ಗಂಗಾಧರ ಕೊಳಗಿ ಸಹಿತ ನಾಲ್ವರಿಗೆವನರಾಗ ಶರ್ಮ ಪುಸ್ತಕ ಪ್ರಶಸ್ತಿಪ್ರದಾನ

ಯಲ್ಲಾಪುರ : ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ವನರಾಗ ಶರ್ಮಾ ಪ್ರಶಸ್ತಿ ಪ್ರದಾನ ಸಮಾರಂಭ ಇತ್ತೀಚೆಗೆ ಪಟ್ಟಣದ ಅಡಿಕೆ ಭವನದಲ್ಲಿ ನಡೆಯಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉತ್ತರ ಕನ್ನಡ
ಜಿಲ್ಲೆ ಮತ್ತು ಯಲ್ಲಾಪುರ ತಾಲೂಕು ಘಟಕ ಹಾಗೂ ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್ ಇವುಗಳ ಸಹಯೋಗದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ವನರಾಗ ಶರ್ಮಾ ೨೦೨೧ರ ಪ್ರಶಸ್ತಿಯನ್ನು ಕ್ರಮವಾಗಿ ಟಿ.ಎಂ.ರಮೇಶ ಸಿದ್ದಾಪುರ (ದಶಕದ ಕಥೆಗಳು-ಕಥಾಸಂಕಲನ), ಡಾ. ಶೋಭಾ ನಾಯಕ ಬೆಳಗಾವಿ (ಶಚಿiÀiÁ್ಯಗರಹದ ಸುದ್ದಿಗಳು- ಕವನ ಸಂಕಲನ) ಇವರಿಗೆ ಪ್ರದಾನ
ಮಾಡಿದರೆ, ೨೦೨೨ರ ಪ್ರಶಸ್ತಿಯನ್ನು ಗಂಗಾಧರ ಕೊಳಗಿ ಸಿದ್ದಾಪುರ (ವಿಸ್ಡ್ಕಾಲ್- ಕಥಾ ಸಂಕಲನ), ಡಾಲಿ ವಿಜಯಕುಮಾರ ಸಾಗರ (ನೆಲ್ಲು ಎಸೆಯ ಬೇಡ ಮತ್ತೆ-ಕವನ ಸಂಕಲನ) ಇವರಿಗೆ ಪ್ರದಾನ
ಮಾಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ಉ.ಕ.ಜಿಲ್ಲಾ ಮತ್ತು ಯಲ್ಲಾಪುರ ತಾಲೂಕು ಘಟಕ, ಕರ್ನಾಟಕ ಗಮಕ ಕಲಾ ಪರಿಷತ್ ಬೆಂಗಳುರು ಸಹಯೋಗದಲ್ಲಿಯಲ್ಲಾಪುರದ ಅಡಕೆ ಭವನದಲ್ಲಿ ೨ ದಿನಗಳ ಸಾಹಿತ್ಯ ಮತ್ತು ಗಮಕ ಅಧಿವೇಶನಜರುಗಿತು.
ಈ ಸಂದರ್ಭದಲ್ಲಿ ಸ್ವರ್ಣಿಮ ಭಾರತಿ ಸಾಹಿತ್ಯ ಸಮ್ಮಾನ್ ವನರಾಗ ಶರ್ಮಾ ಪುಸ್ತಕ ಪ್ರಶಸ್ತಿ ಕಾರ್ಯಕ್ರಮಜರುಗಿತು. ಕಥಾ ಸಂಕಲಗಳಿಗೆ ೨೦೨೧ರ ಪ್ರಶಸ್ತಿಯನ್ನು ಟಿ.ಎಂ.ರಮೇಶಅವರದಶಕದ ಕಥೆಗಳು, ಕಥಾ
ಸಂಕಲನಕ್ಕೆ, ೨೦೨೨ರ ಪ್ರಶಸ್ತಿಯನ್ನು ಗಂಗಾಧರ ಕೊಳಗಿಯವರ ಮಿಸ್ಡ ಕಾಲ್‌ ಕಥಾಸಂಕಲನಕ್ಕೆ, ಕವಿತಾ ಸಂಕಲನಕ್ಕೆ ೨೦೨೧ರ ಪ್ರಶಸ್ತಿಯನ್ನು ಡಾ| ಶೋಭಾ ನಾಯಕ ಬೆಳಗಾವಿ ಅವರ ಶಯ್ಯಾಗೃಹದ ಸುದ್ದಿಗಳು ಕವಿತಾ
ಸಂಕಲನಕ್ಕೆ ಪ್ರದಾನ ಮಾಡಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ‘ಯಾವುದೇ ಪ್ರಶಸ್ತಿಗೂ ವಶೀಲಿ, ಪ್ರಭಾವ ಇದ್ದೇ ಇರುತ್ತದೆ. ಸಾವಿರಾರು ಕೃತಿಗಳ ನಡುವೆ ಈ ಸಂಕಲನಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಯಾರಿಂದಲೂ ಒತ್ತಡವಾಗಲೀ, ಪ್ರಭಾವವಾಗಲೀ ಕಿಂಚಿತ್ತೂ ಬಂದಿಲ್ಲ ಎನ್ನುವದು ಬಹುಮುಖ್ಯ ಸಂಗತಿ. ಕೃತಿಗಳ ಸತ್ವವನ್ನು ಗುರುತಿಸಿ ಆಯ್ಕೆ ಮಾಡಲಾಗಿದೆ.
ವನರಾಗ ಶರ್ಮಾ ಓರ್ವ ಪ್ರತಿಭಾವಂತ ಸಾಹಿತಿ, ಕವಿ. ನಿಜವಾಗಿ ಅವರನ್ನು ಎಷ್ಟರ ಮಟ್ಟಿಗೆ ಗುರುತಿಸಿ ಗೌರವಿಸಬೇಕಿತ್ತೋ ಆ ಕೆಲಸ ಆಗದಿರುವದು ದುರದೃಷ್ಟದ ಸಂಗತಿ. ಅವರ ಹೆಸರಿನಲ್ಲಿ ಇಂಥ ಮಹತ್ವದ ಪ್ರಶಸ್ತಿಯನ್ನು ನೀಡುತ್ತಿರುವದು ಸಾಹಿತ್ಯ ಲೋಕಕ್ಕೆ ಹೆಮ್ಮೆಯ ಸಂಗತಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಸಾಹಿತಿ ವನರಾಗ ಶರ್ಮಾ ‘ಈ ಪ್ರಶಸ್ತಿಯನ್ನು ತಮ್ಮ ಪುತ್ರರಾದ ಡಾ| ಅರವಿಂದ ಶರ್ಮಾ ಹಾಗೂ ಪ್ರಶಾಂತ ಶರ್ಮಾ ಅವರು ರೂಪಿಸಿದ ಸ್ವರ್ಣಿಮ ಸಾಹಿತ್ಯ ಸಮ್ಮಾನ್ ಸಂಸ್ಥೆಯಿoದ ನೀಡಲಾಗುತ್ತಿದೆ. ಪ್ರಶಸ್ತಿಗಾಗಿ ಬಂದ ಹಲವಾರು ಕೃತಿಗಳನ್ನು ಓದಿ, ಆಯ್ಕೆ ಮಾಡಿದ ಹಿರಿಯ ಸಾಹಿತಿಗಳಾದ ಎಂ.ಕೆ.ನಾಯಕ ಹಾಗೂ ಭಾಗಿರಥಿ ಹೆಗಡೆಯವರಿಗೆ ಮತ್ತು ಸಂಘಟನೆಗೆ ಕೃತಜ್ಞತೆ ತಿಳಿಸಿದರು.

ವೇದಿಕೆಯಲ್ಲಿ ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ, ಸ್ವರ್ಣಿಮ ಸಾಹಿತ್ಯ ಪ್ರತಿಷ್ಠಾನದ ಡಾ |ಅರವಿಂದ ಶರ್ಮಾ ಉಪಸ್ಥಿತರಿದ್ದರು. ಪತ್ರಕರ್ತ ನಾಗರಾಜ ಮದ್ಗುಣಿ ಸ್ವಾಗತಿಸಿದರು.
ಶ್ರೀರಾಮ ಲಾಲಗುಳಿ ವಂದಿಸಿದರು. ಸಿ.ಎಸ್.ಚಂದ್ರಶೇಖರ ನಿರೂಪಿಸಿದರು.

Leave a Reply

Your email address will not be published. Required fields are marked *