ಡಿಸೆಂಬರ್ 31 ರ ರಾತ್ರಿ ಹತ್ತಿರವಾಗುತ್ತಿದ್ದಂತೆ ಅದೇನೋ ಹುಮ್ಮಸ್ಸು ನಮ್ಮ ಮದ್ಯೆ… ಇನ್ನೂ ಒಂದು ವಾರ ಇರುವಾಗಲೇ, ಅದೇನೇನೋ ತಯಾರಿಗಳು ನಡೆದಿರುತ್ತವೆ… ಹೋಟೆಲ್, ರೆಸಾರ್ಟ್ ಗಳ ರೂಮ್ ಗಳು ಬುಕ್ ಆಗಿ ಹೋಗಿರುತ್ತವೆ. ಇನ್ನೂ ಕೆಲವರದು ಓಪನ್ ಗ್ರೌಂಡ್ ಪಾರ್ಟಿ.. ಬೀಚ್ ಗಳು…
ಊರಿನ ಹೊರಗಿನ ನಿರ್ಜನ ಪ್ರದೇಶ… ಗುಡ್ದಗಾಡು ಪ್ರದೇಶ ಹೀಗೆ ಹತ್ತು ಹಲವು ಪ್ರದೇಶಗಳೂ ಆ ದಿನ ರಾತ್ರಿ ಪಾರ್ಟಿಯ ಪ್ಲೆ ಗ್ರೌಂಡ್ ಗಳು ಎನಿಸಿ ಬಿಡುತ್ತವೆ… ಇನ್ನೂ ಇವೆಲ್ಲದನ್ನೂ ಮೀರಿ ಸುಡಗಾಡನ್ನು ತಮ್ಮ ಪಾರ್ಟಿಗಾಗಿ ಆರಿಸಿಕೊಂಡ ಅತಿರಥ ಮಹಾರಥರನ್ನೂ ನಾನು ನೋಡಿದ್ದೇನೆ… ಹೀಗೆ ಡಿಸೆಂಬರ್ 31 ಕ್ಕೆ ಇಷ್ಟೆಲ್ಲಾ ಮಹತ್ವವನ್ನು ನೀಡುತ್ತಿರುವಾಗ ಹುಟ್ಟಿಕೊಳ್ಳುವ ಕೆಲವು ಪ್ರಶ್ನೆಗಳಿಗೆ ಉತ್ತರ ಬಹುತೇಕ ಜನರಿಗೆ ಗೊತ್ತೇ ಇಲ್ಲ.. ಅವೇನೆಂದರೆ ಡಿಸೆಂಬರ್ 31 ರ ರಾತ್ರಿಯ ಪಾರ್ಟಿ ಆಚರಣೆ ಹಳೆ ವರುಷ ಮುಗಿಯೆತೆಂದೋ ? ಅಥವಾ ಹೊಸ ವರುಷ ಬರುವುದೆಂದೋ ?, ಕಳೆದ ವರ್ಷ ಮಾಡಿದ ಸಾಧನೆಗಳ ಸಂಭ್ರಮಕ್ಕೋ ಅಥವಾ ಮಾಡಲಾಗದ ದುಃಖಕ್ಕೋ ?, ಅಥವಾ ಕನಸುಗಳನ್ನು ಹೊತ್ತು, ಇನ್ನೊಂದು ಅವಕಾಶ ಸಿಗುತ್ತಲಿದೆ ಎಂತಲೋ… ?

ನಮ್ಮ ಮದ್ಯೆ ಕೆಲವರ ಉತ್ತರ ” ಹೊಸ ವರ್ಷ ಬರುತ್ತಿದೆ ಆಲ್ವಾ.. ಅದಕ್ಕೆ ಈ ಸಂಭ್ರಮ” ಎಂದು… ಹಾಗಿದ್ದರೆ ತಮಗೆ ಕಳೆದು ಹೋದ : ಮತ್ತೆ ಸಿಗಲಾರದ ತಮ್ಮ ಜೀವಮಾನದ ಒಂದು ವರುಷದ ಬಗೆಗೆ ದುಃಖ ವಿಲ್ಲವೇ ? ಎಂಬ ಪ್ರಶ್ನೆ ಹುಟ್ಟಿದಾಗ ನಿರುತ್ತರರಾಗಬಹುದು…
ಇನ್ನೂ ಕೆಲವರ ಉತ್ತರ “ಈ ವರ್ಷ ಕಷ್ಟದಿಂದ ಕೂಡಿತ್ತು.. ಅಂತೂ ಮುಗಿಯಿತಲ್ಲ … ಅದಕ್ಕೆ ಈ ಆಚರಣೆ ” ಎಂದು ಇರಬಹುದು. ಹಾಗಿದ್ದಲ್ಲಿ “ಕಳೆದ ವರುಷದಲ್ಲಿ ಇದ್ದ ದುಃಖ, ಸೋಲು ಮುಂದಿನ ವರುಷದಲ್ಲಿಯೂ ಮುಂದುವರಿಯಬಹುದಲ್ಲ ? ಅದಕ್ಕೆ ತಮ್ಮ ತಯಾರಿ ಹೇಗಿದೆ ?” ಎಂಬ ಪ್ರಶೆಗೆ ಬಹುಶಃ ತಮ್ಮಲ್ಲಿ ಉತ್ತರವಿಲ್ಲದೆ ಇರಬಹುದು…
” ಅರೆ … ಅತಿಯಾಯಿತು…! ಒಂದು ದಿನ ಸಂಭ್ರಮಿಸುವುದಕ್ಕೆ ನೆಪವೊಂದು ಸಿಕ್ಕಿರುವಾಗ ನಮಗೆ ನಾವು ಇಷ್ಟೆಲ್ಲ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕೇ ?
ಇದು ಅತಿರೇಕ ಅನಿಸುತ್ತಿಲ್ಲವೇ ? ” ಎಂಬ ಪ್ರಶ್ನೆ ಆಗಲೇ ತಮ್ಮ ಮನವನ್ನು ಮುಟ್ಟಿರಬಹುದು.

ಹೌದು… ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ…! ಏಕೆಂದರೆ ಪಾರ್ಟಿ ನೋವು ಮರೆಸುತ್ತದೆ ನಿಜ.. ಆದರೆ ಕೆಲವು ಕ್ಷಣಗಳಿಗಾಗಿ ಮಾತ್ರ… ಜೀವನದ ನೋವನ್ನು ಅಥವಾ ಸೋಲನ್ನು ಸಂಪೂರ್ಣವಾಗಿ ಮರೆಸುವ ತಾಕತ್ತು ಆ ಪಾರ್ಟಿಗಿಲ್ಲ… ಸೋಲು ಮತ್ತು ನೋವನ್ನು ನಾವು ಮರೆಯಲೂ ಬಾರದು… ಹಾಗಂತ ಅದನ್ನು ನೆನೆದು ಕೊರಗಲೂ ಬಾರದು… ಆ ಸೋಲು ಅಥವಾ ನೋವನ್ನು ಒಂದು ಪಾಠ ವೆಂಬಂತೆ ತಿಳಿದು.. ಅದರಿಂದ ಶಾಶ್ವತವಾಗಿ ಹೊರಬರಲು ಪ್ರಯತಿಸಬೇಕು… ಇದಕ್ಕೆ ಬೇಕಾದ ಶಕ್ತಿಯನ್ನು ಪಾರ್ಟಿ ಯಿಂದ ಪಡೆಯಲಾಗದು.. ಅದನ್ನು ನಾವು ತಿಳಿದಿರಬೇಕು…
ಹಾಗಾದರೆ ಪಾರ್ಟಿ ಮಾಡುವುದು ತಪ್ಪೇ ? ಖಂಡಿತಾ ಅಲ್ಲ…
ನಾವು ಕಳೆದ ವರುಷದಲ್ಲಿ ಸಫಲ ರಾಗದೆ ಇದ್ದುದಕ್ಕೆ ” ಆ ಕಳೆದ ವರ್ಷವೇ ಕಾರಣ… ಎಂದು ದೂರುತ್ತಾ , ಸಫಲತೆ ಪಡೆಯಲು ನಮ್ಮ ಪ್ರಯತ್ನ ಸಾಲಲಿಲ್ಲ ಎನ್ನುವ ಸತ್ಯವನ್ನು ಮರೆತದ್ದು ತಪ್ಪು… ಬರುವ ಹೊಸ ವರುಷ ತನಗೆ ಸಫಲತೆಯನ್ನು ಹೊತ್ತು ತರುತ್ತದೆ ಎನ್ನುವ ಅಪನಂಬಿಕೆ ಹೊಂದುವುದು ತಪ್ಪು… ಬರುವ ಹೊಸ ವರುಷದ ಹೊಸ ಹೊಸ ಸಮಸ್ಯೆಗಳಿಗೆ ನಾವು ಸಿದ್ಧರಾಗದೆ ಇರುವುದು ತಪ್ಪು… ಅಲ್ಲವೇ ?
ಕೊನೆಯದಾಗಿ ತಮ್ಮ ಈ ವರುಷದ ಡಿಸೆಂಬರ್ ೩೧ ರ ಪಾರ್ಟಿ ಸಂಭ್ರಮದಿಂದ ಕೂಡಿರಲಿ… ನಾನು ಆಶಿಸಿದ್ದು ನಿಜವಾದ ಹಾಗು ಶಾಶ್ವತವಾದ ಸಂಭ್ರಮದಿಂದ ಕೂಡಿರಲಿ ಎಂದು…

ಲೇಖಕರು :
ರಾಘವೇಂದ್ರ ಲಕ್ಷ್ಮೇಶ್ವರ್
Founder & Creative Head
Grapito Desings (Design and Marketing agency)