ಹಳೆಪೈಕ ಕಥೆಗಳು ಮನುಷ್ಯತ್ವ ಜಿನುಗಿಸುತ್ತವೆ : ವಿ.ಗ.ನಾಯಕ

ಕುಮಟಾ: ‘ಹಳೆಪೈಕರ ಕಥೆಗಳು ಕೇವಲ ಒಂದು ಜನಾಂಗದ ಕಥೆಗಳಾಗದೇ ಮಾನವ ಜನಾಂಗದ ಕಥೆಗಳಾಗಿವೆ. ಮಾನವ ಜನಾಂಗದ ಅಭಿವೃದ್ಧಿಯ ಕಡೆ ಅವು ಕೇಂದ್ರೀಕರಿಸಿವೆ. ಅವು ಮನುಷ್ಯ್ತ್ವ ಜಿನುಗಿಸುತ್ತವೆ. ಮೌಖಿಕ ಸಂಪ್ರದಾಯದ ದಂತಕಥೆ ವ್ಯಾಪಕವಾಗಿ ಪ್ರಸಾರವಾದುದಾಗಿದ್ದು ಅವು ಇಲ್ಲಿ ನಾಗರಿಕ ರೀತಿಯಲ್ಲಿ ಹರಿದು ಬಂದಿವೆ. ಕೂಜಳ್ಳಿ ಮೋಹನ ನಾಯ್ಕರು ಅದ್ಭುವಾಗಿ ಈ ಕಥೆಗಳನ್ನು ಸಂಶೋಧಿಸಿ ಕಥೆಗಾರರಿಂದ
ಸಂಗ್ರಹಿಸಿಕೊಟ್ಟಿದ್ದಾರೆ’ ಎಂದು ಖ್ಯಾತ ಜನಪದ ಸಾಹಿತಿ, ವಿಮರ್ಶಕ ಮತ್ತು ಸಂಶೋಧಕ ವಿ. ಗ. ನಾಯಕ ಅಭಿಪ್ರಾಯಟ್ಟರು. ಕೂಜಳ್ಳಿ ಮೋಹನ ನಾಯ್ಕ ಅವರ ಹಳೆಪೈಕರ ಕಥೆಗಳು ಮತ್ತು ಒಗಟುಕಟ್ಟು
ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.ಹಳೆಪೈಕರ ಮೂಲ ನೆಲೆ ಮತ್ತು ಜೀವನದ
ಒಳಹೊರಗನ್ನು ವಿಶ್ಲೇಷಿಸುತ್ತಾ ‘ಹಳೆಪೈಕರಕಥೆಗಳು’ ಕೃತಿಯನ್ನು ಸಾಹಿತಿ ಹಾಗೂ ಸಂಪ್ರಭಾದ ಸಂಪಾದಕ ಸುಮುಖಾನಂದ ಜಲವಳ್ಳಿ ಹಾಗೂ ‘ನುಡಿಕಟ್ಟು ಪುಸ್ತಕವನ್ನು ಶಿಕ್ಷಕ-ಸಾಹಿತಿ ಎಂ. ಕೆ. ಲಕ್ಷಿö್ಮÃ
ಪರಿಚಯಿಸಿದರು. ಅತಿಥಿಗಳಾಗಿ ಆಗಮಿಸಿದ ಹೊನ್ನಾವರ ಎಸ್. ಡಿ. ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರೂ, ಸಾಹಿತಿಗಳೂ ಆದ ಡಾ. ಎಸ್. ಡಿ. ಹೆಗಡೆ ‘ಜನಪದವು ವಿಶ್ವವ್ಯಾಪಿ ಗುಣವನ್ನು ಹೊಂದಿದೆ.
ಸoಪೂರ್ಣ ಮನುಕುಲದ ಅಭಿವೃದ್ಧಿಯೇ ಇಲ್ಲಿ ಮುಖ್ಯವಾಗಿದೆ. ಉಪಭಾಷೆಯ ಅಧ್ಯಯನಕ್ಕೆ ಅತಿ
ಅಮೂಲ್ಯವಾದ ಆಕರವನ್ನು ಮೋಹನ ನಾಯ್ಕರು ಆಡುಭಾಷೆಯಲ್ಲಿಯೇ ಒದಗಿಸಿಕೊಟ್ಟಿದ್ದಾರೆ’ ಎಂದು
ಅಭಿಪ್ರಾಯಪಟ್ಟರು. ‘ನಶಿಸಿಹೋಗುತ್ತಿರುವ ಜನಪದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಾಗಿ ಹಿಡಿದಿಡುವ

ಪ್ರಯತ್ನ ಇದಾಗಿದೆ’ ಎಂದು ಉಡುಪಿಯ ಎಂ.ಜಿ.ಎA. ಸಂಜೆ ಕಾಲೇಜಿನ ಪ್ರಾಚಾರ್ಯರು ಮತ್ತು ಸಾಹಿತಿಗಳಾದ ಡಾ.
ದೇವಿದಾಸ ನಾಯಕರು ನುಡಿದರು. ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಪಾಂಡುರoಗ ವಾಗ್ರೇಕರ ಅಧ್ಯಕ್ಷತೆವಹಿಸಿ ಮಾತನಾಡಿದರು. ಕೃತಿಕಾರ ಮೋಹನ ನಾಯ್ಕ ತನ್ನ ಕೃತಿ ರಚನೆಗೆ ಪೂರಕವಾಗಿ
ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು. ರೋಟರಿ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡ ಈಕಾರ್ಯಕ್ರಮದಲ್ಲಿ ಕೃತಿಕಾರ ಮೋಹನ ನಾಯ್ಕರನ್ನುರೋಟರಿ ಪರವಾಗಿ ರೋಟರಿ ಅಧ್ಯಕ್ಷ ಎನ್. ಆರ್. ಗಜು ಹಾಗೂ
ಕಾರ್ಯದರ್ಶಿ ರಾಮದಾಸ ಗುನಗಿ ಸನ್ಮಾನಿಸಿದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕ
ವಿಷ್ಣು ಎನ್. ಭಟ್ ಸ್ವಾಗತಿಸಿ ಪರಿಚಯಿಸಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿದರು. ಶಿಕ್ಷಕ ಪ್ರದೀಪ ನಾಯಕ
ವಂದಿಸಿದರು. ಕಾರ್ಯಕ್ರಮದಲ್ಲಿ ಜಿ.ವಿ.ಹೆಗಡೆ ಹುಣ್ಸೆಮಕ್ಕಿ, ಮಂಜುನಾಥ ಗಾoವಕರ ಬರ್ಗಿ, ತಿಗಣೇಶ ಮಾಗೋಡ, ಎಂ. ಕೆ. ಪಟಗಾರ ಕಾಗಾಲ, ಸಿ. ಎಂ. ಪಟಗಾರ, ಭಾಗವತ ಜಿ. ಎಲ್. ನಾಯ್ಕ, ಶ್ಯಾಮಲಾ
ಕರ್ಕಿಕೋಡಿ, ಎಸ್. ವಿ. ಹೆಗಡೆ, ಮೀನಾಕ್ಷಿ ನಾಯ್ಕ ಮಂಕಿ, ಗೋವಿoದ ನಾಯ್ಕ ಕೋನಳ್ಳಿ, ಅರುಣ ನಾಯ್ಕ ಚಂದಾವರ, ದೀಪಕ ಆಚಾರಿ ದೀವಳ್ಳಿ, ನಾರಾಯಣ ಮುಕ್ರಿ ಹೆಬ್ಳೆಕೇರಿ, ಬಾಳಾ ನಾಯ್ಕ ಮಿರ್ಜಾನ್ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *