ಸಂಸದ ಅನಂತ ಹೆಗಡೆ v/s ಮಂತ್ರಿ ಪ್ರಹ್ಲಾದ್ ಜೋಶಿ… ಯಾರಿಗೆ ಕೆನರಾ ಕೇಸರಿ ಟಿಕೆಟ್?

ಲೋಕಸಭಾ ಚುನಾವಣೆಗೆ ತಿಂಗಳು ಗಣನೆ ಆಗುತ್ತಿದೆ. ಯಾವ ಪಕ್ಷದಿಂದ ಯಾರು ಅಭ್ಯರ್ಥಿ
ಆಗಬಹುದೆಂಬ ಚರ್ಚೆ ಉತ್ತರ ಕನ್ನಡದ ರಾಜಕೀಯ ಹೊಳ್ಳಿ ಮೇಲೆ ಜೋರಾಗುತ್ತಿದೆ. ಪಕ್ಕದ ಉಡುಪಿ ಮತ್ತು ದಕ್ಷಿಣ ಕನ್ನಡಕ್ಕೆ ಹೋಲಿಸಿದರೆ ಉತ್ತರ ಕನ್ನಡದಲ್ಲಿ ಹಿಂದುತ್ವದ ಪ್ರಭಾವ ಅಷ್ಟಕ್ಕಷ್ಟೇ.

ಈ ಬಾರಿ ಕಾಂಗ್ರೆಸ್ ಸಿದ್ದು-ಡಿಕೆಶಿ ಸರಕಾರದ ಗ್ಯಾರಂಟಿಗಳಿAದ ಮಜಬೂತಾಗಿದೆ. ಕಾಂಗ್ರೆಸ್ ಟಿಕೆಟ್ ಯಾರಿಗೆ ದಕ್ಕುತ್ತದೆ ಎಂಬುದಕ್ಕಿoತ ಬಿಜೆಪಿ ಹಾಲಿ ಎಂ.ಪಿ. ಅನಂತಕುಮಾರ್ ಹೆಗಡೆ ಅವರಿಗೆ ಈ ಸಲ ಗೇಟ್ ಪಾಸ್ ಕೊಡುತ್ತದಾ? ಅಥವಾ ಅನಂತ ಹೆಗಡೆಯೇ ಚುನಾವಣಾ ರಾಜಕಾರಣಕ್ಕೆ ಗುಡ್ ಬೈ ಹೇಳ್ತಾರಾ? ಇಲ್ಲವೆ ಪಕ್ಕದ ಧಾರವಾಡದಲ್ಲಿ ಬಹು ಸಂಖ್ಯಾತ ಲಿಂಗಾಯತರ ಎದುರು ಹಾಕಿಕೊಂಡಿರುವ ಕೇಂದ್ರದ ಮಂತ್ರಿ ಪ್ರಹ್ಲಾದ ಜೋಶಿ ಕನ್ನಡಕ್ಕೆ ವಲಸೆ ಬರುತ್ತಾರಾ ಎಂಬ ಕುತೂಹಲ ಕೆರಳಿದೆ.


ವಿಭಜಕ ಚುನಾವಣಾ ರಾಜಕಾರಣದಿಂದಲೇ ಆರು ಬಾರಿ
ಸಂಸದರಾಗಿರುವ ಅನಂತ್ ಹೆಗಡೆಯಿಂದ ಜಿಲ್ಲೆ ಮೂರು
ದಮ್ಡಿ ಪ್ರಯೋಜನವಾಗಲಿಲ್ಲ ಎಂಬುದು ಜಿಲ್ಲೆಯಲ್ಲಿರುವ
ಸಾಮಾನ್ಯ ಅಭಿಪ್ರಾಯ. ಬೆಳಗಾವಿ ಜಿಲ್ಲೆಯ ಖಾನಾಪುರ
ಮತ್ತು ಕಿತ್ತೂರು ಅಸೆಂಬ್ಲಿ ಕ್ಷೇತ್ರಗಳನ್ನು
ಒಳಗೊಂಡಿರುವ ಉತ್ತರ ಕನ್ನಡ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಜನರಿಗೆ ಸದಾ ನಾಟ್ ರೀಚೆಬಲ್ ಆಗಿರುವ ಅನಂತ
ಹೆಗಡೆ ಬಗ್ಗೆ ಅಸಮಾಧಾನವಿದೆ. ದೇಶದ ಜೀವ- ಜೀವಾಳವಾಗಿರುವ ಸಂವಿಧಾನವನ್ನೇ ಬದಲಾಯಿಸುವಮ
ಮಾತು ವಿಪ್ರ ಸಮ್ಮೇಳನದಲ್ಲಿ ಹೇಳಿ ಪ್ರಧಾನಿ ಮೋದಿಯವರನ್ನು ಮುಜುಗರಕ್ಕೀಡು ಮಾಡಿದ್ದ ಅನಂತ್,
ಮತ್ತೊAದೆಡೆ ಸಂಸತ್ತಿನಲ್ಲಿ ತನ್ನ ಲಂಗುಲಗಾಮಿಲ್ಲದ ನಾಳಿಗೆಯ ಹೊರಳಾಟದ ಪ್ರಮಾದಕ್ಕೆ ಕ್ಷಮೆ ಯಾಚಿಸಿ ತನ್ನನ್ನು ಮತ್ತೆ ಮತ್ತೆ ಗೆಲ್ಲಿಸಿದ ಉತ್ತರ ಕನ್ನಡಿಗರು ತಲೆ ತಗ್ಗಿಸುವಂತೆ ಮಾಡಿದ್ದರು.


ಬ್ರಿಟಿಷರ ಸಹಕಾರದಿಂದಲೇ ಗಾಂಧೀಜಿ ಸ್ವಾತಂತ್ರö್ಯ ಚಳುವಳಿಯ
ನಾಟಕವಾಡುತ್ತಿದ್ದರೆಂದು ಮೂದಲಿಸಿದ್ದ ಅನಂತ್
ಜಾತ್ಯತೀತರೆAದರೆ ತಂದೆ ಯಾರೆಂದು ಗೊತ್ತಿಲ್ಲದವರು
ಎಂಬ ‘ಸಂಶೋಧನೆ’ ನಡೆಸಿದ್ದರು. ಜಾತ್ಯತೀತ ಪದ
ಸಂವಿಧಾನದಿoದ ತೆಗೆಯುತ್ತೇವೆ ಎಂದು ಹೇಳಿದ್ದರು.
ತನ್ನ ಅಸಂಭದ್ಧ ಮಾತುಗಾರಿಗೆ ವಿರುದ್ಧ ಪ್ರತಿಭಟಿಸಿದ
ದಲಿತರಿಗೆ ನಾಯಿಗಳೆಂದು ಕೇಂದ್ರ
ಸಚಿವನಾಗಿದ್ದುಕೊoಡೇ ಬೈದು ಸುದ್ದಿಯಾಗಿದ್ದರು. ಸಂಘ ಪರಿವಾರಕ್ಕೂ ಅರಗಿಸಿಕೊಳ್ಳಲಾಗದಷ್ಟು
ಕಲಬೆರಕೆಯಾಗಿರುವ ಅನಂತ್ ಹಿಂದುತ್ವದ ಅಬ್ಬರಕ್ಕೆ ಬೆಚ್ಚಿಬಿದ್ದ ಮೋದಿ ೨೦೧೯ರಲ್ಲಿ ಗೆದ್ದಾಗ ಅವರನ್ನು ಮತ್ತೆ ಮಂತ್ರಿ ಮಾಡುವ ರಿಸ್ಕ್ ತೆಗೆದುಕೊಳ್ಳಲಿಲ್ಲ. ಅನಂತ್ ಮಂತ್ರಿಗಿರಿ ತಪ್ಪಲು ಇದೊಂದೇ ಕಾರಣವಲ್ಲ. ಕರ್ನಾಟಕದ ಯೋಗಿ, ಮುಂದಿನ ಕೇಸರಿ ಪಕ್ಷದ ಮುಖ್ಯಮಂತ್ರಿ ಎಂದೆಲ್ಲ ಒಂದು ಬಣದಿಂದ ತಾರೀಪು ಮಾಡಲಾಗುತ್ತಿದ್ದ ಅನಂತ್‌ಗೆ ಬಿಜೆಪಿಯಲ್ಲಿನ ಬ್ರಾಹ್ಮಣ ಲಾಬಿ ವಿರುದ ಂiÀÁವಾಗ ರಾಜ್ಯ ಬಿಜೆಪಿ ಸಂಪೂರ್ಣವಾಗಿ ರಾಷ್ಟಿಯ
ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸುಪರ್ದಿಗೆ ಸೇರಿತೋ ಆಗ ಅವರ ಸ್ವಜಾತಿ ಮಿತ್ರ ಪ್ರಹ್ಲಾದ್ ಜೋಶಿ ಪ್ರಭಾವ ಹೆಚ್ಚಾಯಿತು. ಹಾಗೆ ನೋಡಿದರೆ ಅನಂತ್, ಪ್ರಹ್ಲಾದ್ಜೋಶಿಗಿಂತ ಸಿನಿಯರ್. ೧೯೯೦ರ ದಶಕದಲ್ಲಿ ಒಂದಿಡೀ ವರ್ಷ ಕೋಮು ಕಿಚ್ಚಲ್ಲಿ ಹೊತ್ತಿ ಉರಿದಿದ್ದ ಭಟ್ಕಳವನ್ನು ‘ಕರ್ಮ’ಭೂಮಿ ಮಾಡಿಕೊಂಡಿದ್ದ ಅನಂತ್ ‘ಕ್ರಾಂತಿಕಾರಿ’ ಮತೀಯ ಮುಂದಾಳಾಗಿ ಅವತರಿಸಿದ್ದು ಜಿಲ್ಲೆಯ ಕೋಮು ಕ್ರೌರ್ಯದ ಇತಿಹಾಸದಲ್ಲಿ ಅಚ್ಚಳಿಯದಂತೆ ದಾಖಲಾಗಿದೆ. ಪೊಲೀಸ್ ಸರ್ಪಗಾವಲು ಇರುವಾಗಲೇ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ನುಗ್ಗಿ ಧ್ವಜ ಹಾರಿಸಿದ ಪ್ರಖರ ಹಿಂದುತ್ವದ ಇಮೇಜ್ ಇತ್ತು. ಸಂಘ ಪರಿವಾರದ ಶೂದ್ರರು ಈದ್ಗಾದಲ್ಲಿ ಧ್ವಜ ಹಾರಿಸಿದ್ದು ಬಿಲ್ಲವ (ಈಡಿಗ)ರ ಸುರತ್ಕನ ಸತ್ಯಜಿತ್ಸು ರತ್ಕಲ್ ಅಂತಾರೆ. ಏನೇ ಇದ್ದರೂ, ಕೇಸರಿ ಎಂಪಿ ಟಕೆಟ್

ಪಡೆಯುವಷ್ಟರ ಮಟ್ಟಿನ ದೊಡ್ಡ ಕ್ರೆಡಿಟ್ ಅಂತೂ ಅನಂತ್ ಹೆಗಡೆಗೆ ಸಿಕ್ಕಿತು. ಪ್ರಹ್ಲಾದ್ ಜೋಶಿ ಬಿಡಿ,ಮೋದಿಜೀಗಿಂತಲೂ ತಾನು ಬಿಜೆಪಿಯಲ್ಲಿ ಹಿರಿಯನೆಂಬ ಹೆಮ್ಮೆ-ಹಮ್ಮು ಅನಚಿತ್‌ಗಿದೆ ಎಂಬ
ಗುಸುಗುಸು ಸ್ಥಳೀಯ ಬಿಜೆಪಿ ವಲಯದಲ್ಲಿದೆ. ಈ ಮೇಲರಿಮೆಯಿಂದಾಗಿಯೇ ಅನಂತ್‌ಗೆ ನಾಗಪುರದ ಕೇಶವ
ಶಿಲ್ಪದ ಕೃಪಾಶೀರ್ವಾದವಿದ್ದರೂ ಬಿಜೆಪಿಯ ಕೇಂದ್ರನಾಯಕತ್ವದ ಹತ್ತಿರ ಹೋಗಲಾಗಲಿಲ್ಲ. ಆದರೆ ದಿವಂಗತ
ಅನoತ್‌ಕುಮಾರ್ ಶಾಸ್ತಿçಯವರ ಜುಬ್ಬಾದ ಚುಂಗು ಹಿಡಿದುಕೊoಡು ದಿಲ್ಲಿಯ ಕೇಸರಿ ಕೋಟೆಯ ಅಧಿಕಾರ
ಅಂತಃಪುರ ಪ್ರವೇಶಿಸಿದ್ದ ಪ್ರಹ್ಲಾದ್ ಜೋಶಿ ಗಾಢ ನಂಟು ಬೆಳೆಸಿಕೊಂಡರು; ‘ಗುರು’ ಅನಂತಕುಮಾರ ಶಾಸ್ತ್ರೀಯ
ನಿಧನದ ನಂತರ ಬ್ರಾಹ್ಮಣ ಕೋಟಾದಲ್ಲಿ ಏಕಮೇ ದ್ವಿತೀಯರಾದರು! ಬಿ.ಎಲ್.ಸಂತೋಷ್ ಯುಗದಲ್ಲಂತೂ
ಜೋಶಿ ವ್ಯವಸ್ಥಿತವಾಗಿ ಅನಂತ್ ಹೆಗಡೆಯವರನ್ನು ಮೂಲೆ ಗುಂಪು ಮಾಡಿದರೆಂಬ ಮಾತು ಕೇಳಿಬರುತ್ತಿದೆ. ಜೋಶಿ
ಕೇಂದ್ರದ ಸಂಸದೀಯ ವ್ಯವಹಾರದಂಥ ಆಯ ಕಟ್ಟಿನ ಸಚಿವನಾಗಿ ಪ್ರಧಾನಿ ಮೋದಿಯ ಆಪ್ತಬಳಗ
ಸೇರಿದ ಮೇಲಂತೂ ದಿಲ್ಲಿ ಮತ್ತು ಬೆಂಗಳೂರಿನ ಬಿಜೆಪಿ ಬಿಡಾರದಲ್ಲಿ ಅನಂತ್ ಹೆಗಡೆಯನ್ನು ಕ್ಯಾರೆ ಎನ್ನುವವರೇ
ಇಲ್ಲದಾಯಿತು ಎಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ. ಉತ್ತರ ಕನ್ನಡದಲ್ಲೂ ಅನಂತ ಹೆಗಡೆ ಅವರ
ವರ್ಚಸ್ಸು ಕುಗ್ಗಿಸುವ ತಂತ್ರಗಾರಿಕೆ ಜೋಶಿ ಹೆಣೆದಿದ್ದರು. ಲಾಗಾಯ್ತಿನಿಂದ ಅನಂತ್ ಹೆಗಡೆಗೆ ಟಾಂಗ್ ಕೊಡುತ್ತ
ಬಂದಿದ್ದ ಮಾಜಿ ಶಾಸಕ ಕಾಗೇರಿ ವಿಶ್ವೇಶ್ವರ ಹೆಗಡೆಯವರನ್ನು ಜೋಶಿ ಬಳಸಿಕೊಂಡರು. ವೈದ್ಯರಿರಲಿ,
ಅಧಿಕಾರಿಗಳಿರಲಿ, ಪತ್ರಕರ್ತರಿರಲಿ, ಸ್ವಪಕ್ಷದ ಜಿಲ್ಲಾ ಅಧ್ಯಕ್ಷರಿರಲಿ ಯಾರಿಗೆ ಬೇಕಿದ್ದರೂ ಕಪಾಳಮೋಕ್ಷ
ಮಾಡಿ ಅಥವಾ ಹಲ್ಲೆ ಮಾಡಿ ಮೋಕಳಿಕ್ ಆಗುವ ಅನಂತ್ಹೆ ಗಡೆಯನ್ನು ಕಾಗೇರಿ ಒಬ್ಬರು ಬಿಟ್ಟರೆ ಬೇರೆ ಯಾರೂ

ಎದುರು ಹಾಕಿಕೊಳ್ಳುವ ಧೈರ್ಯ ತೋರಿಸಿದ್ದಿಲ್ಲ. ಈ ಕಾಗೇರಿ ಹಿಡಿದುಕೊಂಡೇ ಜೋಶಿ ಜಿಲ್ಲೆಯಲ್ಲಿ ‘ಆಟ’ ಆಡುತ್ತಿದ್ದರು. ೧ ಸೆಪ್ಟೆಂಬರ್ ೨೦೧೫ರಂದು ಕುಮಟಾದ ಬರ್ಗಿ ಬಳಿ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಉರುಳಿ ಹಲವು ಸಾವು-ನೋವಾಗಿತ್ತು. ಸಾವಿಗೀಡಾಗಿದ್ದವರಲ್ಲಿ ಬಿಜೆಪಿ ತಾಲೂಕು ಸಮಿತಿಯ ಮಹಿಳಾ ಪದಾಧಿಕಾರಿಯೂ ಒಬ್ಬರಿದ್ದರು. ಆದರೂ ಅನಂತ್ ದುರಂತ ಸ್ಥಳಕ್ಕೆ ಬರಲಿಲ್ಲ. ನೊಂದವರಿಗೆ ಸ್ಪಂದಿಸಿ ಓರ್ವ ಸಂಸದನ ಹೊಣೆಗಾರಿಕೆ ನಿಭಾಯಿಸಲಿಲ್ಲ್. ಈ ಸಂದರ್ಭವನ್ನು ಪ್ರಹ್ಲಾದ್ ಜೋಶಿ ಉಪಯೋಗಿಸಿಕೊಂಡಿದ್ದರು. ಅಂದು ಸಂಸತ್‌ನ ಪೆಟ್ರೋಲಿಯಂ ಸಮಿತಿಯಲ್ಲಿದ್ದ ಜೊಶಿ ಬರ್ಗಿಗೆ ಬಂದಿದ್ದರು. ಸ್ಥಳೀಯ ಸಂಸದ ಉದಾಸೀನದ ನಡವಳಿಕೆಯನ್ನು ಪರೋಕ್ಷವಾಗಿ ಎತ್ತಿ ಆಡಿದ್ದರು.

ಬಹುಶಃ ಅಚಿದೇ ಜೋಶಿ ಮುಂದೊಂದು ದಿನ ಅನಂತ್ ಹೆಗಡೆಗೆ ಕೋಕ್ ಕೊಟ್ಟು ಉತ್ತರ ಕನ್ನಡದಿಂದ ಸಂಸದನಾಗುವ ದೂರಾಲೋಚನೆ ಹಾಕಿದ್ದರೇನೋ ಎಂಬ ಅನುಮಾನ ಇಂದಿನ ಆತನ ವಲಸ ಇರಾದೆ ಹುಟ್ಟು ಹಾಕಿದೆ ಎಂದು ಬಿಜೆಪಿಯರೆ ಗುಸುಗುಡುತ್ತಾರೆ. ಮಾಜಿ ಸಿಎಂ- ಲಿಂಗಾಯತ ಸಮುದಾಯದ ಪ್ರಬಲ ಮುಂದಾಳು ಜಗದೀಶ ಶೆಟ್ಟರ್‌ರನ್ನು ಎದುರು ಹಾಕಿಕೊಂಡಿರುವ ಜೊಶಿಗೆ ಧಾರವಾಡದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬರುವ ಧೈರ್ಯವಿಲ್ಲದಾಗಿದೆ. ಸ್ವಜಾತಿ ಬ್ರಾಹ್ಮಣರು ಜಾಸ್ತಿಯಿರುವ ಉತ್ತರ ಕನ್ನಡ ಮತ್ತು ಹಿಂದುತ್ವದ ಸೆಲೆತದ ಖಾನಾಪುರ, ಕಿತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿರುವ್ಯದರಿಂದ ಕೆನರಾ ಜೋಶಿಯಲ್ಲಿ ಆಸೆ-ಕನಸು ಮೂಡಿಸಿದೆ ಎನ್ನಲಾಗುತ್ತಿದೆ. ಅನಂತ್‌ಗೆ ಕೇಸರಿ ಟಿಕೆಟ್ ತಪ್ಪಿಸಲೇಬೇಕೆಂದರೆ ಜೋಶಿ-ಸಂತೋಷ್ ಕೂಟಕ್ಕೇನೂ ಕಷ್ಟದ ಕೆಲಸವೇನಲ್ಲವೆಂದು ವ್ಯಾಖ್ಯಾನಿಸಲಾಗುತ್ತಿದೆ. ಪಕ್ಷಕ್ಕೆ ಡ್ಯಾಮೇಜು ಮಾಡುವ ಹುಚ್ಚು ಹಿಂದುತ್ವ, ಕ್ಷೇತ್ರದಲ್ಲಿರುವ ಪ್ರಬಲ ಎನ್ಟಿಕಂಬೆನ್ಸ್ ಮತ್ತು ಕೇಂದ್ರದ ಕೇಸರಿ ನಾಯಕತ್ವದ ತಾತ್ಸಾರದಿಂದ ಕಳೆ ಗುಂದಿರುವ ಅನಂತ್ ಹೆಗಡೆಗೆ ಟಿಕೆಟ್ ಕೊಟ್ಟರ ಕಷ್ಟ ಎಂಬ ಆತಂಕವೂ ಹೈಕಮಾಂಡ್ ಮಟ್ಟದಲ್ಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಾನು ಹೇಳಿದವರಿಗೆ ಟಿಕೆಟ್ ನಿರಾಕರಸಿದ್ದರಿಂದ ಕೆರಳಿದ್ದ ಅನಂತ್ ಸಾಕ್ಷಾತ್ ಪ್ರಧಾನಿ ಮೋದಿಯಂಥ ಮೋದಿಯೇ ಅಂಕೋಲೆಗೆ ಪ್ರಚಾರಕ್ಕೆಂದು ಬಂದರೂ ಧಿಕ್ಕರಿಸಿ ಗೈರಾಗಿದ್ದರು.

ಇದೆಲ್ಲದರಿಂದ ಅನಂತ್ ಪಕ್ಷಕ್ಕೆ ಬೇಡದ ಪೇಡೆಯಂತಾಗಿದ್ದಾರೆ ಎಂದು ಅವರ ವಿರೋಧಿಗಳು ಹೇಳುತ್ತಾರೆ. ಇದಕ್ಕೆ ಸಾಮಾನಂತರವಾಗಿ ಅನಂತ್‌ಗೆ ಮೋದಿ-ಶಾ ರ ಹುಸಿ ಹಿಂದುತ್ವದ ಬಿಜೆಪಿಯ ಬಗ್ಗೆ ಬೇಸರ ಬಂದಿದೆ. ಅಧಿಕಾರಕ್ಕಾಗಿ ಸಂಘಪರಿವಾರದ ಕಟ್ಟರ್ ಹಿಂದುತ್ವದ ಬದ್ಧತೆಯಿಲ್ಲದ ಯಾವ್ಯಾವುದೋ ಪಕ್ಷದ ಕಾಂಜಿಪಿಂಜಿಗಳನ್ನೆಲ್ಲ ಪಾರ್ಟಿಗೆ ಸೇರಿಸಿಕೊಳ್ಳುವುದು ಸೇರದು. ಆರು ಬಾರಿ ಸಂಸದನಾಗಿರುವ ತನಗೆ ಪಕ್ಷದಲ್ಲಿ ಸ್ಥಾನ-ಮಾನ ಎರಡೂ ಕೊಡದಿರುವುದು ಅನಂತ್‌ಗೆ ಕೋಪ ಬರಲು ಕಾರಣ; ಇದೆಲ್ಲಕ್ಕಿಂತ ಮುಖ್ಯವಾಗಿ ಬಿಸಿಲಿನಲ್ಲಿ ನಿಂತು ಕೊಳ್ಳಲಾಗದಂಥ ಕಾಯಿಲೆಯೊಂದು ಕಾಡುತ್ತಿದೆ. ಹೀಗಾಗಿ ಚುನಾವಣೆಗೆ ನಿಲ್ಲುವ ಆಸಕ್ತಿ ಇಲ್ಲದಾಗಿದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ..

ಇಲ್ಲವಾಗಿದೆ. ಹಾಗೆಯೇ ತನಗೇನಾದರೂ ಅವಮಾನಕರವಾಗಿ ಖಡ್ಡಾಯ ನಿವೃತ್ತಿಗೆ ಪ್ರಹ್ಲಾದ್ ಜೋಶಿ, ಸಂತೋಷ್ ಮತ್ತು ಕಾಗೇರಿ ಹೆಗಡೆಗಳು ಹವಣಿಸಿದರೆ ಟಿಕೆಟ್ ತರುವ ಹಠಕ್ಕೆ ಅನಂತ್ ಬಿದ್ದರೂ ಅಚ್ಚರಿಯೇನಿಲ್ಲ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.
ಈ ಬ್ರಾಹ್ಮಣ ಬಣಗಳ ಟಿಕೆಟ್ ಕಟಿಪಿಟಿ ನಡುವೆ ಜಿಲ್ಲಾ ಬಿಜೆಪಿ ಹಿಂದುಳಿದವರು ಈ ಸಲ ಶೂದ್ರರಿಗೆ ಅವಕಾಶ ಕೊಡುವಂತೆ ಕೇಳುತ್ತಿದ್ದಾರೆ. ವಿಶೇಷವಾಗಿ ಜಿಲ್ಲೆಯ ಬಹುಸಂಖ್ಯಾತ ಸಮುದಾಯದಲ್ಲಿ ಒಂದಾದ ಹಳೆಪೈಕ ದೀವರು ಟಿಕೆಟ್ ಕ್ಲೇಮ್ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ದೀವರಿಗೆ ಮರ್ಯಾದೆಯಿಂದ ನಡೆಸಿಕೊಂಡಿಲ್ಲವೆಂಬ ಅಸಮಾಧಾನವಿದೆ. ಈ ಆಕ್ರೋಶ ಶಿರಸಿಯಲ್ಲಿ ಕಾಗೇರಿಯ ಸಾಮ್ರಾಜ್ಯ ಪತನಕ್ಕೂ ಹೇತುವಾಯಿತು. ದೇವರಾಯರ ಎಂಪಿಗಿರಿ ನಂತರ ಅಖಂಡವಾಗಿ ಬಿಜೆಪಿ ಬೆನ್ನಿಗೆ ನಿಂತಿದ್ದ ದೀವರಿಗೀಗ ಭ್ರಮನಿರಸನವಾಗಿದೆ. ಗಂಟಿ(ಜಾನುವಾರು) ಗೊಟಾವಳಿಗೆ ಹಿಂದುಳಿದ ವರ್ಗದ ಹಡುಗರಿಗೆ ಹಚ್ಚಿ, ಮೇಲ್ವರ್ಗದ ಹುಡುಗರು ಇಂಜಿನಿಯರಿಂಗ್ , ಮೆಡಿಕಲ್ ಮುಂತಾದ ಉನ್ನತ ಶಿಕ್ಷಣಕ್ಕೆ ಹೋಗುವಂತೆ ನೋಡಿಕೊಂಡ ಮೋಸಗಾರಿಕೆ ಬಗ್ಗೆ ಈಗೀಗ ಶೋಷಿತ ಸಮುದಾಯಕ್ಕೆ ಜ್ಞಾನೋದಯವಾಗುತ್ತಿದೆ. ಅನಂತ್ ಹೆಗಡೆಯನ್ನು ನಂಬಿ ಗಂಟಿ ತಂಟೆಗೆ ಹೋಗಿದ್ದ ಕುಮಟಾ ಸೂರಜ್ ಸೋನಿ ತಿಂಗಳುಗಟ್ಟಲೆ ಜೈಲುಪಾಲಾಗಬೇಕಾಗಿ ಬಂದಿತ್ತು. ಧರ್ಮ ರಕ್ಷಣೆಯ ಉದ್ದುದ್ದ ವ್ಯಾಖ್ಯಾನ ಬಿಗಿಯುವ ಅನಂತ್ ಹೆಗಡೆಯಿಂದ ಒಬ್ಬೇ ಒಬ್ಬ ಬ್ರಾಹ್ಮಣ ಮಾಣಿಯನ್ನು ಜೈಲಿಗೆ ಹೋಗುವಂಥ ಹಿಂದುತ್ವದ ಮಿಲಿಟಂಟ್ ಮಾಡಲೇಕಾಗಲಿಲ್ಲ ಏಕೆಂದು ಪ್ರಜ್ಞಾವಂತ ಶೂದ್ರರೀಗ ತಲೆ ಕೆಡಿಸಿಕೊಂಡಿದ್ದಾರೆ.

ಕ್ಷೇತ್ರದ ಪ್ರಗತಿ, ರೈತ-ತೊಟಿಗ-ಮೀನುಗಾರ ಹಿತದ ಚಿಂತನೆ ಅನಂತ್ ಹೆಗಡೆ ಮಾಡಿದ ಕುರುಹುಗಳ್ಯಾವುದೂ ಕಾಣಿಸದು. ಅಗರ್‌ವುಡ್, ವೆನಿಲಾದಿಂದ ತೋಟಿಗರು ಅಭಿವೃದ್ಧಿ ಮಾಡುತ್ತೇನೆ ಎಂದರು, ಕರಾವಳಿಯಲ್ಲಿ ಬೃಹತ್ ವಾಣಿಜ್ಯ ಬಂದರುಗಳನ್ನು ಕಟ್ಟಿ ಪ್ರಗತಿ ಸಾಧಿಸದೇ ವಿಶ್ರಮಿಸುವುದಿಲ್ಲ ಎಂದರು, ಹೊನ್ನಾವರ ಬೆಸ್ತರ ಹುಡುಗ ಪರೇಶ್ ಮೇಸ್ತನ ಚೆಲ್ಲಿದ ಹನಿ ರಕ್ತಕ್ಕೂ ನ್ಯಾಯ ಕೊಡಿಸುತ್ತೇನೆ ಎಂದರು. ಕೇಂದ್ರ ಬಿಜೆಪಿ ಸರಕಾರದ ಅಧಿನದಲ್ಲಿರುವ ಸಿಬಿಐ ಬಿ-ರಿಪೋರ್ಟ್ ಹಾಕಿದರೂ ಮಾತಾಡದ ಅನಂತ್ ಹೆಗಡೆಯದು ಮಾಳಕ್ಕೆ ಮುಟ್ಟದ ಸೂಡಿ ತೋರಿಸಿದ್ದೇ ಹೆಚ್ಚೆಂಬ ಮಾತು ಜಿಲ್ಲೆಯಲ್ಲಿ ಕೇಳಿ ಬರುತ್ತಿದೆ. ಶೂದ್ರರ ದಿಕ್ಕು ತಪ್ಪಿಸುವ ಹಿಂದುತ್ವಕ್ಕೆ ಜಮಾಯಿಸದ್ದೆಲ್ಲವನ್ನೂ ‘ದೇಶದ್ರೋಹ’ವೆಂದು ಪರಿಗಣಿಸುವ ಅನಂತ್ ಮತ್ತಿಘಟ್ಟದ ಬಳಿ ಅರಣ್ಯ ಕಬಳಿಸಿ ಜಬರ್ದಸ್ತ್ ಅಡಿಕೆ ತೋಟ ಮಾಡಿಕೊಂಡಿರುವುದು ಯಾವ ಸೀಮೆಯ ದೇಶಪ್ರೇಮ? ಇಸ್ಲಾಮ್ ಅಳಿಯದ ಹೊರತು ಭೂಮಂಡಳಕ್ಕೆ ಶಾಚಿತಿ-ನೆಮ್ಮದಿ ಸಿಗದೆಂದಿದ್ದ ಅನಂತ್ ಅರಬ್ ದೇಶಗಳಿಂದ ತನ್ನ ಹೆಂಡತಿಯ ಯಜಮಾನಿಕೆಯ ಕದಂಬ ಸಂಸ್ಥೆಗೆ ಆಸ್ಪಾಲ್ಟ್ (ಡಾಂಬರ್) ಆಮದು ಮಾಡಿಕೊಂಡು ಕಂಟ್ರಾಕ್ಟರ್‌ಗಳಿಗೆ ಮಾರುವುದು ಧರ್ಮ ರಕ್ಷಣೆಯಾ? ಎಂಬ ಜಿಜ್ಞಾಸೆ ಜಿಲ್ಲೆಯಲ್ಲಿದೆ. ಕೆಡಿಸಿಕೊಂಡಿದ್ದಾರೆ.

ಇಂಥ ಋಣಾತ್ಮಕ ಅಂಶಗಳಿಂದ ಹೈರಾಣಾಗಿರುವ ಅನಂತ್ ಹೆಗಡೆಗೆ ಕೇಸರಿ ಟಿಕೆಟ್ ಕೊಟ್ಟರೆ ಗೆಲುವು ಕಷ್ಟವೆಂದು ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ ದೊಡ್ಡವರ ತಲೆ ತುಂಬುತ್ತಿದ್ದಾರಂತೆ . ಈ ನಡುವೆ ಮಾಜಿ ಮಂತ್ರಿ ಕಾಗೇರಿ, ಪತ್ರಕರ್ತ ಹರಿಪ್ರಸಾದ್ ಕೋಣೆಮನೆ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಸುನಿಲ್ ನಾಯ್ಕ, ಕೋಸ್ಟ್ ಯುಫೋರ್ಡ್ ನಿವೃತ್ತ ಅಧಿಕಾರಿ ಮನೋಜ್ ಬಾಡ್ಕರ್, ಬಿಜೆಪಿ ಜಿಲ್ಲಾ ವಕ್ತಾರ ನಾಗರಾಜ ನಾಯಕ ಮುಂತಾದವರು ಕೇಸರಿ ಎಂಪಿ ಆಗುವ ಆಸೆಯಲ್ಲಿ ತಂತಮ್ಮ ದೇವಪತ್ರಗಳನ್ನು ಹಿಡಿದುಕೊಂಡು ಕಸರತ್ತು ನಡೆಸಿದ್ದಾರೆಂಬ ಸುದ್ದಿ ಬಿಜೆಪಿ ಬಿಡಾರದಿಂದ ಹೊರಬರುತ್ತಿದೆ. ಯಾರ ಹಣೆ ಬರಹ ಯಾರು ಬಲ್ಲರು ?

ವರದಿಗಾರರು
ಶೂದ್ರ ಶಂಭೂಕ

Leave a Reply

Your email address will not be published. Required fields are marked *