ಬಲ್ಗೇರಿಯಾದ ಒಂದು ಕತೆಯಲ್ಲಿ ಒಮ್ಮೆ ಒಂದು ಊರಿಗೆ ಹೇಳತೀರದ ಬರಗಾಲ ಬರುತ್ತದೆ. ಎಲ್ಲರೂ ಸೇರಿ ಹೋಗಿ
ಊರ ಹಿರಿಯ ವ್ಯಕ್ತಿಯೊಬ್ಬನಲ್ಲಿ ಪರಿಹಾರ ಕೇಳುತ್ತಾರೆ. ಊರ ಹಿರಿಯ, ಊರ ಹೊರಗಿನ ಬಂಡೆಗಲ್ಲಿನ ರಾಶಿಯನ್ನು ಏರಿದರೆ ಅಲ್ಲಿ ಖಂಡಿತಾ ಪರಿಹಾರವಿದೆ ಎನ್ನುತ್ತಾನೆ. ಎಲ್ಲರೂ ಸೇರಿ ಊರಿನ ಒಬ್ಬ ಯುವಕನನ್ನು ಬಂಡೆ ಏರಲು ತಯಾರು ಮಾಡಿ ಇದ್ದ ಆಹಾರ, ನೀರನ್ನಲ್ಲೆ ಪ್ಯಾಕ್ ಮಾಡಿ ಅವನ ಚೀಲಕ್ಕೆ ತುಂಬುತ್ತಾರೆ. ಕಾಲು ಭಾಗದಷ್ಟು ಬಂಡೆಯ ಏರಿದ ಯುವಕನಿಗೆ ಒಂದು ಧ್ವನಿ,
ನೀನು ಇನ್ನೂ ಎತ್ತರ
ಏರಲು ನಿನ್ನ ಕಣ್ಣುಗಳನ್ನು ತೆಗೆದು ಹಾಕಿ ನಾವು ಕೊಡುವ ಕಣ್ಣು ಧರಿಸಬೇಕು&#೩೯; ಎನ್ನುತ್ತದೆ. ತನ್ನ
ಊರಿನವರ ಹಾಹಾಕಾರ, ಹಸಿವು, ನೀರಡಿಕೆ ನೋಡುತ್ತಿದ್ದ ಯುವಕ, ಆಯ್ತು; ಎಂದು ಬೇರೆಯೇ ಕಣ್ಣು ಧರಿಸಿ ಮತ್ತೆ ಮೇಲೇರುತ್ತಾನೆ. ಆಗ ಇನ್ನೊಂದು ಧ್ವನಿ,
ನೀನು ಇನ್ನೂ ಮೇಲೇರಲು ನಾವು ಕೊಡುವ
ಕಿವಿಗಳನ್ನು ಧರಿಸಬೇಕು; ಎನ್ನುತ್ತದೆ. ನನ್ನವರ ಬರಗಾಲ ಪರಿಹಾರವಾಗುವುದಾದರೆ ಅದೂ ಆಗಲಿ ಎಂದು
ಒಪ್ಪಿಕೊಳ್ಳುತ್ತಾನೆ. ಬೇರೆ ಕಣ್ಣು, ಕಿವಿಗಳನ್ನು ಧರಿಸಿ ಬಂಡೆ ಏರುತ್ತಿದ್ದ ಯುವಕನಿಗೆ ಈಗ ತನ್ನವರ ಆಕ್ರಂದನ ಕೇಳಿಸುವುದಿಲ್ಲ, ಕರುಣೆಯಿಂದ ಬೇಡಿಕೊಳ್ಳುವುದು ಕಾಣಿಸುವುದಿಲ್ಲ. ಆದರೆ ಅವನ ಹೃದಯಕ್ಕೆ ಅವರ ಕಷ್ಟದ ಅರಿವಿರುತ್ತದೆ. ಮೂರನೇ ಧ್ವನಿ, `ನೀನು ಬಂಡೆಗಲ್ಲು ಏರಿ ಅದರ ತುದಿಯ ಮೇಲೆ ನಿಲ್ಲಲು ನಿನ್ನ ಹೃದಯ ತೆಗೆದಿಟ್ಟು ನಾವು ಕೊಡುವ ಹೃದಯ ಧರಿಸಬೇಕು&; ಎನ್ನುತ್ತದೆ. ನನ್ನವರ ಸಮಸ್ಯೆ ನಿವಾರಣೆಯಾಗುವುದಾದರೆ ಅದಕ್ಕೂ ಸಿದ್ಧ ಎಂದ ಯುವಕ.
ಬೇರೆ ಹೃದಯ ಧರಿಸಿ ಬಂಡೆಗಲ್ಲು ಏರಿ ನಿಂತಾಗದ ಅನವಿಗೆ ತನ್ನವರ ಕಷ್ಟ ಕಾಣಿಸುವುದಿಲ್ಲ, ಆಕ್ರಂದ
ಕೇಳಿಸುವುದಿಲ್ಲ, ಅವರು ಬೇಯುವ ಪರಿಯ ಅರಿವೂ ಆಗುವುದಿಲ್ಲ. ಸಹಜ ವಾತಾವರಣದಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ ಉನ್ನತ ಶಿಕ್ಷಣದತ್ತ ತೆರಳಿದಾಗ ಬಂಡೆ ಏರಿದ ಯುವಕನಂತೆ ತನ್ನತನವನ್ನೇ ಕಳೆದುಕೊಳ್ಳುವ
ಹಂತ ತಲುಪುತ್ತಾನೆ ಎನ್ನುವುದು ಶಾಲಾ ಪಠ್ಯ-ಪುಸ್ತಕ ಸಮಿತಿಗಳ ಸಂಚಾಲಕ, ಕನ್ನಡ ವಿಮರ್ಶಕ, ಇಂಗ್ಲೀಷ್
ಪ್ರಾಧ್ಯಾಪಕ, ಡಾ. ಬಾಳಿಗಾ ಕಲಾ-ವಿಜ್ಞಾನ ಕಾಲೇಜು ನಿವೃತ್ತ ಪ್ರಾಚಾರ್ಯ ಡಾ. ಎಂ.ಜಿ.ಹೆಗಡೆ ಅವರ ಅಭಿಪ್ರಾಯ
.

ಸೋಮವಾರ ಕುಮಟಾದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಹಂತದಲ್ಲಿಸಂ ಶೋಧನೆ&#೩೯;
ಗ್ರೇಸ್-೨೦೨೩&#೩೯; ಕುರಿತ ಅಂತಾರಾಷ್ಟಿçÃಯ ಸಮ್ಮೇಳನದಲ್ಲಿ ತಮ್ಮ
ಪ್ರಬಂಧ ಮಂಡನೆ ಸಂದರ್ಭದಲ್ಲಿ ಡಾ. ಎಂ.ಜಿ. ಹೇಳಿದ ಪುಟ್ಟ ಕತೆಯಿದು. ` ದೇಶದ ಇತಿಹಾಸ ಓದಿ ಸಂಶೋಧನೆ
ನಡೆಸುವ ನಮಗೆ ನಮ್ಮ ಮುತ್ತಜ್ಜನ ಹೆಸರೇ ಗೊತ್ತಿರುವುದಿಲ್ಲ. ದೇಶದ ಅರ್ಥ ವ್ಯವಸ್ಥೆ ಬಗ್ಗೆ ಪ್ರಬಂಧ
ಮoಡಿಸುವ ನಮ್ಮ ವಿದ್ಯಾರ್ಥಿಗಳಿಗೆ ಊರಿನ ಗ್ರಾಮ ಪಂಚಾಯ್ತಿ ಬಜೆಟ್ ಅರಿವಿರುವುದಿಲ್ಲ. ಅನುಭವಕ್ಕೆ ಬಾರದ ಇಂಥ ಸoಗತಿಗಳ ಬಗ್ಗೆ ನಮ್ಮ ಎಳೆಯರು ಸಂಶೋಧನೆ ನಡೆಸಲು ಸಾಧ್ಯವೇ? ಎನ್ನುವುದು ಸಮಾವೇಶದಲ್ಲಿ
ಅವರು ಎತ್ತಿದ ದೊಡ್ಡ ಪ್ರಶ್ನೆ ಹಲವರನ್ನು ಜಿಜ್ಞಾಸೆಗೆ ನೂಕಿತು.
ದಿಕ್ಸೂಚಿ ಭಾಷಣ ಮಾಡಿದ ಭೌತಶಾಸ್ತçದ ಪ್ರಖ್ಯಾತ ಪ್ರಾಧ್ಯಾಪಕ ಡಾ. ಬಿ.ಜಿ. ಮೂಲಿಮನಿ,
ಸಂಶೋಧನೆಯನ್ನು ಸತ್ಯ ಹುಡುಕುವುದಕ್ಕಾಗಿ ಹೆಂಡತಿ, ಮಕ್ಕಳು ರಾಜ್ಯ ಎಲ್ಲವನ್ನು ತ್ಯಜಿಸಿz ಬುದ್ಧನಿಗೆ
ಹೋಲಿಸಿದರು. ನೊಬೆಲ್ ಪುರಸ್ಕೃತ ಡಾ. ಸಿ.ವಿ. ರಾಮನ್ಸಂ ಶೋಧನೆಗಾಗಿ ತಮ್ಮ ಅತ್ಯುನ್ನತ ಹುದ್ದೆಯನ್ನು
ತ್ಯಜಿಸಿದನ್ನು ಉದಾಹರಿಸಿದರು. ಸಂಶೋಧನೆ ಎನ್ನುವುದು ವಿದ್ಯಾರ್ಥಿಗಳು ಎಲ್ಲವನ್ನು ಮರೆತು ವಿನೀತ ಭಾವದಿಂದಕೈಕೊಳ್ಳುವ ಮುಗ್ಧ ಕಾರ್ಯ, ಬಾಲಕ ಥಾಮಸ್ ಆಲ್ವಾ ಎಡಿಸನ್ ಚಡ್ಡಿ ಕಳಚಿ ಕಾವು ಕೊಡಲು ಮೊಟ್ಟೆಯ ಮೇಲೆ ಕುಳಿತ ಹಾಗೆ ಎಂದರು.ಸಮಾಜ ವಿಜ್ಞಾನಗಳಲ್ಲಿ ಸಂಶೋಧನೆ ನಡೆಸುವುದು ನಿಜಕ್ಕೂ ಒಂದು ಸವಾಲು. ಕಡಿಮೆ ಖರ್ಚಿನಲ್ಲಿ ನಡೆಸಬಹುದಾದ ಸಮಾಜ ವಿಜ್ಞಾನ ಸಂಶೋಧನೆಗೆ ಪ್ರತ್ಯೇಕ ಪ್ರಯೋಗಾಲಯ ಬೇಡವೇ ಬೇಡ. ಇಡೀ ಜಗತ್ತೇ ಅದಕ್ಕೆ ಪ್ರಯೋಗಾಲಾಯ ಎನ್ನುವುದನ್ನು ಕಾನ್ಪುರ್ ಐ.ಐ.ಟಿ ಯ ನಿವೃತ್ತ ಮನಶಾಸ್ತç ಪ್ರಾಧ್ಯಾಪಕಿ ಡಾ. ಲೀಲಾವತಿ ಕೃಷ್ಣನ್ ಅವರ ಸಲಹೆಯಾಗಿತ್ತು. ಕೊನೆಯಲ್ಲಿ
ಜ್ಞಾನ ಮತ್ತು ಮಾನವೀÃಯ
ಎಳೆಯನ್ನು ಹಿಡಿದುಕೊಂಡು ವಿದ್ಯಾರ್ಥಿಗಳು ಸಂಶೋಧನೆ ನಡೆಸಿ ಯಶ ಕಾಣುವ ಅವಕಾಶ ಎಂದಿಗೂ
ತಪ್ಪಿಸಿಕೊಳ್ಳಬಾರದು ಎನ್ನುವುದನ್ನು ಹೇಳಿ ಸಂಚಲನ ಮೂಡಿಸಿದವರು ಕುಮಟಾದ ಕುವರಿ, ಬ್ರುನೆಯಿ ವಿವಿ ಯಲ್ಲಿ ಸಹಾಯಕಪ್ರಾಧ್ಯಾಪಕಿಯಾಗಿ ಕೆಲಸ ಮಾಡುತ್ತಿರುವು
ಡಾ. ಪೂಜಾ ಎಸ್. ನಿರ್ವತ್ತ ಪ್ರಾಚಾರ್ಯೆ ಸರಸ್ವತಿ ಕಳಸದ್, ಅನಕ್ಷರಸ್ಥರಲ್ಲೂ ನಾವು ಸಂಶೋಧನೆಯ
ಬೆಳಕನ್ನು ಕಂಡುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಹೂ ಹಣ್ಣು ವ್ಯಾಪಾರಿಗಳ ಬದುಕನ್ನು
ಸೂಕ್ಷö್ಮವಾಗಿ ಗಮನಿಸಿದರೆ ಅವರಲ್ಲೂ ಸಂಶೋಧನೆಯ ವಸ್ತು ಗ್ರಹಿಸಬಹುದಾಗಿದೆ ಎಂದರು.
ಬಿ.ಎಲ್.ಡಿ.ಇ. ವಿವಿ ಪ್ರಾಧ್ಯಾಪಕಮಡಾ. ಎ.ವಿ.ರಘು, ರಸಾಯನ ಶಾಸ್ತ ಪ್ರಾಧ್ಯಾಪಕ ಡಾ. ಕೆ.ಎಸ್.ರಾಣೆ, ರಷ್ಯಾದ ಸಂದರ್ಶಕ ಪ್ರಾಧ್ಯಾಪಕ ಯೂರಿ ಪೆಟೆನವ್ ವಿಚಾರ ಸಂಕಿರಣದಲ್ಲಿ
ಮಾತನಾಡಿದನ್ನು ವಿದ್ಯಾರ್ಥಗಳು ಕುತೂಹಲದಿಂದ ಗಮನಿಸಿದರು.
ಹೊಸ ಹುಡುಗನ ಹುರುಪಿನಲ್ಲಿ ಸಮ್ಮೇಳನದ ನೇತೃತ್ವ ವಹಿಸಿದ್ದ ಕಾಲೇಜಿನ ಭೌತ ಶಾಸ್ತ ವಿಭಾಗದ
ಮುಖ್ಯಸ್ಥ ಪ್ರೊ. ಐ.ಕೆ. ನಾಯ್ಕ ಮ್ಯಾನ್ ಆಪ್ ದಿ ಮ್ಯಾಚ್ ಆಗಿದ್ದು ವಿಶೇಷ. ಕಾಲೇಜಿನ ಪ್ರಾಚಾರ್ಯೆ ಪ್ರೊ. ವಿಜಯಾ ನಾಯ್ಕ, ಪ್ರೊ. ಡಿ.ಎಲ್.ಹೆಬ್ಬಾರ್, ಸಂಚಾಲನ ಸಮಿತಿಯ ಪ್ರೊ. ಕೃಷ್ಣ ನಾಯ್ಕ, ಡಾ. ಗೀತಾ ನಾಯಕ, ಪ್ರೊ. ಸಂದೇಶ ಎಚ್., ಡಾ. ವಿನಾಯಕ ನಾಯ್ಕ, ಪ್ರೊ. ನಮೃತಾ ಹೆಗ್ಡೆ, ಪ್ರೊ. ಪ್ರತಿಭಾ ಭಟ್ಟ ಮುಂತಾದವರು ಇದ್ದರು.