ಉದ್ಯೋಗದಾತರು ನಿಮ್ಮಿಂದ ಬಯಸುವ ಮೃದು ಕೌಶಲಗಳು ಯಾವವು?-

ಮೃದು ಕೌಶಲಗಳಲ್ಲಿ ಏನೇನು ಸೇರಿವೆ?

Mrudu kaoushlya

ಮೃದು ಕೌಶಲ್ಯಗಳು ಮುಖ್ಯ ಏಕೆಂದರೆ ಅವರು ಇತರರೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತಾರೆ. 

ಸಂವಹನ ಕೌಶಲ್ಯಗಳು, ತಂಡದ ಕೆಲಸ ಮತ್ತು ಹೊಂದಾಣಿಕೆಯು ಸಹೋದ್ಯೋಗಿಗಳೊಂದಿಗೆ ಸಂಪರ್ಕ ಸಾಧಿಸಲು, ನಿಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು, ಪ್ರತಿಕ್ರಿಯೆಯನ್ನು ಸ್ವೀಕರಿಸಲು ಮತ್ತು ಒಮ್ಮತವನ್ನು ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆಯಾವುದೇ ಒಂದು ಉದ್ಯೋಗದಲ್ಲಿ ಯಶಸ್ಸು ಸಾಧಿಸಲು ಅಥವಾ ಉದ್ಯೋಗದಾತರು ನಿಮ್ಮಿಂದ ಬಯಸುವ ಮೃದು ಕೌಶಲಗಳು ಯಾವವು ಎಂಬದನ್ನು ವಿವರವಾಗಿ ಗಮನಿಸೋಣ.

ಸಂವಹನ: ಒಂದು ಸಂಸ್ಥೆಯು ತನ್ನ ಸಹೋದ್ಯೋಗಿಗಳು, ಗ್ರಾಹಕರು ಹಾಗೂ ಇತರರೊಂದಿಗೆ ವ್ಯವಹರಿಸಲು ಪರಿಣಾಮಕಾರಿ ಸಂವಹನ ಬಹಳ ಮುಖ್ಯ‌ವೆಂದು ಬಾವಿಸುತ್ತದೆ. ಕಾರಣ ವ್ಯವಹಾರವನ್ನು ಎದುರಿನವರಿಗೆ ಅರ್ಥ ಮಾಡಿಸಲು ಇರುವ ಒಂದು ಪ್ರಬಲ ಅಸ್ತೃವೆ ಸಂವಹನ, ಉದ್ಯೋಗ ನೀಡುವ ಸಂಸ್ಥೆಗಳು ತನ್ನ ಸಹೋದ್ಯೋಗಿಗಳೊಂದಿಗೆ ವೃತ್ತಿಪರ ಸಂಬಂಧಗಳನ್ನು ನಿರ್ಮಿಸು ವಂತವರಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ತಂಡದೊಂದಿಗೆ ಕೆಲಸ ನಿರ್ವಹಿಸುವಾಗ ಕಮ್ಯುನಿಕೇಶನ್ ಬಹಳ ಮುಖ್ಯವಾಗುತ್ತದೆ.

ಸಂವಹನ ಕೌಶಲಕ್ಕೆ ಹಲವಾರು ಉದಾಹರಣೆಗಳಿವೆ ಅವುಗಳಲ್ಲಿ ಮುಖ್ಯವಾದವು: ಸಕ್ರಿಯ ಆಲಿಸುವಿಕೆ, ಮೌಖಿಕ ಸಂವಹನ, ಅಮೌಖಿಕ ಸಂವಹನ, ಲಿಖಿತ ಸಂವಹನ, ಪ್ರಸ್ತುತ ಪಡಿಸುವ ಕೌಶಲಗಳು.

ನಾಯಕತ್ವ: ಉತ್ತಮ ನಾಯಕ ತನ್ನ ತಂಡವನ್ನು ಮುನ್ನಡೆಸುವ ಸಕಲ ಸಾಮರ್ಥ್ಯ ಹೊಂದಿರುತ್ತಾನೆ. ಪರಿಣಾಮಕಾರಿ ಸಂವಹನ ನಡೆಸಿ, ಹೊಣೆಗಾರಿಕೆಯನ್ನು ಅದ್ಭುತವಾಗಿ ನಿಭಾಯಿಸುತ್ತಾನೆ. ಆತ ಸಂಸ್ಥೆಯ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಲು ತಂಡದ ಸದಸ್ಯರನ್ನು ಪ್ರೇರೇಪಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಒಂದು ತಂಡವನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಸಾಮರ್ಥ್ಯವನ್ನು ವೃತ್ತಿಪರ ಯಶಸ್ಸಿನ ನಿರ್ಣಾಯಕ ಅಂಶವೆಂದು ಪರಿಗಣಿಸಲಾಗುತ್ತದೆ. ನಾಯಕನಾದವನಿಗೆ ಸಮಸ್ಯೆ ಪರಿಹರಿಸುವ, ತರಬೇತಿ ಮಾರ್ಗದರ್ಶನ, ನಿರ್ವಹಣೆ, ಕಾರ್ಯತಂತ್ರದ ಬಗ್ಗೆ ಅರಿವಿರಬೇಕು.

ಟೀಂ ವರ್ಕ್; ವಹಿಸಿದ ಕೆಲಸವನ್ನು ತಂಡದೊಂದಿಗೆ ಮಾಡಬೇಕು. ತಂಡದೊಂದಿಗೆ ಕೆಲಸ ಮಾಡಲು ಸಂವಹನ, ಸಹಯೋಗ ಮುಖ್ಯ. ಟೀಂ ವರ್ಕ್ ಪರಸ್ಪರ ಆಲೋಚನೆಗಳನ್ನು ಹಂಚಿ ಕೊಳ್ಳಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು,ಸಕಾರಾತ್ಮಕ ಕೆಲಸದ ವಾತಾವರಣವನ್ನು, ಸೃಷ್ಟಿಸುವಲ್ಲಿ ನೆರವಾಗುತ್ತದೆ. ಟೀಂನಲ್ಲಿ ಕೆಲಸ ಮಾಡಬೇಕಾದವರಿಗೆ ಸಂಘರ್ಷ ಪರಿಹಾರ, ಮಧ್ಯಸ್ತಿಕೆ, ಹೊಣೆಗಾರಿಕೆ, ಸಹಯೋಗದ ಮೃದು ಕೌಶಲಗಳಿರಲೇಬೇಕು.

ಸೃಜನಶೀಲತೆ: ಕ್ರಿಯೇಟಿವಿಟಿ ಎನ್ನುವುದು ಎಂಥದ್ದೇ ಬೋರಿಂಗ್ ಕೆಲಸವನ್ನು ಕೂಡ ಅತ್ಯಾಕರ್ಷಕ ಮಾಡುತ್ತದೆ. ಕ್ರಿಯೇಟಿವಿಟಿ ಇದ್ದರೆ ಎಂಥ ಕಠಿಣ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಬಹುದು. ಕ್ರಿಯೇಟಿವ್ ವರ್ಕ್‌ರ್ಸ್ ರವರಿಗೆ ಕಾರ್ಯನಿರ್ವಹಣೆ ವಿಷಯದಲ್ಲಿ ಗೊಂದಲ, ಅನಿಶ್ಚಿತತೆ ಇರುವುದು ತೀರಾ ಕಡಿಮೆ. ಬುದ್ದಿಮಾತು, ಕಲ್ಪನೆ, ಕುತೂಹಲ, ಹೊಸತರ ಪ್ರಯೋಗ ಮಾಡುವ ಉದ್ಯೋಗಿಯು ಕ್ರಿಯೇಟಿವಿಟಿ ಹೊಂದಿರುತ್ತಾನೆ.

ಸಮಯ ಪ್ರಜ್ಞೆ: ಸಮಯ ನಿರ್ವಹಣೆಯು ಬಹಳ ಮುಖ್ಯವಾಗಿ ಸಂಸ್ಥೆಯ ಆದ್ಯತೆಗಳನ್ನು ಹೊಂದಿಸುವ, ಕಾರ್ಯಗಳನ್ನು ಸಂಘಟಿಸುವ ಮತ್ತು ವಿವಿಧ ಚಟುವಟಿಕೆಗಳಿಗೆ ಸಮಯ ನಿಗದಿಪಡಿಸುವ ಸಾಮರ್ಥ್ಯವನ್ನು ಉದ್ಯೋಗಿಯಾದವನು ಹೊಂದಿರಬೇಕು. ಇದಕ್ಕೆ ಶಿಸ್ತು ಬಹಳ ಮುಖ್ಯ. ಸಮಯ ಪ್ರಜ್ಞೆಯಿದ್ದರೆ, ಒತ್ತಡ ಮತ್ತು ಆತಂಕ ಕಡಿಮೆಯಿರುತ್ತದೆ. ವಿಶ್ವಾಸಾರ್ಹ ಮತ್ತು ದಕ್ಷತೆಯಿಂದ ಕೆಲಸ ನಿರ್ವಹಿಸಬಹುದು.

ಹ ೊಂದಿಕೊಳ್ಳುವಿಕೆ: ಕೆಲಸದಲ್ಲಿ ನೀವೆಷ್ಟೇ ನೈಪುಣ್ಯತೆ ಹೊಂದಿದ್ದರೂ, ಹೊಂದಾಣಿಕೆ ಇರಲಿಲ್ಲ. ಎಂದಾದರೆ, ಉಳಿದಿದ್ದೆಲ್ಲವೂ ವ್ಯರ್ಥ. ಮೇಲಿನ ಕೌಶಲಗಳಂತೆಯೇ ಹೊಂದಾಣಿಕೆ ಕೂಡ ಉದ್ಯೋಗಿಗೆ ಬಹಳ ಮುಖ್ಯ.ಬದಲಾಗುತ್ತಿರುವ ಸಂದರ್ಭಗಳಿಗೆ ತಕ್ಕಂತೆ ಉದ್ಯೋಗಿ ಹೊಂದಿಕೊಳ್ಳುವ ಸಾಮರ್ಥ್ಯ ಪಡೆದಿರಬೇಕು. ಕೆಲಸದಲ್ಲಿ ಮುಂದುವರಿಯಲು ಕೌಶಲ ಮತ್ತು ತಂತ್ರಜ್ಞಾನಗಳು ಬಹಳ ಮುಖ್ಯ. ಹಾಗಾಗಿ, ಅವುಗಳನ್ನು ಕಲಿಯಬೇಕು. ಇಂದಿನ ಟೆಕ್ನಾಲಜಿಗೆ,ಕೆಲಸದ ವಾತಾವರಣಕ್ಕೆ ಹೊಂದಿಕೊಂಡು ಕೆಲಸ ನಿರ್ವಹಿಸಲು ಬೇಕಾದ ಮಾನಸಿಕ ಸಿದ್ಧತೆ ಮಾಡಿಕೊಂಡಿರಬೇಕು.

ಸಮಸ್ಯೆಬಗೆಹರಿಸುವುದು: ಉದ್ಯೋಗಿಯಾದವನು ಸಮಸ್ಯೆ ಎಂದಾಕ್ಷಣ ಜಾರಿಕೊಳ್ಳುವುದಲ್ಲ. ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು, ಸಮಸ್ಯೆ, ಅದರ ಮೂಲಕ,ಸಮಸ್ಯೆ ಬಗೆಹರಿಸಲು ಇರುವ ಪರ್ಯಾಯ ಮಾರ್ಗಗಳೇನು ಎಂಬುದರ ಬಗ್ಗೆ ಆಲೋಚಿಸಬೇಕು. ಅದಕ್ಕೆ ಕೌಶಲ ಬೇಕು. ಉದ್ಯೋಗಿಯೊಬ್ಬನಿಗೆ ವಿಮರ್ಶಾತ್ಮಕ ಚಿಂತನೆ, ವಿಶ್ಲೇಷಣೆ, ಕಾರ್ಯತಂತ್ರದ ಚಿಂತನೆ ಇರಬೇಕು.

ಬದ್ಧತೆ:ಉದ್ಯೋಗಿಯು ತಾನು ಮಾಡುವ ಕೆಲಸದಲ್ಲಿ ಬದ್ಧತೆ ಹೊಂದಿರಬೇಕು. ಇದು ಉದ್ಯೋಗದಾತರಿಗೆ ನಿಮ್ಮ ಮೇಲಿನ ವಿಶ್ವಾಸವನ್ನು ಹೆಚ್ಚಿಸುತ್ತದೆ. ಬದ್ಧತೆ ಪ್ರದರ್ಶಿಸಲು ಇರುವ ಹಲವು ಮಾರ್ಗಗಳೆಂದರೆ, ಕೊಟ್ಟ ಕೆಲಸವನ್ನು ಸರಿಯಾದ ಸಮಯಕ್ಕೆ ಮುಗಿಸುವುದು, ಸಭೆಗಳಿಗೆ, ಸರಿಯಾದ ಸಮಯಕ್ಕೆ ಬರುವುದು, ಸಂಕಷ್ಟದ ಸಮಯದಲ್ಲಿಯೂ ಸಾವಧಾನದಿಂದ ವರ್ತಿಸುವುದು, ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು.

ವಿಮರ್ಶಾತ್ಮಕ ಚಿಂತನೆ: ವಿಮರ್ಶಾತ್ಮಕ ಚಿಂತನೆಯು ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಲು ಅನುವು ಮಾಡಿಕೊಡುತ್ತದೆ. ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ಕೈಗೊಳ್ಳುವಾಗ ಈ ಕೌಶಲ ಸಹಕಾರಿ, ಸಮಸ್ಯೆಯೊಂದನ್ನು ಬಹು ಆಯಾಮಗಳಿಂದ ನೋಡಲು ವಿಮರ್ಶಾತ್ಮಕ ಚಿಂತನೆ ಅವಶ್ಯ. ಸಮಸ್ಯೆಯ ಮೂಲ ಕಾರಣವನ್ನು ಗುರುತಿಸಲು, ಪರಿಹಾರ ಕಂಡುಕೊಳ್ಳಲು ವಿಮರ್ಶಾತ್ಮಕ ಚಿಂತನೆಯ ಕೌಶಲ ಕಲಿಯಬೇಕು.

ಮುಂದಿನ ಲೇಖನದಲ್ಲಿ ಮೃದು ಕೌಶಲಗಳನ್ನು ಪಡೆಯುವುದು ಹೇಗೆ? ಎಂಬುದನ್ನು ನೋಡೋಣ.

ಲೇಖಕರು :
ಆರ್.ಕೆ. ಬಾಲಚಂದ್ರ

Leave a Reply

Your email address will not be published. Required fields are marked *