ನಮ್ಮ ಅಸ್ಮಿತೆಯನ್ನುಗುರುತಿಸಿಕೊಳ್ಳಲು ಮಾತ್ರ ಜಾತಿಬಳಸಿಕೊಳ್ಳಬೇಕು : ಸಚಿವ ಮಧುಬಂಗಾರಪ್ಪ

ಕುಮಟಾ: ನಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಮಾತ್ರ ಜಾತಿ ಬಳಸಿಕೊಳ್ಳಬೇಕು. ನಾವು ಇತರ ಸಮುದಯವನ್ನು ಗೌರವದಿಂದ ಕಂಡಾಗಲೇ ನಮ್ಮ ಸಮುದಾಯಕ್ಕೆ ಗೌರವ ಲಭಿಸುತ್ತದೆ. ಯಾಕೆಂದರೆ ನಾನು ಹುಟ್ಟಿದ ಜಾತಿ ತಾಯಿ ಇದ್ದಂತೆ. ತಾಯಿ ಯಾರನ್ನೂ ದೂರ ಇಡಲ್ಲ. ಎಲ್ಲರಿಗೂ ತಾಯಿ ಪ್ರೀತಿ ಹಂಚುತ್ತಾಳೆ ಎಂದು ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಕುಮಟಾ ಆರ್ಯ ಈಡಿಗ ನಾಮಧಾರಿ ಸಂಘದ ವತಿಯಿಂದ ಹಮ್ಮಿಕೊಂಡ


ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಇಡೀ ರಾಜ್ಯದಲ್ಲಿ ಕುಮಟಾದ ನಾಮಧಾರಿ ಸಮಾಜದವರು ಸ್ವಾಭಿಮಾನಿಗಳು ಮತ್ತು ಸಮಾಜದ ಬಗ್ಗೆ ಹೆಚ್ಚು ಕಳಕಳಿ ಹೊಂದಿದ್ದಾರೆ. ನಮ್ಮ ಸಮಾಜವು ರಾಜ್ಯ ಮಟ್ಟದಲ್ಲಿ ಒಗ್ಗೂಡಬೇಕೆಂಬ ಮಹಾದಾಸೆಯಿಂದ ರಾಜ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇ ಗೌಡರ ನೇತೃತ್ವದಲ್ಲಿ ನಮ್ಮ ಸಮಾಜದ ಕುಲ ಗುರುಗಳ ಮಾರ್ಗದರ್ಶನದಲ್ಲಿ ಸಚಿವರು, ಶಾಸಕರು, ಉಳಿದೆಲ್ಲ ಜನಪ್ರತಿನಿಧಿಗಳು ಮತ್ತು ಸಮಾಜ
ಮುಖಂಡರೆಲ್ಲ ಸೇರಿ ಡಿ.೧೦ಕ್ಕೆ ಬೆಂಗಳೂರಿನ ಫ್ಯಾಲೇಸ್ ಮೈದಾನದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಮೃತ ಮಹೋತ್ಸವ ಮತ್ತು ಬೃಹತ್ ಸಮಾವೇಶ ಕಾರ್ಯಕ್ರಮ ಸಂಘಟಿಸಿದ್ದೇವೆ. ನಮ್ಮ ಸಮಾಜದ
ಬೇಡಿಕೆಗಳನ್ನು ಈಡೇರಿಸುವ ಹಕ್ಕೊತ್ತಾಯವನ್ನು ಸರ್ಕಾರಕ್ಕೆ ಮಂಡಿಸಲಿದ್ದೇವೆ. ಪ್ರತಿ ತಾಲೂಕಿನಿಂದ ಕನಿಷ್ಠ ಸಾವಿರ ಜನರಾದರೂ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಚಿವರು ಸಮಾಜದವರಲ್ಲಿ ಮನವಿ ಮಾಡಿದರು. ರಾಜ್ಯ ಈಡಿಗರ ಸಂಘದ ಅಧ್ಯಕ್ಷ ತಿಮ್ಮೇ ಗೌಡ ಮಾತನಾಡಿ,


ನಮ್ಮ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದ ಮೂಲಕ ಸರ್ಕಾರದ ನಮ್ಮ ಸಮಾಜದ ಶಕ್ತಿ ಪ್ರದರ್ಶನ ಮಾಡಬೇಕು. ಈಡಿಗರ ಜೊತೆ ೨೬ ಸಮುದಾಯಗಳನ್ನು ಸೇರಿಸಿಕೊಂಡು ಸಂಘವನ್ನು ಅಸ್ಥಿತ್ವಕ್ಕೆ ತರಲಾಗಿದೆ. ಉತ್ತರಕನ್ನಡ ಜಿಲ್ಲೆ, ಉಡುಪಿ, ಮಂಗಳೂರು, ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮವರ ಜನಸಂಖ್ಯೆ ಜಾಸ್ತಿ ಇದೆ. ನಾವೆಲ್ಲರೂ ಒಗ್ಗಟ್ಟಾಗಿ
ಸಮಾಜವನ್ನು ಬೆಳೆಸುವ ಕಾರ್ಯ ಮಾಡೋಣ. ಆ ಮೂಲಕ ಸಮಾಜದ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು. ಸಮಾಜದ ಕಾರ್ಯ ಚಟುವಟಿಕೆಗಳಲ್ಲಿ ಸಮಾಜದ ಮಹಿಳೆಯರು ಹೆಚ್ಚಾಗಿ ಪಾಲ್ಗೊಳ್ಳಬೇಕು. ಅಮೃತ ಮಹೋತ್ಸವವನ್ನು ಸಮಾಜದ ನಾಡ ಹಬ್ಬವಾಗಿ ಆಚರಿಸಬೇಕು. ಎಲ್ಲರೂ ಪಾಲ್ಗೊಳ್ಳುವಂತೆ ಕರೆ ನೀಡಿದರು. ಶಿರಸಿ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ನಾವೆಲ್ಲ ಸಮಾಜದ ಅಡಿಯಲ್ಲಿ ಒಗ್ಗಟ್ಟಾಗಬೇಕು. ಒಂದು ಕಡೆ ರಾಜ್ಯದಲ್ಲಿ ಪ್ರಬಲವಾದ ಸಮುದಾಯವಾಗಿದೆ. ೨೮ ವರ್ಷಗಳ ಹಿಂದೆ ನಡೆದ ಸಮಾವೇಶ ಮತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಬೃಹತ್ ಸಮಾವೇಶ ಸಂಘಟಿಸಿದ್ದೇವೆ. ಎಲ್ಲರೂ ಭಾಗವಹಿಸಬೇಕು. ಸಮಾಜದ ಸಂಘಟನೆ ಬಲವಾಗಿ ಬೆಳೆಯಲು ನಮ್ಮ ಗುರುಗಳು, ಜನಪ್ರತಿನಿಧಿಗಳು, ಹಿರಿಯ ಮುಖಂಡರ ಉಪಸ್ಥಿತಿಯಲ್ಲಿ ಸಭೆ ನಡೆಸಿ, ಬೃಹತ್ಸ ಮಾವೇಶವನ್ನು ಯಶಸ್ವಿಗೊಳಿಸೋಣ. ನಾವು ಯಾವ ಕ್ಷೇತ್ರದಲ್ಲೂ ಹಿಂದಿಲ್ಲ. ನಮ್ಮ ಮನಸಿನಲ್ಲಿರುವ ಕಲ್ಮಶಗಳನ್ನು ದೂರಮಾಡಿದರೆ, ನಮ್ಮ ಸಮುದಾಯ ಇನ್ನಷ್ಟು ಪ್ರಬಲಗೊಳ್ಳಲು ಸಹಾಯಕಾರಿಯಾಗುತ್ತದೆ. ಈ ಸಮಾವೇಶದಲ್ಲಿ ನಮ್ಮ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸೋಣ ಎಂದು ಕರೆ ನೀಡಿದರು. ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಮಾತನಾಡಿ, ಸಮಾಜದ ಒಗ್ಗೂಡುವಿಕೆ ಬೇರೆ ಬೇರೆ ಸಂದರ್ಭದಲ್ಲಿ ಆಗಿದೆ. ನಮ್ಮ ಸಮಾಜದ ಜೊತೆಗೆ ಎಲ್ಲ ಹಿಂದುಳಿದ ವರ್ಗಗಳನ್ನು ಬೆಳೆಸಿದವರು ಬಂಗಾರಪ್ಪ ಅವರು, ಹಾಗಾಗಿ
ಅವರನ್ನು ಬಡವರ ಬಂಧು ಎನ್ನುತ್ತಾರೆ. ಅವರ ನಂತರ ಅವರ ಸ್ಥಾನವನ್ನು ತುಂಬುವ ಶಕ್ತಿ ಮಧು ಬಂಗಾರಪ್ಪರಿಗೆ ಇದೆ. ನಮ್ಮ ಸಮಾಜದ ಸಭಾಭವನಕ್ಕೆ ಸರ್ಕಾರದಿಂದ ಹಣ ಒದಗಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಮಟಾ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ ವಹಿಸಿದ್ದರು. ಈ ಸಂದರ್ಭದಲ್ಲಿ ಸಚಿವ ಮಧು ಬಂಗಾರಪ್ಪ, ಶಾಸಕ


ಭೀಮಣ್ಣ ನಾಯ್ಕರನ್ನು ನಾಮಧಾರಿ ಸಮಾಜದ ವಿವಿಧ ಗ್ರಾಮಗಳ ಸಂಘಟನೆಗಳು ಮತ್ತು ವಿವಿಧ ಸಂಘಟನೆಗಳು ಸನ್ಮಾನಿಸಿದವು. ಕಾರ್ಯಕ್ರಮದಲ್ಲಿ ನಾಮಧಾರಿ ಸಮಾಜದ ಪ್ರಮುಖರಾದ ಆರ್.ಜಿ.ನಾಯ್ಕ, ಈಡಿಗ ಬಿಲ್ಲವ ನಾಮಧಾರಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಎಲ್ ನಾಯ್ಕ, ರತ್ನಾಕರ ನಾಯ್ಕ, ಎಚ್ ಆರ್ ನಾಯ್ಕ, ಕೆ ಜಿ ನಾಯ್ಕ, ಬಿ ಆರ್ ನಾಯ್ಕ, ಮಾರಿಕಾಂಬಾ ದೇವಸ್ಥಾನದ ಟ್ರಸ್ಟಿ ಆರ್ ಜಿ ನಾಯ್ಕ, ಎಚ್ ಎಂ ನಾಯ್ಕ, ಆರ್ ಎಸ್ ನಾಯ್ಕ , ವಾಸಣ್ಣ, ವಿವಿಧ ತಾಲೂಕುಗಳ ಅಧ್ಯಕ್ಷರು, ಸಮಾಜದ ಮುಖಂಡರು ಇದ್ದರು.

Leave a Reply

Your email address will not be published. Required fields are marked *