ನಾಡನ್ನು ಬೆಳಗಿಸುವಲ್ಲಿ ಕರ್ನಾಟಕ ರಾಜ್ಯ ವಿದ್ಯುತ್ ನಿಗಮದ ಪಾತ್ರ ಬಹು ದೊಡ್ಡದು. ನಿಗಮ ವಿದ್ಯುತ್ ಉತ್ಪಾದಿಸುವ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದರೆ, ಕರ್ನಾಟಕ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ವಿದ್ಯುತ್ತನ್ನು ವಿತರಿಸುವ ಕಾರ್ಯ ನಿರ್ವಹಿಸುತ್ತಿದೆ.
ಈ ಎರಡು ಸಂಸ್ಥೆಗಳಿಂದ ಸರಕಾರದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಹರಿದು ಬರುತ್ತಿದೆ. ರಾಜ್ಯದ ಬಿಳಿಯಾನೆಯಂತಿದ್ದ ಈ ಎರಡು ಸಂಸ್ಥೆಗಳು ಇದೀಗ ನಷ್ಟದಲ್ಲಿ ಮುಳುಗಿ ತೀವ್ರ ಸಂಕಷ್ಟವನ್ನೆದುರಿಸುತ್ತಿದ್ದು, ಅವುಗಳು ಖಾಸಗೀಕರಣದತ್ತ ವಾಲುತ್ತಲಿದೆಯೆನ್ನಲಾಗಿದೆ.

ಒಂದು ಕಾಲದಲ್ಲಿ ಈ ಸಂಸ್ಥೆಯಲ್ಲಿ ನೌಕರಿ ಗಿಟ್ಟಿಸುವ ಸಲುವಾಗಿ ಸಾಕಷ್ಟು ಒತ್ತಡ, ಶಿಫಾರಸುಗಳನ್ನು ಮಾಡಲಾಗುತ್ತಿತ್ತು. ಇಲ್ಲಿ ನೌಕರಿ ಸಿಕ್ಕಿದರೆ ಅವರ ಜೀವನ ಸುರಕ್ಷಿತ ಹಾಗೂ ಭದ್ರತೆಯಿಂದ ಕೂಡಿರುತ್ತದೆ ಎಂಬುದು ಜನಸಾಮಾನ್ಯರ ನಂಬಿಕೆ. ಅಷ್ಟೊಂದು ಜನವಿಶ್ವಾಸದಿಂದ ಗಳಿಸಿರುವ ಸಂಸ್ಥೆಯ ಇಂದಿನ ಸ್ಥಿತಿ ಬರುವ ದಿನಗಳಲ್ಲಿ ಸಿಬ್ಬಂದಿಯ ಸಂಬಳಕ್ಕೂ ಕಷ್ಟಕರವೆನ್ನುವ ಪರಿಸ್ಥಿತಿ ಬಂದೊಂದಗಿದೆ. ಕರ್ನಾಟಕ ರಾಜ್ಯ ವಿದ್ಯುತ್ ನಿಗಮ (ಕೆಪಿಸಿ) ಈಗ ನಷ್ಟದಲ್ಲಿ ಮುಳುಗಿ ತೀವ್ರ ಸಂಕಷ್ಟವನ್ನೆದುರಿಸುತ್ತಿದೆ. ಸಾಲದ ಹೊರೆ ಒಂದೆಡೆಯಾದರೆ, ಇನ್ನೊಂದೆಡೆ ನಿಗಮಕ್ಕೆ ಬರಬೇಕಾದ ಬಾಕಿ ಸಾವಿರಾರು ಕೋಟಿ ಹಣ ವಸೂಲಾಗಿಲ್ಲ. ನಿಗಮ ಬ್ಯಾಂಕಿನಿಂದ ಪಡೆದ ಸಾವಿರಾರು ಕೋಟಿ ರೂಪಾಯಿ ಸಾಲದ ಬಡ್ಡಿ ಬೆಳೆಯುತ್ತಿದ್ದು ಅದನ್ನು ತುಂಬಲು ಪರದಾಡುತ್ತಿದೆ.


ಈ ರಾಜ್ಯದ ಪ್ರತಿಷ್ಠೆಯ ಸಂಕೇತವಾಗಿದ್ದ ಕೆಪಿಸಿ (KPC) ಕಳೆದ ಆರು ದಶಕಗಳಿಂದ ವಿದ್ಯುತ್ ಉತ್ಪಾದಿಸುವ ಮೂಲಕ ನಾಡಿನಾದ್ಯಂತ ಬೆಳಕನ್ನು ನೀಡುತ್ತಿದೆ. ಇಂತಹ ಸಂಸ್ಥೆಯ ಅಧೋಗತಿಗೆ ನಮ್ಮನ್ನಾಳುವವರ ಕೊಡುಗೆಯು ಕಾರಣ. ಇವರ ಕಪಿಮುಷ್ಠಿಯಲ್ಲಿ ಸಿಲುಕಿರುವ ಕೆಪಿಸಿ ತನ್ನ ಅಸ್ತಿತ್ವಕ್ಕಾಗಿ ಬಡಿದಾಡುವಂತಾಗಿದೆ.
ವಿದ್ಯುತ್ ನಿಗಮನ ನಿವೃತ್ತ ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ ಹಿಂದೆ ಯೋಜನಾ ಪ್ರದೇಶದಲ್ಲಿ ಬಿಳಿಯಾನೆಯಂತಿದ್ದ ನಿಗಮಕ್ಕೀಗ 20 ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಸರ್ಕಾರದ ವಿವಿಧ ಮೂಲಗಳಿಂದ ಬರಬೇಕಿದೆ. ಇವೆಲ್ಲವು ಗ್ರಾಮ ಪಂಚಾಯತಿಯಿಂದ ವಿದ್ಯುತ್ ಸರಬರಾಜು
ಕಂಪನಿಗಳಿಂದ ಬರಬೇಕು. ಅವುಗಳಿಂದ ಬಾಕಿ ಪಾವತಿಯಾಗುತ್ತಿಲ್ಲ. ಸರ್ಕಾರದ ಮುಂದೆ ಸಂಬಂಧಿಸಿದ ಅಧಿಕಾರಿಗಳಿಂದ ಹಣ ಬಿಡುಗಡೆ ಮಾಡುವಂತೆ ಸಾಕಷ್ಟು ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನೆವಾಗಿಲ್ಲ. ಇತ್ತೀಚೆಗಿನ ಸರಕಾರದ ಪುಕ್ಕಟೆ ವಿದ್ಯುತ್ ಪೂರೈಕೆ ಕೂಡ ಕೆಪಿಸಿಗೆ ಮರ್ಮಾಘಾತ ನೀಡಿದೆ. ವಿದ್ಯುತ್ ಉತ್ಪಾದಿಸುವ ಮೂಲಕ ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವ ಉದ್ದೇಶಿತ ನಿಗಮದ ಪ್ರಯತ್ನಕ್ಕೂ ತಣ್ಣೀರೆರೆಚಿದಂತೆ ರಾಜ್ಯದ ವಿದ್ಯುತ್ ಉತ್ಪಾದಿಸುವ ಪ್ರಮುಖ ಜಲಾಶಯಗಳಲ್ಲೂ ನೀರಿಲ್ಲ. ಜಲಾಶಯಗಳು ಬರಿದಾಗಿದೆ. ಸರ್ಕಾರ ಹಾಗೂ ವಿದ್ಯುತ್ ಸರಬರಾಜು ಕಂಪನಿಗಳ ಮಧ್ಯೆ ಸಿಲುಕಿ ಕೆಪಿಸಿ ಪರಿತಪಿಸುತ್ತಿದೆ. ಗ್ರಾಮ ಪಂಚಯತಿಯಿಂದ ಬರಬೇಕಾದ ಬಾಕಿಯನ್ನಾದರೂ ಕೊಡಿ ಎಂದು ವಿದ್ಯುತ್ ಸರಬರಾಜು ಕಂಪನಿಗಳು ಸರ್ಕಾರದ ದುಂಬಾಲು ಬಿದ್ದಿದೆ. ಸರ್ಕಾರ ಜಾಣ ಕುರುಡುತನದಿಮದ ಕೆಪಿಸಿಯನ್ನು ಸಂಕಷ್ಟಕ್ಕೆ ನೂಕುತ್ತಿದೆ. ಕೆಪಿಸಿ ಈಗ ಸರಕಾರದ ನೆರವಾಗಿ ಕಾಯುತ್ತಿದೆ.

ಲೇಖಕರು :
ಎನ್. ಜಯಚಂದ್ರನ್,
ದಾಂಡೇಲಿ