶಾರೀರಿಕ ಅಥವಾ ಮಾನಸಿಕ ತೊಂದರೆಗಳನ್ನು ಇಲ್ಲವಾಗಿಸಿ, ಅವರಿಗೆ ಉತ್ತಮ ವಿದ್ಯಾಭ್ಯಾಸ ,ಉಜ್ವಲ ಭವಿಷ್ಯ ನೀಡುವಂತಿದ್ದರೆ ಅಂತಹ ಒಂದು ವ್ಯವಸ್ಥೆಯನ್ನು ನಾವು ನಿಜಕ್ಕೂ ನವೋದಯ ಅಂತಲೇ ಕರೆಯಬಹುದಿತ್ತು ಅಲ್ಲವೇ? ಸದ್ಯದ ಪರಿಸ್ಥಿತಿಯಲ್ಲಿ ನವೋದಯವು ಕೇವಲ ಬುದ್ದಿವಂತ ಮಕ್ಕಳನ್ನು ಆರಿಸಿಕೊಂಡು ತನ್ನ ಹೆಸರನ್ನು ಬೆಳೆಸಿ ಕೂಳ್ಳುತ್ತಿದೆ ಎಂದರೆ ತಪ್ಪಾದಿತೇ ? ಇಂತಹ ವ್ಯವಸ್ಥೆಗೆ ನಾವು ಈ ಮಟ್ಟಿನ ಮಹತ್ವ ಅಥವಾ ಪ್ರಾಮುಖ್ಯತೆ ನೀಡಬೇಕೆ? ಎಂಬುದು ಪ್ರಶ್ನೆ… ಇದಕ್ಕೆ ತಾವೇನಂತೀರಾ…?

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್
Founder & Creative Head
Grapito Desings (Design and Marketing agency)