ಈ ಟೂತ್ ಪೇಸ್ಟ್ ಒಂದರ ಜಾಹಿರಾತಿನ ಉದ್ಗಾರವನ್ನು ನೀವು ಬಹಳ ಕಡೆ ಕೇಳಿರಬಹುದು… ಅಲ್ಲವೇ ? ಆದರೆ ನಿಜವಾಗಿಯೂ ನೀವು ಟೂತ್ ಪೇಸ್ಟ್ ಖರೀದಿಸುವಾಗ ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತೀರಾ ? ಅಥವಾ ಅಂಗಡಿಯವನಲ್ಲಿ ಈ ಪ್ರಶ್ನೆಯನ್ನು ಕೇಳುತ್ತೀರಾ ? ಬಹುಶಃ ಇಲ್ಲ ಇರಬಹುದು…
” ಉಪ್ಪು ಇದ್ದರೆಷ್ಟು ? ಬಿಟ್ಟರೆಷ್ಟು ? ಎನ್ನುವುದು ಕೆಲವರ ನಿಲುವಾಗಿರಬಹುದು… ಇನ್ನೂ ಕೆಲವರು ” ಕಂಪೆನಿಯವರೇ ಹೇಳಿರುವಾಗ … ಮತ್ತೇನು ಯೋಚಿಸುವುದು ” ಎನ್ನುವುದು ಕೆಲವರ ಮಾತಾಗಿರಬಹುದು… ಇನ್ನೂ ಕೆಲವರು ” ಟೂತ್ ಪೇಸ್ಟ್ ನಲ್ಲಿ ಉಪ್ಪು ಇದ್ದರೆ ನಮಗೇನು ಪ್ರಯೋಜನ “ಎಂದು ಧೀರ್ಘಾಲೋಚನೆ ಮಾಡಬಹುದು… ಹಾಗಿದ್ದರೆ ಇವರಲ್ಲಿ ಯಾರ ನಿಲುವು ಸರಿ ? ಈ ಬಗ್ಗೆ ನಾವು ನಿಜಕ್ಕೊ ಯೋಚಿಸಬೇಕಾಗಿದೆಯೇ ?
ಇಂದಿನ ದಿನಗಳಲ್ಲಿ, ಇಂತಹ ಉದ್ಗಾರಗಳನ್ನು ನಾವು ಬಹಳ ಕೇಳುತ್ತಿರುತ್ತೇವೆ.. “ಕಣ ಕಣ ದಲ್ಲೂ ಕೇಸರಿ… ” ರೈಸ್ ಅಪ್ ಬೇಬಿ” ” ಭಯವನ್ನು ದಾಟಿದರೆ ಗೆಲುವಿದೆ ” ಹೀಗೆ ಹತ್ತು ಹಲವು… ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಘೋಷಣೆ ಎನ್ನುವ ರೀತಿಯಲ್ಲಿ ಹೇಳಿಕೊಳ್ಳುವ ಶುದ್ಧ ಸುಳ್ಳು ಎಂದರೆ ತಪ್ಪಾಗದು … ಏಕೆಂದರೆ ಒಂದು ಗುಟ್ಕಾ ಪ್ಯಾಕ್ ನಲ್ಲಿ ತುಂಬಬಹುದಾದಷ್ಟು ಶುದ್ಧ ಕೇಸರಿಯ ಬೆಲೆ ಯನ್ನು ಒಮ್ಮೆ ಕೇಳಿ ನೋಡಿ … ಆಗ ನಿಮಗೆ ತಿಳಿಯುತ್ತದೆ. ಗುಟ್ಕಾ ಪ್ಯಾಕ್ ನ ಬೆಲೆಗೆ ಶುದ್ಧ ಕೇಸರಿಯನ್ನು ಕೊಡಲು ಸಾಧ್ಯವಿಲ್ಲ ಮತ್ತು ” ಕಣ ಕಣ ದಲ್ಲಿಯೂ ಕೇಸರಿ ಎಂಬುದು ಶುದ್ಧ ಸುಳ್ಳು ಎಂದು . ಇನ್ನು ” ರೈಸ್ ಅಪ್ ಬೇಬಿ” ಎಂದು ಉದ್ಗಾರದ ಜಾಹಿರಾತು ಹೊಂದಿರುವ ಹೊಂದಿರುವ ತಂಪು ಪಾನೀಯ ಕುಡಿದರೆ ಮಾತ್ರ ” ಬೇಬಿ” ಆಗಿದ್ದವರು ” ರೈಸ್ ” (ಬೆಳೆದು ನಿಲ್ಲುತ್ತಾರಾ ) ಆಗುತ್ತಾರೆ ?.

ನೀವು ಹೇಳಬಹುದು.. “ಈ ರೀತಿಯ ಕೀಟಲೆ ಮಾತು ಬೇಡ… ಕಂಪನಿಯವರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸೃಜನಾತ್ಮಕ ರೀತಿಯಲ್ಲಿ ಜಾಹಿರಾತುಗಳನ್ನು ಮಾಡುತ್ತಾರೆ. ಇದರಲ್ಲಿ ತಪ್ಪೇನಿದೆ ಎಂದು… ” . ಇದರಲ್ಲಿ ತಪ್ಪಿಲ್ಲ ನಿಜ … ಆದರೆ ನಾವು ಯೋಚಿಸಬೇಕಾಗಿರುವುದು ನಿಜಕ್ಕೊ ಇಂಥಹ ಉತ್ಪನ್ನಗಳಲ್ಲಿ ಜಾಹಿರಾತಿನಲ್ಲಿ ತೋರಿಸಿದಂತೆ ಸಮಾಜಕ್ಕೆ ಒಳಿತನ್ನು ಉಂಟು ಮಾಡುವ ಸತ್ವ ಇದೆಯೇ ? ಎಂಬುದನ್ನು… ನಮ್ಮ ಮೇಲೆ ಮತ್ತು ನಮ್ಮ ಕುಟುಂಬದವರ ಮೇಲೆ ಇಂಥಹ ಉತ್ಪನ್ನಗಳ ಬಳಕೆಯಿಂದ ಆಗಬಹುದಾದ ಪರಿಣಾಮಗಳೇನು ? ಏಕೆ ? ಇಂಥಹ ಪ್ರಶ್ನೆಗಳನ್ನು ನಾವು ನಿಜಕ್ಕೊ ಕೇಳಿಕೊಳ್ಳಬೇಕಾಗಿದೆ.
ಹಾಗಿದ್ದರೆ ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳಲ್ಲಿ ನಮ್ಮ ದೇಹಕ್ಕೆ ಒಳಿತನ್ನು ಉಂಟು ಮಾಡುವ ಅಥವಾ ಕೆಡುಕನ್ನು ಉಂಟುಮಾಡುವ ಉತ್ಪನ್ನ ಎಂದು ಹೇಗೆ ನಿರ್ಧರಿಸುವುದು ? ಎಂಬ ಪ್ರಶ್ನೆ ಮೂಡುತ್ತದೆ.
ಇಲ್ಲಿ ಇಂಥ ಉತ್ಪನ್ನ ಅಥವಾ ಪದಾರ್ಥಗಳನ್ನು ಸೇವಿಸಿದರೆ ಯಾವ ಯಾವ ತೊಂದರೆ ಅಥವಾ ಕಾಯಿಲೆ ಬರಬಹುದು ಎಂಬುದನ್ನು ವಿವರಿಸುವ ಗೋಜಿಗೆ ಹೋಗುವುದಿಲ್ಲ.. ಬದಲಾಗಿ ತಾವು ಉಪಯೋಗಿಸುವ ಉತ್ಪನ್ನಗಳು ಏನೇನು ಪದಾರ್ಥಗಳನ್ನು ಒಳಗೊಂಡಿವೆ ಎನ್ನುವುದನ್ನು ತಿಳಿದುಕೊಳ್ಳಲು ಸೂಚಿಸುತ್ತೇನೆ.. ಪ್ರತಿ ಉತ್ಪನ್ನದ ಪ್ಯಾಕ್ ನ ಮೇಲೆ Ingredients ಅಥವಾ Precaution ಎಂಬುದಾಗಿ ಚಿಕ್ಕ ವಿವರ ಇರುತ್ತದೆ.. ಇದರಲ್ಲಿ ಹೇಳಲಾಗುವ ವಿವರಗಳು ಸಾಮಾನ್ಯವಾಗಿ ನಿಜ ಅಂಶ ಗಳಿಂದ ಕೂಡಿರುತ್ತದೆ. ಏಕೆಂದರೆ ಈ ವಿವರ ಉತ್ಪಾದಕರ ಕಾನೂನಿನ ಚೌಕಟ್ಟಿಗೆ ಬದ್ಧವಾಗಿರುತ್ತದೆ. ಈ ವಿವರದಲ್ಲಿ ಯಾವುದೊ ರಾಸಾಯನಿಕ ದ ಹೆಸರು, artificial sweetner , added preservative ಹೀಗೆ ಇದ್ದರೆ ಆ ಪದಾರ್ಥಗಳ ಬಗ್ಗೆ ತಮ್ಮ ಸ್ಮಾರ್ಟ್ ಫೋನ್ ನ google ನಲ್ಲಿ ಹುಡುಕಿ ನೋಡಿ ; ಅವು ತಮ್ಮ ದೇಹಕ್ಕೆ ಎಷ್ಟು ಹಿತ ಅಥವಾ ಅಹಿತಕರ ಎಂಬುದನ್ನು… ಇಂತಹ ಪಧಾರ್ಥಗಳನ್ನು ಒಳಗೊಂಡಿರುವ ಉತ್ಪನ್ನಗಳ ಉಪಯೋಗವು ನಮ್ಮನ್ನು ಯಾವ ಮಟ್ಟಕ್ಕೆ ನೂಕಬಹುದು ಎಂಬುದನ್ನು ನಾವೇ ಯೋಚಿಸಿ ನೋಡಬಹುದು. ಇನ್ನು ಗುಟ್ಕಾ ಅಥವಾ ಸಿಗರೇಟು ಮುಂತಾದವುಗಳ ಬಗೆಗೆ ಈ ರೀತಿಯ ಅಧ್ಯಯನ ಬೇಕಾಗಿಲ್ಲ ಅಲ್ಲವೇ ? ಈ ಮದ್ಯೆ ಈ ಜಾಹಿರಾತು ನೀಡುವ ಕಂಪನಿಗಳ ಒಳಮರ್ಮ ನೀವೇ ಅಳೆದು ಬಿಡಬಹುದು… ಅಲ್ಲವೇ ?
ನಾವು ಭಾರತೀಯರು ! ಆಯುವೇದದಂತಹ ಜ್ಞಾನವನ್ನು ಜಗತ್ತಿಗೆ ಸಾರುತ್ತಿರುವವರು… ಆಯುರ್ವೇದದ ಪ್ರಕಾರ ಪ್ರತಿಯೊಬ್ಬನ ದೇಹದ ರಚನೆ ಬೇರೆ ಬೇರೆ ಆಗಿರುತ್ತದೆ. ಹೀಗಿರುವಾಗ ಯಾವುದೊ ಚಿತ್ರನಟಿ ಜಾಹಿರಾತಿನಲ್ಲಿ ಯಾವುದೊ ಸೋಪ್ ಬಳಸಲು ಹೇಳಿದರೆ ನಾವು ಅವಳ ಹಾಗೆ ಆಗಿ ಬಿಡಬಹುದೇ ? ಯಾವುದೂ ಕ್ರಿಕೆಟಿಗ ಯಾವುದೋ ಸಾಫ್ಟ್ ಡ್ರಿಂಕ್ ಕುಡಿಯಲಿ ಹೇಳಿದರೆ ನಾವು ಕ್ರಿಕೆಟಿಗರಾಗುತ್ತೇವೆಯೇ ? ನೈಜ ವಿಷಯವೆಂದರೆ, ಯಾವುದೇ ಚಿತ್ರನಟಿ ಅಥವಾ ನಟರಾಗಲಿ , ಕ್ರಿಕೆಟಿಗರಾಗಲಿ ಇಂಥ ಉತ್ಪನ್ನಗಳಿಂದ ತಾವೇ ದೂರವಿರುತ್ತಾರೆ. ಏಕೆಂದರೆ ಅವರು ತಮ್ಮ ದೇಹ ಹಾಗು ಮಾನಸಿಕ ಸ್ವಾಸ್ತ್ಯದ ವಿಷಯದಲ್ಲಿ ಬಹಳ ಜಾಗರೂಕತೆ ವಹಿಸುತ್ತಾರೆ. ಆದರೂ ಇಂತಹ ಉತ್ಪನ್ನಗಳ ಜಾಹಿರಾತುಗಳನ್ನು ಮಾಡುತ್ತಾ ಅದೆಂತಾ ಸಾಧನೆ ಮಾಡುತ್ತಾರೆಯೋ ಅವರೇ ಹೇಳಬೇಕು.. ವಿಪರ್ಯಾಸ ಎಂದರೆ ನಾವು ಇಂಥವರನ್ನೇ ಅಭಿಮಾನಿಗಳನ್ನಾಗಿಸಿ ಆರಾಧಿಸುತ್ತೇವೆ.
ನಿಜಕ್ಕೊ ನಮ್ಮ ದೈಹಿಕ ಅಥವಾ ಮಾನಸಿಕ ಸ್ವಾಸ್ತ್ಯದ ಬಗ್ಗೆ ಕಾಳಜಿ ವಹಿಸಲೇ ಬೇಕು ಎಂಬುದಾದರೆ ನಮಗೆ ನಾವು ಕೇಳಿಕೊಳ್ಳಲೇ ಬೇಕು ….”ನಮ್ಮ ಟೂಥ್ ಪೇಸ್ಟ್ ನಿಂದ ರಾತ್ರಿಯ ಊಟದವರೆಗೆ ಯಾವುದರಲ್ಲಿ ಉಪ್ಪಿದೆ (ಸತ್ವ) ಎಂದು… ”

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್
Founder & Creative Head
Grapito Desings (Design and Marketing agency)