ಕುಮಟಾ: ‘ಪದವಿ ಕಾಲೇಜಿನಲ್ಲಿ ಸಂಶೋಧನೆಯ ಮಹತ್ವ’ ಎಂಬ ವಸ್ತುನಿಷ್ಠ
ವಿಷಯವನ್ನಿಟ್ಟುಕೊಂಡು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿ.11 ಮತ್ತು
12 ರಂದು ಅಂತರರಾಷ್ಟ್ರೀಯ ಮಟ್ಟದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಅತ್ಯಂತ ಮಹತ್ವಾಕಾಂಕ್ಷೆಯಿಂದ ಕಾಲೇಜಿನಲ್ಲಿ ಮೊಟ್ಟ ಮೊದಲು ಹಮ್ಮಿಕೊಂಡ ಈ
ಸಮಾವೇಶ ಪದವಿ ಕಲಿಕೆಯ ಹಂತದಲ್ಲಿಯೇ ವಿದ್ಯಾರ್ಥಿ ಸಮುದಾಯಕ್ಕೆ
ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಅನುಕೂಲಕರ ಸಂಪನ್ಮೂಲ ಒದಗಿಸಿ
ಪ್ರೋತ್ಸಾಹಿಸುವ ಪರಿಕಲ್ಪನೆ ಹೊಂದಿದೆ. ಸಾಮಾನ್ಯವಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ
ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಪೂರಕ ಪಠ್ಯವಿರುತ್ತದೆ. ಆದರೆ ಪದವಿ
ಮಟ್ಟದಲ್ಲಿಯೇ ಸಂಶೋಧನೆಗೆ ತೊಡಗಿಕೊಳ್ಳಲು ಸಣ್ಣ ಮಾರ್ಗ ತೆರೆದುಕೊಡುವ
ಪ್ರಯತ್ನ ಇದಾಗಿದೆ ಎಂದು ಪ್ರಾಂಶುಪಾಲೆ ಪ್ರೊ. ವಿಜಯಾ ಡಿ ನಾಯ್ಕ ತಿಳಿಸುತ್ತಾರೆ.
ಸಮಾವೇಶದ ಸಂಚಾಲಕ ಪ್ರೊ. ಐ.ಕೆ.ನಾಯ್ಕ, ಪದವಿ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ
ಸಂಶೋಧನೆಯ ಮಾರ್ಗ ತೆರೆದುಕೊಟ್ಟರೆ ಹೊಸ ಹೊಸ ಹೊಳಹುಗಳು ಹೊರಹೊಮ್ಮುವ
ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಪ್ರಸ್ತುತ ಸಮಾವೇಶ ಮಹತ್ವ ಪಡೆದುಕೊಳ್ಳಲಿದೆ ಎಂದು
ಅಭಿಪ್ರಾಯ ಮಟ್ಟರು.
ಸುಮಾರು ನಾಲ್ಕು ನೂರು ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿರುವ ಈ
ಸಮಾವೇಶದಲ್ಲಿ ಭಾರತ ಮಾತ್ರವಲ್ಲ, ಬೇರೆ ಬೇರೆ ದೇಶದ ಪ್ರೊಫೆಸರ್ ಗಳು
ಪಾಲ್ಗೊಳ್ಳಲಿದ್ದಾರೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಉಪನ್ಯಾಸಕರು ಈ
ಸಮಾವೇಶದ ಪ್ರಯೋಜನ ಪಡೆಯಲು ಬಾಗವಹಿಸುತ್ತಿದ್ದಾರೆ.
ಸಮಾವೇಶದಲ್ಲಿ ಗುಲಬರ್ಗಾ ವಿವಿ ಮಾಜಿ ಕುಲಪತಿ ಡಾ. ಬಿ.ಜಿ.ಮೂಲಿಮನಿ, ಕೊಟ್ಟಾಯಂ
ಮಹತ್ಮಾಗಾಂಧಿ ವಿವಿ ಮಾಜಿ ಉಪ ಕುಲಪತಿ ಡಾ. ಸಬು ಥಾಮಸ್, ಯುಜಿಸಿ ನಿವೃತ್ತ
ಪ್ರಾಧ್ಯಾಪಕರ ಸಂಘಟನೆಯ ಡಾ. ಕೆ.ಎಸ.ರಾಣೆ, ಖಾನ್ಪುರ್ ಐಐಟಿ ಮಾಜಿ ಪ್ರೊಫೆಸರ್ ಡಾ.
ಲೀಲಾವತಿ, ಗಾಂಧಿ ನಗರ ಐಐಟಿ ಟೀಚಿಂಗ್ ಪ್ರೊಫೆಸರ್ ದಕ್ಷಿಣ ಕೋರಿಯಾದ ಡಾ.
ಜೂಯಾಂಗ್ ಕಿಮ್, ಹೈದರಾಬಾದ್ ವೋಕ್ಸೆನ್ ಯುನಿವರ್ಸಿಟಿ ಸಹಾಯಕ ಪ್ರೊಫೆಸರ್ ಡಾ.
ಓಯೆನುಂಗಾ ಮೈಖೆಲ್ , ಕವಿವಿ ಸಮುದ್ರ ಜೀವ ಶಾಸ್ತ್ರ ಕಾರವಾರ ಪಿಜಿ ಸೆಂಟರ್ ನ
ಚೇರ್ಮನ್ ಡಾ. ಜೆ.ಎಲ್.ರಾಥೋಡ್, ಕುಮಟಾದ ಡಾ. ಬಾಳಿಗಾ ಕಾಲೇಜಿನ ಮಾಜಿ
ಪ್ರೊಫೆಸರ್ ಡಾ. ಎಂ.ಜಿ.ಹೆಗಡೆ ಬೆಂಗಳೂರಿನ ಪ್ರೆಸಿಡೆನ್ಸಿ ವಿವಿಯ ಪ್ರೊಫೆಸರ್ ಡಾ.
ಯು.ಮೆಹಬೂಬ್ ಪಿ. , ದರುಸ್ಸಾಲಮ್ ವಿವಿಯ ಪ್ರೊಫೆಸರ್ ಡಾ. ಪೂಜಾ ಎಸ್,
ಜರ್ಮನಿಯ ಆಗ್ಸ್ಬರ್ಗ್ ವಿವಿಯ ಪ್ರೊ. ವಿಘೇಶ್ ಡಿ. ನಾಯ್ಕ ಪಾಲ್ಗೊಂಡು ಪ್ರಬಂಧ
ಮಂಡಿಸಲಿದ್ದಾರೆ.
ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ, ಕಾಲೇಜು ಶಿಕ್ಷಣ
ಮಂಡಳಿಯ ಧಾರವಾಡ ವಿಭಾಗ ಜಂಟಿ ನಿರ್ದೇಶಕ ಪ್ರೊ. ಪ್ರಕಾಶ ಹೊಸ್ಮನಿ
ಉಪಸ್ಥಿತರಿರಲಿದ್ದಾರೆ
ಸಮಾವೇಶದ ಸಂಘಟನೆಯಲ್ಲಿ ಕಾರ್ಯದರ್ಶಿಗಳಾದ ಡಾ. ಗೀತಾ ನಾಯಕ್, ಪ್ರೊ. ಸಂದೇಶ
ಎಚ್, ಪಲ್ಲವಿ ಎಚ್.ಎಸ್., ಖಜಾಂಚಿಗಳಾಗಿ ಪ್ರೊ.ಚಂದ್ರಶೇಖರ್, ಪ್ರೊ.ನಮೃತಾ, ಪ್ರೊ.
ಶ್ರೀಕಾಂತ್ ನಾಯ್ಕ ಮತ್ತು ಕಾಲೇಜಿನ ಉಪನ್ಯಾಸಕ ವೃಂದ ತೊಡಗಿಕೊಂಡಿದ್ದಾರೆ