ಮನದ ಗೋಡೆ
ಮನಸೊಂದು
ಇದ್ದಿದ್ದರೆ ಅವರಲ್ಲಿ
ಲಯಬದ್ಧ ಸ್ವರ
ಎಬ್ಬಿಸಬಹುದಿತ್ತು,

ಬನದೊಳು ಹೊಕ್ಕು
ಕಡಿದ ಬಿದಿರು
ಕೊಳಲಾಗಿ, ಸ್ವರವಾಗಿ
ಯಾರದೋ ಕರ ಕರೆಗೆ
ಇನ್ನಾರೋ ಗಾನವಾದರೂ
ಗಾನವಾಗುತ್ತಿಲ್ಲ
ಅವರು ಕೊಳಲಾಗುತ್ತಿದ್ದಾರೆ.

ಮನಸೊಂದು
ಇದ್ದಿದ್ದರೆ ಅವರಲ್ಲಿ
ಹೊಂಬೆಳಕನ್ನು
ಹರಡಬಹುದಿತ್ತು.
ಮಣ್ಣೊಳಗಿನ ಮಡ್ಡಿ
ಹಣತೆಯಾಗಿ
ಯಾರದೋ ಅಳುಕಿಗೆ
ಇನ್ನಾರೋ ಬೆಳಕಾಗಿ
ಕರಿಗತ್ತಲನ್ನು
ಓದ್ದೋಡಿಸಿದಾಗಲೂ
ಬೆಳಕಾಗುತ್ತಿಲ್ಲ
ಅವರು ಹಣತೆಯಾಗುತ್ತಿದ್ದಾರೆ.
ದಿನೇಶ್ ಹೊಳ್ಳ