ಹೊನ್ನಾವರ: ನಾಡಿನ ಭಕ್ತ ಸಮೂಹವನ್ನು ತನ್ನತ್ತ ಸೆಳೆದ ಶ್ರೀಕ್ಷೇತ್ರ ಬಂಗಾರಮಕ್ಕಿ ವೀರಾಂಜನೇಯ ದೇಗುಲದಲ್ಲಿ ಕಾರ್ತಿಕ ಬಹುಳ ಅಮವಾಸ್ಯೆಯಂದು ಮಹಾ ದೀಪೋತ್ಸವ ನೆರವೇರಿತು.
ಸಮಾರು ೧ ತಿಂಗಳಿAದ ನಡೆದ ಕಾರ್ತಿಕ ದೀಪೊತ್ಸವದ ಅಂತಿಮ ದಿನದಂದು ಭಜನೆ, ಪಲ್ಲಕ್ಕಿ ಉತ್ಸವ, ತೊಟ್ಟಿಲೋತ್ಸವ ಹಾಗೂ ಮಹಾ ಪೂಜೆ, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮಹಾ ದೀಪೋತ್ಸವ ನೇರವೇರಿತು.
ದೀಪೋತ್ಸವದಲ್ಲಿ ಪಾಲ್ಗೊಂಡ ಭಕ್ತರು ಹಚ್ಚಿದ ಸಾವಿರಾರು ಹಣತೆಗಳ ಬೆಳಕಿನ ಪ್ರಭೆಯಿಂದ ಶ್ರೀ ಕ್ಷೇತ್ರ ಬಂಗಾರಮಕ್ಕಿ ಮಿನುಗಿತು.ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಅವರ ತುಲಾಭಾರವನ್ನೂ ಭಕ್ತರು ನಡೆಸಿಕೊಟ್ಟು ದೇಗುಲದಲ್ಲಿ ನಿತ್ಯ ನಡೆವ ಅನ್ನದಾನಕ್ಕೆ ಅಕ್ಕಿ ಕಾಣಿಕೆ ನೀಡಿದರು.
ಕೇವಲ ಧಾರ್ಮಿಕ ಕಾರ್ಯಕ್ರಮವನ್ನಷ್ಟೇ ಅಲ್ಲದೇ, ಶ್ರೀ ಕ್ಷೇತ್ರ ಬಂಗಾರಮಕ್ಕಿ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ಕೃಷಿ,, ಹೈನುಗಾರಿಕೆಗೂ ವಿಶೇಷ ಒತ್ತು ಕೊಟ್ಟು ಪ್ರತಿಭೆಗಳಿಗೆ ಮನ್ನಣೆ ನೀಡುತ್ತ ಬಂದಿರುವುದು ಗಮನಾರ್ಹ