ಕುಮಟಾ: ಪಟ್ಟಣದ ಎಚ್.ಡಿ.ಎಫ್.ಸಿ ಬ್ಯಾಂಕ್ ಶಾಖೆ ಉತ್ತರ ಕನ್ನಡ ಬ್ಲಡ್ ಬ್ಯಾಂಕ್
ಸಹಯೋಗದೊಂದಿಗೆ ಡಿ.8 ಶುಕ್ರವಾರದಂದು ರಕ್ತದಾನ ಶಿಬಿರ ಹಮ್ಮಿಕೊಂಡಿತ್ತು.
ಶಿಬಿರವನ್ನು ಉದ್ಘಾಟಿಸಿದ ಡಾ. ರವಿರಾಜ್ ಕಡ್ಲೆ ಮಾತನಾಡಿ ರಕ್ತದಾನ ಮಾಡಿದರೆ ಒಂದು ಜೀವ ಉಳಿಸಿದಂತೆ. ಇದು ದೇವರ ಪೂಜೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಪವಿತ್ರ ಕಾರ್ಯ.
ಎಚ್.ಡಿ.ಎಫ್.ಸಿ. ಬ್ಯಾಂಕ್ ಈ ರೀತಿಯ ರಕ್ತದಾನ ಶಿಬಿರ ಹಮ್ಮಿಕೊಂಡು ಸಮಾಜಮುಖಿ
ಕಾರ್ಯದಲ್ಲಿ ತೊಡಗಿಕೊಂಡಿರುವುದು ಪ್ರಶಂಸನಾರ್ಹ ಎಂದರು.
ಶಿಬಿರದಲ್ಲಿ 36 ಜನ ರಕ್ತದಾನ ಮಾಡಿ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಶಾಖೆ ಮೆನೆಜರ್ ಸತೀಶ್ ಹೆಗಡೆ, ನಿರ್ವಹಣೆ ಮೆನೆಜರ್ ರಾಘವೇಂದ್ರ
ನಾಯಕ, ಬ್ಯಾಂಕ್ ಸಿಬ್ಬಂದಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.