ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸದ್ಯದಲ್ಲೇ ಪ್ರಾರಂಭ!

water

ಸುಪಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಂತೋನಿ ಜಾನ್

ಜೋಯಿಡಾ: ಇಳವಾ ದಾಬೆ ಪಾಂಡರಿ ನದಿಯಿಂದ ರಾಮನಗರ ಹಾಗೂ ಅಸ್ಸು, ಜಗಲಪೇಟ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ೨೮ ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸದ್ಯದಲ್ಲಿಯೇ ಪ್ರಾರಂಭವಾಗಲಿದೆ ಎಂದು ಎಂದು ಸುಪಾ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಅಂತೋನಿ ಜಾನ್ ಮಾಹಿತಿ ನೀಡಿದ್ದಾರೆ.

ತಾಲೂಕಿನ ರಾಮನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಸುಪಾ ಮುಳಗಡೆಯಾದ ನಂತರ ಅಲ್ಲಿನ ನಿರಾಶ್ರಿತರನ್ನು ರಾಮನಗರಕ್ಕೆ ಸ್ಥಳಾಚಿತರ ಮಾಡಲಾಗಿತ್ತು. ಆದರೆ ಇಲ್ಲಿನ ಜನರ ಮೂಲಕ ಸೌಕರ್ಯ ಹಾಗೂ ಮುಖ್ಯವಾಗಿ ನೀರಿನ ಅನುಕೂಲ ಮಾಡಿಕೊಟ್ಟಿರಲಿಲ್ಲ. ಕಳೆದ ೪೦ ವರ್ಷಗಳ ಕನಸು ಈಗ ಶಾಸಕ ಆರ್.ವಿ.ದೇಶಪಾಂಡೆ ಅವರಿಂದ ನೆರವೇರುತ್ತಿದೆ. ನಿರಾಶ್ರತರ ಬೇಡಿಕೆ ಬಗ್ಗೆ ಕಾಳಜಿ ವಹಿಸಿದ ದೇಶಪಾಂಡೆ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದು ಅಂಥೋನಿ ಜಾನ್ ಹೇಳಿದ್ದಾರೆ.


೨೮ ಕೋಟಿ ರೂ. ವೆಚ್ಚದಲ್ಲಿ ೩೮ ಕಿ.ಮಿ. ದೂರದ ಪೈಪ್ ಲೈನ್ ರಾಮನಗರ, ಅಸ್ಸು, ಜಗಲಪೇಟದ ೩೯ ಗ್ರಾಮಗಳಿಗೆ ಯೋಜನೆಯ ಸದುಪಯೋಗ ದೊರೆಯಲಿದೆ. ಈ ಹಿಂದೆ ಕುಡಿಯುವ ನೀರಿನ ಸಲುವಾಗಿ ಸ್ಥಳೀಯರು ಬೃಹತ್ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆದಿದ್ದರು. ಇದೀಗ ಆರ್.ವಿ.ದೇಶಪಾಂಡೆಯವರು ವಿಶೇಷ ಮುತುವರ್ಜಿ ವಹಿಸಿ ಸರಕಾರದಿಂದ ಯೋಜನೆಗೆ ಮಂಜೂರಿ ಮಾಡಿಸಿದ್ದಾರೆ. ಸುಪಾ ಹಿತರಕ್ಷಣಾ ವೇದಿಕೆಯಿಂದ ಸೂಪದಲ್ಲಿ ಇನ್ನೂ ಆಗಬೇಕಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಹೋರಾಟ ಮುಂದುವರೆಯಲಿದೆ ಎಂದು ಜಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಸುಧೀರ್ ಕಾಮತ್, ಅಜಿತ್ ಮಾಲ ಶೇಟ್, ಅಕ್ಷಯ ರಾವಳ ಇತರರು ಇದ್ದರು.

One thought on “ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸದ್ಯದಲ್ಲೇ ಪ್ರಾರಂಭ!

  1. ಹಣತೆಗೆ‌ ಅಭಿನಂದನೆಗಳು , ಸೂಪಾ ತಾಲೂಕಿಗೆ ಕುಡಿಯುವ ನೀರಿನ ಸುದ್ಧಿ ಪ್ರಕಟಿಸಿ ಸಿಹಿ ಸುದ್ಧಿ ನೀಡಿದ್ದಿರಿ .. ಅಭಿನಂದನೆಗಳು ಕರ್ಕಿಕೋಡಿ ಸರ್ ,

Leave a Reply

Your email address will not be published. Required fields are marked *