ಅನಂತವಾಡಿಯಲ್ಲಿ ರೇಲ್ವೇ ಗೇಟ್ ಅವೈಜ್ಞಾನಿಕ : ಮೇಲ್ಸೇತುವೆಗೆ ಗ್ರಾಮಸ್ಥರ ಆಗ್ರಹ: ಶಾಲಾ ಮಕ್ಕಳ, ರೋಗಿಗಳ ಗೋಳು ಕೇಳುವವರು ಯಾರು?

ಹೊನ್ನಾವರ: ಕರಾವಳಿಗೆ ರೇಲ್ವೆ ಹಳಿ ಬಂದಾಗ ಈ ಭಾಗದ ಜನರು ತಮ್ಮ ಬದುಕು ಇನ್ನೇನು ಉದ್ಧಾರವಾಗಿ ಹೋಯ್ತು ಅಂದುಕೊಂಡು ಕೊಂಕಣ ರೇಲ್ವೆಗೆ ರತ್ನಗಂಬಳಿ ಹಾಸಿ ಸ್ವಾಗತಿಸಿದರು. ಜನರು ಕೂಡ ಮಂಗಳೂರು, ಮುಂಬೈ, ಬೆಂಗಳೂರಿಗೆ ತಿರುಗಾಟ ಆರಂಭಿಸಿದರು.

ಸಹಜವಾಗಿಯೇ ಹಲವರ ಬದುಕಿನಲ್ಲಿ ಬೆಳಕು ಮೂಡಿತು. ಆದರೆ ಇದೇ ರೇಲ್ವೆಯಿಂದ ಕತ್ತಲೆಯಲ್ಲಿ, ಅಡಕತ್ತರಿಯಲ್ಲಿ ಸಿಲುಕಿಕೊಂಡವರು ಯಾರು?
ತಾಲೂಕಿನ ಅನಂತವಾಡಿ, ಕೋಟ, ತುಂಬೆಬೀಳು ಮಜರೆಗಳು ಕೊಂಕಣ ರೇಲ್ವೇ ಹಳಿಯಿಂದ ಹೇಳತೀರದ ಬವಣೆಗೆ ಒಳಗಾಗಿದ್ದಾರೆ. ಆದರೆ ಈ ಮಜರೆಯ ಗೋಳು ಕೇಳುವವರು ಜಾಣ ಕಿವುಡುತನ ಪರದರ್ಶಿಸುತ್ತಿದ್ದಾರೆ.
ಕಳೆದ ನ.೨ ರಂದು ಸ್ಥಳೀಯ ನೂರಾರು ಗ್ರಾಮಸ್ಥರು ಮತ್ತೊಮ್ಮೆ ಹೊನ್ನಾವರ ಪಟ್ಟಣಕ್ಕೆ ಬಂದು ಪಾದಯಾತ್ರೆ ಮೂಲಕ ತಹಸೀಲ್ದಾರ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಮನವಿ ಅರ್ಪಿಸಿದ್ದಾರೆ. ಈ ಸಂದರ್ಭದಲ್ಲಿ ‘ಹೊನ್ನಾವರ ಉಳಿಸಿ’ ಸಂಘಟನೆಯ ಸದಸ್ಯರು ಬೆಂಬಲ ನೀಡಿದ್ದರು.


ಈ ಮಜರೆಗಳಿಗೆ ಹೋಗುವ ರಸ್ತೆ ಮಧ್ಯೆ ಅವ್ಶೆಜ್ಙಾನಿಕವಾಗಿ ರೇಲ್ವೆ ಗೇಟ್ ಅಳವಡಿಸಲಾಗಿದ್ದು, ಪ್ರತಿ ರೇಲ್ವೆ ಬರುವಾಗಲೂ ರೇಲ್ವೆ ಗೇಟ್ ಮುಚ್ಚಲಾಗುತ್ತದೆ. ಈ ಊರಿನ ಮೇಲೆ ಹಾದು ಹೋಗುವ ರೇಲ್ವೆಗಳು ಒಂದೆರಡಲ್ಲ. ಬರೋಬ್ಬರಿ ಐವತ್ತಕ್ಕೂ ಹೆಚ್ಚು ರೇಲ್ವೆಗಳು ದಿನವೊಂದರಲ್ಲಿ ಈ ಭಾಗದ ಮೇಲೆ ಹಾದು ಹೋಗುತ್ತದೆ. ಇದರಿಂದ ಅನಂತವಾಡಿ, ಕೋಟ, ತುಂಬೆಬೀಳು ಬಾಗದ ಮಕ್ಕಳಿಗೆ ಪ್ರತಿದಿನ ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ, ಇದು ಸಾಲದು ಎಂಬAತೆ ಶಾಲಾ ವಾಹನಗಳೂ ಮಕ್ಕಳನ್ನು ಕರೆತರಲು ರೇಲ್ವೇ ಗೇಟ್ ದಾಟಿ ಊರ ಒಳಗೆ ಬರಲು ಹಿಂದೇಟು ಹಾಕುತ್ತಿದೆ. ಅನಿರೀಕ್ಷಿತವಾಗಿ ಯಾರಿಗಾದರೂ ಆರೋಗ್ಯ ಕೈಕೊಟ್ಟು ಚಿಂತಾಜನಕ ಸ್ಥಿತಿ ಉಂಟಾದರೆ ರೋಗಿಯನ್ನು ತಕ್ಷಣ ಪಟ್ಟಣದ ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್ಗಳು ಕೂಡ ರೇಲ್ವೇ ಗೇಟ್ ದಾಟಿ ಬರಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರಿಗೆ, ನೌಕರರಿಗೆ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಚಡಪಡಿಸುತ್ತಿದ್ದಾರೆ.

ರೇಲ್ವೇ ಗೇಟ್ ಮೇಲ್ಸೇತವೆಗೆ ಆಗ್ರಹಿಸಿ ಅನಂತವಾಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ
ಮಾತನಾಡುತ್ತಿರುವ ಹೋರಾಟ ಸಮಿತಿ ಅಧ್ಯಕ್ಷ ಗಜಾನನ ದುರ್ಗು ನಾಯ್ಕ

ಒಂದು ರೇಲ್ವೇ ಬರುವಾಗ ರೇಲ್ವೇ ಗೇಟ್ ಹಾಕಿದರೆ ಅದನ್ನು ತೆರೆಯಲು ಕನಿಷ್ಟ ಒಂದು ಗಂಟೆ ಸಮಯ
ತೆಗೆದುಕೊಳ್ಳುತ್ತದೆ. ಹೀಗಿರುವಾಗ ದಿನದಲ್ಲಿ ಐವತ್ತಕ್ಕೂ ಹೆಚ್ಚು ರೇಲ್ವೆಗಳು ಓಡಾಡುವ್ಯದರಿಂದ ಈ
ಪರಿಸ್ಥಿತಿಯ ಗಂಭಿರತೆ ಊಹಿಸಲು ಕೂಡ ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಒಂದು ದಿನದಲ್ಲಿ ಓಡಾಡುವ
ರೇಲ್ವೆಗಳ ಸಂಖ್ಯೆ ಇನ್ನೂ ಹೆಚ್ಚಾದರೆ ಹಳ್ಳಿ ಮಕ್ಕಳಗೋಳು ಕೇಳುವವವರು ಯಾರು ಎಂಬ ಪ್ರಶ್ನೆಗೆ
ಯಾರಲ್ಲೂ ಉತ್ತರವಿಲ್ಲ. ಈ ಬಗ್ಗೆ ೨೦೨೦ ರಿಂದ ಸ್ಥಳೀಯ ಗ್ರಾಮಸ್ಥರು ಊರಿನ
ಯುವಕ ಗಜಾನನ ದುರ್ಗು ನಾಯ್ಕ ಅವರನೇತೃತ್ವದಲ್ಲಿ ಒಗ್ಗಟ್ಟಾಗಿ ಈ ರೇಲ್ವೇ ಗೇಟ್‌ಗೆ
ಮೇಲ್ಸೇತುವೆ ನಿರ್ಮಿಸಿಕೊಡುವಂತೆ ಹೋರಾಟಆರಂಭಿಸುತ್ತಾರೆ. ಇಲ್ಲಿಯುವರೆಗೆ ಅದೆಷ್ಟು ಮನವಿ
ಪತ್ರಗಳನ್ನು ಕೊಂಕಣ ರೇಲ್ವೆ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳಿಗೆ, ಶಾಸಕರಿಗೆ, ಜಿಲ್ಲಾ ಉಸ್ತುವಾರಿ
ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ,ರೇಲ್ವೇ ಸಚಿವರಿಗೆ, ಪ್ರಧಾನ ಮಂತ್ರಿಗಳಿಗೆ ಪತ್ರ
ಬರೆದಿದ್ದಾರೆ ಎಂಬುದು ಲೆಕ್ಕಕ್ಕೆ ಸಿಗುತ್ತಿಲ್ಲ. ಯಾರಿಂದಲೂಉತ್ತರವಿಲ್ಲ.

ಪ್ರಧಾನಮಂತ್ರಿಗಳ ಕಾರ್ಯಾಕಲಯದಿಂದ ಅವರ ಸಹಾಯಕ ಅಧಿಕಾರಿಗಳಿಂದ
ಮರು ಓಲೆ ಬಂದಿದೆಯಾದರೂ ಅದು ಶಿಷ್ಟಾಚಾರದಪತ್ರವಾಗಿತ್ತು ಅಷ್ಟೇ. ಒಮ್ಮೆ ಮಾತ್ರ ರೇಲ್ವೇ
ಅಧಿಕಾರಿಗೆಳು ರೇಲ್ವೆ ಗೇಟ್ ಬಳಿ ಬಂದು ಕಾಟಾಚಾರದ ಸರ್ವೇ ಮಾಡಿ ಹೋಗಿದ್ದಾರೆಯೇ ಹೊರತು ಅದರಿಂದ ದಮಡಿ ಕಾಸಿನ ಪ್ರಯೋಜನವಾಗಿಲ್ಲ.ಇಚ್ಛಾಶಕ್ತಿ ಇದ್ದರೆ ತಮ್ಮ ಮನವಿಗೆ ಸ್ಪಂದಿಸಿ
ಮೇಲ್ವೇಸೇತುವೆ ಮಾಡಲು ರೇಲ್ವೇ ಇಲಾಖೆಗೆ ಅತಿ ಕಡಿಮೆವೆಚ್ಚದಲ್ಲಿ ಸಾಧ್ಯತೆ ಇದೆ. ಅದೂ ಅಲ್ಲದೇ ಇಲ್ಲಿ ಮೇಲ್ಸೇತುವೆನಿರ್ಮಿಸಲು ಯಾರದೇ ಖಾಸಗಿ ಸ್ಥಳ ಕೂಡ ಇದ್ದಿರುವುದಿಲ್ಲ. ಈ ಎಲ್ಲ ವಿಷಯವನ್ನು ಇಟ್ಟು ರೇಲ್ವೇ ಇಲಾಖೆಗೆ ಇನ್ನೊಮ್ಮೆ ಮನವಿ ಪತ್ರ ಬರೆದರೆ ಕರ್ನಾಟಕ ಸರಕಾರ ಹಣ ಹಾಕಿದರೆ ವು
ಮೇಲ್ಸೇತುವೆ ನಿರ್ಮಿಸುತ್ತೇವೆ ಎಂಬ ವಿತಂಡವಾದವನ್ನು ಜನರ ಮುಂದೆ ಇಟ್ಟು ತಮ್ಮೆಲ್ಲರ ಬಾಯಿ ಮುಚ್ಚಿಸಲು
ಪ್ರಯತ್ನಿಸುತ್ತಿದ್ದಾರೆ ಎಂದು ಅನಂತವಾಡಿ ರೇಲ್ವೇ ಮೇಲ್ಸೇತುವೆ ಹೋರಾಟ ಸಮಿತಿ ಅಧ್ಯಕ್ಷ ಗಜಾನನ
ದುರ್ಗು ನಾಯ್ಕ ‘ಹಣತೆ ವಾಹಿನಿ’ಗೆ ತಿಳಿಸಿದ್ದಾರೆ.ಜನರ ಗೋಳಿಗೆ ಸ್ಪಂದಿಸದ ಚುನಾಯಿತ
ಪ್ರತಿನಿಧಿಗಳು, ಅಧಿಕಾರಿಗಳು ತಮ್ಮ ತಮ್ಮ ಐಷಾರಾಮಿಬದುಕನಲ್ಲಿ ಮುಳುಗಿದ್ದಾರೆ ಎಂಬುದು ವಿಷಾದದ ಸಂಗತಿ.

Leave a Reply

Your email address will not be published. Required fields are marked *