ಅಂತೂ ಗಜಪ್ರಸವದಂತೆ ರಾಜ್ಯ ಬಿಜೆಪಿ ಘಟಕಕ್ಕೆಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರ ಶಾಸಕಬಿ.ವೈ.ವಿಜಯೇಂದ್ರ ಅವರನ್ನು ಆ ಪಕ್ಷದ ಹೈಕಮಾಂಡ್ ನೇಮಕ ಮಾಡಿದೆ ಅನ್ನುವುದಕ್ಕಿಂತ ‘ಹೇರಿದೆ’ ಅಂದರೆಹೆಚ್ಚು ಸೂಕ್ತ. ಹಾಗಾಗಿ ವಿಜಯೇಂದ್ರ ದೊಡ್ಡ ‘ಶಿಕಾರಿ’ ಯನ್ನೇ ಹೊಡೆದೆ ಅಂತ ಎದೆಯುಬ್ಬಿಸಿ ಹೋದಲ್ಲಿ ಬಂದಲ್ಲಿ ಎಪಲ್ ಹಾರ ಹಾಕಿಸಿಕೊಳ್ಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಖ್ಮರ್ಚಿ ಮೇಲೆ ಪಕ್ಷದ ಅತಿರಥಮಹಾರಥರೆಲ್ಲ ಟವೆಲ್ ಹಾಕಿಟ್ಟಿದ್ದರು. ಆದರೆ ಯಡಿಯೂರಪ್ಪ ಅದೇ ಟವೆಲ್‌ನಿಂದ ಕುರ್ಚಿ ಒರೆಸಿ ಮಗನನ್ನು ಕುಳ್ಳಿಸಿದ್ದಾರೆ. ಇದರಿಂದಾಗಿ ಪೆಚ್ಚಾದ ಅತಿರಥ ಮಹಾರಥರೆಲ್ಲ ಮುಖ ಊದಿಸಿಕೊಂಡು ದಿಕ್ಕು ದಿಕ್ಕಗೆ ಮುಖ ಹಾಕಿ ಕುಳಿತಿದ್ದಾರೆ. ಪ್ರಮುಖವಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದಾಜೆ, ಸಿ.ಟಿ.ರವಿ, ಆರ್.ಅಶೋಕ್ ಅವರ ಹೆಸರು ಕೇಳಿ ಬಂದಿತ್ತಾದರೂ, ರವಿ ತುಂಬ ದೊಡ್ಡ ಮಟ್ಟದಲ್ಲಿ ಲಾಬಿ ಮಾಡಿದ್ದರು. ಆದರೆ ಯಡಿಯೂರಪ್ಪ ರಚ್ಚೆ ಹಿಡಿದಿದ್ದರಿಂದ ಅವರ ಮಾತನ್ನು ತಳ್ಳಿ ಹಾಕುವ ಧೈರ್ಯ ಹೈಕಮಾಂಡ್ನಾ ಯಕರಿಗೆ ಇರಲಿಲ್ಲ. ಹಾಗೆ ನೋಡಿದರೆ ರವಿ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನಿಬಾಯಿಸುವ ಧಾಡಸಿತನ ಇದ್ದೇ ಇತ್ತು. ಆದರೆ ವಿಜಯೇಂದ್ರ ವರ್ಚಸಿದ್ದಿನ ಎದುರು ರವಿ ಮಂಕಾದರು.
ಎರಡು ವರ್ಷಗಳ ಹಿಂದೆ ಯಡಿಯೂರಪ್ಪ ಪಕ್ಷದ ವೇದಿಕೆಯಲ್ಲಿ ಒಂದು ಮಾತನ್ನು ತುಂಬ ಮಾರ್ಮಿಕವಾಗಿ
ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳುಲೇ ಬೇಕು. ‘ರಾಜ್ಯದಲ್ಲಿಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಮೋದಿಯವರ
ಹೆಸರೊಂದೇ ಕೆಲಸಕ್ಕೆ ಬರುವುದಿಲ್ಲ’ ಅಂತ ಹೇಳಿದ ಯಡಿಯೂರಪ್ಪ ಮುಂದಿನ ಮಾತನ್ನು ಮುಗುಮ್ಮಾಗಿ
ಇಟ್ಟಿದ್ದರು. ಅರ್ಥಾತ್ ತನ್ನನ್ನು ಬಿಟ್ಟು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ಕಷ್ಟಕರ ಎಂಬ
ಸoದೇಶವನ್ನು ಹೈಕಮಾಂಡಿಗೆ ರವಾನಿಸಿದ್ದರು. ಮುಖ್ಯಮಂತ್ರಿ ಸ್ಥಾನದಿಂದ ಒತ್ತಾಯದಿಂದ
ಕೆಳಗಿಳಿಸಿದ್ದರಿoದ ಬೂದಿ ಮುಚ್ಚಿದ ಕೆಂಡದoತಿದ್ದ ಯಡಿಯೂರಪ್ಪ ಆ ದಿನ ಮೋದಿ ಹೆಸರೊಂದೇ ಕೆಲಸಕ್ಕೆ
ಬರಲ್ಲ ಎಂಬುದನ್ನು ತುಂಬ ಜಾಣತನದಿಂದ ತೇಲಿ ಬಿಟ್ಟಿದ್ದರು. ಅದರ ಫ್ರತಿಫಲವೇ ಇಂದು ವಿಜಯೇಂಧ್ರ ರಾಜ್ಯಾಧ್ಯಕ್ಷ ಆದದ್ದು. ಯಡಿಯೂರಪ್ಪ ತನ್ನ ಛಾಪನ್ನು ಎಷ್ಟರ ಮಟ್ಟಿಗೆ ಒತ್ತಿದ್ದಾರೆ ಅಂದರೆ ತಮ್ಮ ಜೀವಿತಾವಧಿಯಲ್ಲೇ ಮಗನನ್ನು ತನ್ನ ಕ್ಷೇತ್ರದ ಶಾಸಕ ಸ್ಥಾನದಲ್ಲಿ ಕುಳ್ಳಿಸಬೇಕು ಎಂದು ಹೈಕಮಾಂಡ್ ಅನುಮತಿ ಇಲ್ಲದೇ ಶಿಕಾರಿಪುರದಲ್ಲಿ ತನ್ನ ಉತ್ತರಾಧಿಕಾರಿ ವಿಜಯೇಂದ್ರ ಎoಬುದನ್ನು ಘಂಟಾಘೋಷವಾಗಿ ಸಾರಿದ್ದರು. ಇಷ್ಟಾದರೂ ಮೋದಿ, ಅಮಿತ್ ಷಾ ಒಳಗೊಂಡ ಹೈಕಮಾಂಡ್ ತುಟಿಪಿಟಕ್ ಅನ್ನದೇ ವಿಜಯೇಂದ್ರಗೆ ಶಿಕಾರಿಪುರ ಬಿ ಫಾರ್ಮ್ ಕೊಟ್ಟಿತ್ತು. ಇದೀಗ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನವನ್ನೂ ಕಿತ್ತು ಕೊಂಡ ಯಡಿಯೂರಪ್ಪ ತನ್ನ ಗತ್ತು,
ತಾಕತ್ತು ಏನೆಂದು ರಾಜ್ಯಕ್ಕೆ ತೋರಿಸಿದ್ದಾರೆ. ಇದರಿಂದಾಗಿ ಇಲ್ಲಿಯ ಕೆಲ ಮುಖಂಡರು ಗುಮ್ಮನಗುಸುಗನಂತೆ
ಮುಖ ಊದಿಸಿಕೊಂಡು ತಿರುಗುತ್ತಿದ್ದಾರೆ. ಯಡಿಯೂರಪ್ಪ ಹಠ ಹಿಡಿದು ಮಗನಿಗೆ ರಾಜ್ಯ ಬಿಜೆಪಿ
ಅಧ್ಯಕ್ಷ ಪಟ್ಟ ಕೊಡಿಸಿದ್ದರೂ ಸೋತು ಹ್ಶೆರಾಣಾಗಿದ್ದ ಆ ಪಕ್ಷಕ್ಕೆ ಆಕ್ಸಿಜನ್ ಕೊಟ್ಟಂತಾಗಿದೆ. ವಿಜಯೇಂದ್ರ

ಅಧ್ಯಕ್ಷರಾದ ಲಾಗಾಯ್ತಿನಿಂದ ಮುದುಡಿದ ಕಮಲ ಅರಳು ಸುರುವಾದಂತಿದೆ. ಯಾಕೆಂದರೆ ಮಾಸ್ ಲೀಡರ್
ಯಡಿಯೂರಪ್ಪ ಅವರ ಪ್ರಭಾವಳಿ ಮಗನಿಗೂ ರಕ್ಷಣೆಯಾಗೇ ಆಗುತ್ತದೆ. ಸದ್ಯದ ಮಟ್ಟಿಗೆ
ತರ್ಕಿಸುವುದಾದರೆ ರಾಜ್ಯದಾದ್ಯಂತ ಜನರನ್ನು ಸೆಲೆಯುವ ಶಕ್ತಿ ವಿಜಯೇಂದ್ರಗೆ ಇದೆಯೇ ಹೊರತು ಮಿಕ್ಕ
ನಾಯಕರಿಗೆ ಇಲ್ಲವೇ ಇಲ್ಲ ಅನ್ನಹುದಾಗಿದೆ. ಇದೇ ಅಶೋಕ, ಇದೇ ರವಿ, ಇದೇ ಕರಂದಾಜ್ಲೆ, ಇದೇ ಯತ್ನಾಳ್ ರಾಜ್ಯದ ಯಾವುದೇ ಭಾಗಕ್ಕೆ ಹೋದರೆ ಜನ ಸೇರುವುದು ಅಷ್ಟಕ್ಕಷ್ಟೇ ಅನ್ನುವುದು ಎಲ್ಲರಿಗೂ ಗೊತ್ತು. ಬಸವರಾಜ
ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದಾಗಲೇ ಒಮ್ಮೇ ನೆರೆಹಾವಳಿ ಪ್ರದೇಶ ವೀಕ್ಷಣೆಗೆ ಬಂದಾಗ ಬಿಜೆಪಿ ಕಚೇರಿಯಲ್ಲಿ ಎಷ್ಟು ಜನರಿದ್ದರು ಎಂಬುದನ್ನು ಮತ್ತೆ ಲೆಕ್ಕ ಮಾಡಿ ಹೇಳಬೇಕಾಗಿಲ್ಲ. ಇವೆಲ್ಲವನ್ನು ಗಮನಿಯೇ ಹೈಕಮಾಂಡ್ ಪಕ್ಷ ಸಂಘಟನೆಯ ದೃಷ್ಟಿಯಿಂದ ಮತ್ತು ಯಡಿಯೂರಪ್ಪ ಬೆನ್ನು ಹಾಕದಿರಲಿ ಎಂಬ ಕಾರಣಕ್ಕೆ ರಾಜ್ಯಾಧ್ಯಕ್ಷ ಕುರ್ಚಿಯನ್ನು ಕೊಟ್ಟು ಕುಳ್ಳಿಸಿದ್ದಾರೆ. ಇಲ್ಲಿ ಇನ್ನೊಂದು ಮಾತನ್ನು ಗಮನಿಸಲೇ ಬೇಕು. ರಾಜ್ಯಾದ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನೇಮಕದ ಬೆನ್ನಿಗೇ ಆರು ತಿಂಗಳಿoದ ಖಾಲಿ ಬಿದ್ದ ವಿರೋಧ ಪಕ್ಷ ನಾಯಕನ ಸ್ಥಾನವನ್ನು
ಹೈಕಮಾಂಡ್ ಆರ್ ಅಶೋಕ್ ಅವರಿಗೆ ನೀಡಿದೆ ಅನ್ನುವುದಕ್ಕಿಂತ, ಯಡಿಯೂರಪ್ಪನವರೇ ಅಶೋಕ್ ಅವರಿಗೆ ದಯಪಾಲಿಸಿದ್ದಾರೆ ಎಂದರೆನೇ ವಾಸ್ತವಕ್ಕೆ ಹತ್ತಿರದವಿಶ್ಲೇಷಣೆಯಾದೀತು. ಆರ್.ಅಶೋಕ್ ಅವರಿಗೆ ವಿರೋಧ
ಪಕ್ಷ ನಾಯಕನಾಗುವ ಎಲ್ಲ ಅರ್ಹತೆ ಖಂಡಿತ ಇದ್ದೇ ಇದೆ.ಆದರೆ ಸದ್ಯದ ಮಟ್ಟಿಗೆ ಯಡಿಯೂರಪ್ಪ ಅವರ
ಕೃಪಾಕಟಾಕ್ಷ ಇಲ್ಲದಿದ್ದರೆ ಖಂಡಿತ ಅವರು ಆಗುತ್ತಿರಲಿಲ್ಲ. ಯಡಿಯೂರಪ್ಪ ಅವರಿಗೆ ಬಸವರಾಜ್ ಪಾಟೀಲ್ ಯತ್ನಾಳ್ವಿ ರೋಧ ಪಕ್ಷದ ನಾಯಕನನ್ನಾಗಿ ಮಾಡಲು ಸುತಾರಾಂ
ಇಷ್ಟ ಇರಲಿಲ್ಲ. ಇಲ್ಲೂ ಕೂಡ ಯಡಿಯೂರಪ್ಪ ಅವರ ಕೈಮೇಲಾಗಿದೆ. ಇಷ್ಟೆಲ್ಲ ಹೈ ಡ್ರಾಮ ಆದ ಮೇಲೆ ಯಡಿಯೂರಪ್ಪಮತ್ತು ವಿಜಯೇಂದ್ರ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ದೆಹಲಿಗೆ ಅತಿ ಹೆಚ್ಚಿನ ಸ್ಥಾನ ಗೆದ್ದುಕೊಡಬೇಕಾದ ಸವಾಲು ಇದೆ. ಅಪ್ಪ ಮಗ ಹೇಗೆ ನಿಬಾಯಿಸುತ್ತಾರೆ ಅಂತ ಕಾದು ನೋಡಬೇಕು.