ಸ್ವಾತಂತ್ರ್ಯ ಚಳುವಳಿ ನಡೆದದ್ದು ಇತಿಹಾಸ. ಇನ್ನು ನಮ್ಮ ಮುಂದೆ ಇರುವುದು ದೇಶ
ಕಟ್ಟುವ ಸವಾಲು. ಅಂದರೆ ಹೊಸ ತಲೆಮಾರನ್ನು ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ
ಅವರ ಬದುಕನ್ನು ಕಟ್ಟುವುದರ ಮೂಲಕ ದೇಶ ಕಟ್ಟಬೇಕಾಗಿದೆ. ಯೂನಿಯನ್ ಬ್ಯಾಂಕ್
ಆಫ್ ಇಂಡಿಯಾದ ನಿವೃತ್ತ ಮುಖ್ಯ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ ಅವರು ಕಳೆದ 38
ವರ್ಷಗಳಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತೆ ಬ್ಯಾಂಕಿಂಗ್ ಮತ್ತು ಇತರ
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸುವ ಮೂಲಕ ದೇಶ ಕಟ್ಟುವ ಚಳುವಳಿಯನ್ನು
ಅಕ್ಷರಶಃ ಮಾಡುತ್ತಿದ್ದಾರೆ ಎಂದು ಕವಿ, ಸಾಹಿತಿ ಅರವಿಂದ ಕರ್ಕಿಕೋಡಿ ಅವರು
ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಕೆ.ಎಲ್.ಇ. ಕಾಲೇಜಿನಲ್ಲಿ ನಾಲ್ಕು ದಿನಗಳ ಕಾಲ ಆರ್.ಕೆ.ಬಾಲಚಂದ್ರ
ಅವರ ನೇತೃತ್ವದಲ್ಲಿ ನಡೆದ ಬ್ಯಾಂಕಿಂಗ್ ಸರ್ಟಿಫಿಕೇಶನ್ ಅಂಡ್ ಪರ್ಸನಾಲಿಟಿ
ಇಂಪ್ರೂವ್ಮೆಂಟ್ ಟ್ರೈನಿಂಗ್ ಪ್ರೋಗ್ರಾಮ್ ನ ಸಮಾರೋಪ ಸಮಾರಂಭದಲ್ಲಿ ಮುಖ್ಯ
ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತ ನಮ್ಮ ಭವಿಷ್ಯದ ನಿರ್ಮಾಣಕ್ಕೆ ನಮ್ಮಲ್ಲಿರುವ
ನೈಪುಣ್ಯತೆ ಅವಶ್ಯಕವಾಗಿದೆ. ಅದಕ್ಕಾಗಿ ಇಂತಹ ಕಾರ್ಯಗಾರ ಸಹಾಯವಾಗಲಿದೆ ಎಂದು
ತಿಳಿಸಿದರು.

ತರಬೇತಿ ನೀಡಿದ ಬೆಂಗಳೂರಿನ ಬ್ಯಾಂಕಿಂಗ್, ವ್ಯಕ್ತಿತ್ವ ವಿಕಸನ ತರಬೇತಿದಾರ ಮತ್ತು ವೃತ್ತಿ
ಮಾರ್ಗದರ್ಶಕ ಆರ್.ಕೆ.ಬಾಲಚಂದ್ರ ಅವರು ಪ್ರತಿನಿತ್ಯ ಅನೇಕ ಉದ್ಯೋಗಾವಕಾಶಗಳು
ಬರುತ್ತಿದ್ದು, ಅದನ್ನು ಎದುರಿಸಲು ಉದ್ಯೋಕಾಂಕ್ಷಿಗಳು ತಯಾರಾಗಿರಬೇಕು. ಸುಶಿಕ್ಷಿತರು
ಇಂತಹ ತರಬೇತಿಗಳಲ್ಲಿ ಬಾಗವಹಿಸಿದಾಗ ಮಾತ್ರ ಹೊರ ಜಗತ್ತಿಗೆ ತೆರೆದುಕೊಳ್ಳಲು ಸಾಧ್ಯ
ಎಂದರು.
ನಿವೃತ್ತ ಪಾಚಾರ್ಯೆ ನಾಗಮ್ಮ ಮಮದಾಪುರ್, ಬ್ಯಾಂಕಿಂಗ್ ತಜ್ಞ ಬಾಲಚಂದ್ರ ಅವರು
ಜೀವನದ ಪರೀಕ್ಷೆ ಎದುರಿಸುವುದು ಹೇಗೆ ಎಂದು ತಿಳಿಸಿಕೊಟ್ಟಿದ್ದಾರೆ. ಅದು ವಿದ್ಯಾರ್ಥಿಗಳ
ಭವಿಷ್ಯದ ಹಾದಿಗೆ ಟಾರ್ಚ್ ಬೆಳಕು ಇದ್ದಂತೆ ಎಂದು ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಅಶ್ವಥ್ ನಾರಾಯಣ ಹೆಗಡೆ,
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಬೇಕಾಗುವ ಗುಂಪು ಚರ್ಚೆ, ಮನೋ
ಸಾಮರ್ಥ್ಯ ಪರೀಕ್ಷೆ ಎದುರಿಸುವುದು,ಬ್ಯಾಂಕಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ
ಎದುರಿಸುವುದು, ಜೊತೆಗೆ ಮೌಖಿಕ ಸಂದರ್ಶನ ಎದುರಿಸು ಬಗ್ಗೂ ಕಾರ್ಯಾಗಾರ ತಮ್ಮ
ಕಾಲೇಜಿನಲ್ಲಿ ಆರ್.ಕೆ.ಬಾಲಚಂದ್ರ ಅವರು ಅರ್ಥಪೂರ್ಣವಾಗಿ ನಡೆಸಿಕೊಟ್ಟಿದೆ. ಇದು
ವಿದ್ಯಾರ್ಥಿಗಳಿಗೆ ಸದುಪಯೋಗವಾಗಿದೆ.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಹ ಸಹಸಂಚಾಲಕಿ ಶಿಲ್ಪ ಶಾನಬಾಗ್ ಉಪಸ್ಥಿತರಿದ್ದರು.
ಗೀತಾ ಗೌಡ ಸ್ವಾಗತಿಸಿದರು. ಕಾಂಚನ ನಾಯ್ಕ ವಂದಿಸಿದರು. ( ವರದಿ : ಅಕ್ಷಯಕುಮಾರ
ನಾಯ್ಕ, ಅಂಕೋಲಾ)

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ