ಹಾವೇರಿ ‘ಲೋಕ’ ಸಮರದ ಪಿಚ್ ಬದಲಾಗುತ್ತಿದೆ; ಮಗನಿಗೆ ಕೇಸರಿ ಟಿಕೆಟ್‌ ಕೊಡಿಸಲು ಈಶ್ವರಪ್ಪಗೆ ಸಾಧ್ಯವಾದೀತಾ?

ಇನ್ನೇನು ‘ಲೋಕ ಯುದ್ಧ’ ಘೋಷಣೆಯಾಗುತ್ತದೆ ಎಂಬಂಥ ಕದನ ಕುತೂಹಲದ ಕಾಲವಿದು. ಲಿಂಗಾಯತ ಹೃದಯ ಸೀಮೆ ಎನ್ನಲಾಗುತ್ತಿರುವ ಹಾವೇರಿ-ಗದಗ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾರು ಜಗ ಜಟ್ಟಿಯಾಗಬಹುದು; ಸೋಲು-ಗೆಲುವು ಏನಾಗಬಹುದು ಎಂಬ ‘ಮಾತುಕತೆ’ ಜೋರಾಗುತ್ತಿದೆ.

ಧಾರವಾಡ ದಕ್ಷಿಣವೆಂದು ಗುರುತಿಸಲಾಗುತ್ತಿದ್ದ ಈ ಲೋಕಸಭಾ ಕ್ಷೇತ್ರ 2008 ರಲ್ಲಾದ ಪಾರ್ಲಿಮೆಂಟ್‌ ಕ್ಷೇತ್ರಗಳ ಪುನರ್ವಿಂಗಡನೆಯ ಬಳಿಕ ಹಾವೇರಿ ಕ್ಷೇತ್ರವೆಂದು ನಾಮಕರಣಗೊಂಡಿದೆ .ಹಾವೇರಿ ಜಿಲ್ಲೆಯ ಐದು ಹಾಗು ಗದಗ ಜಿಲ್ಲೆಯ ಮೂರು ಅಸೆಂಬ್ಲಿ ಕ್ಷೇತ್ರಗಳು ಹಾವೇರಿ ಪಾರ್ಲಿಮೆಂಟ್‌ ಕ್ಷೇತ್ರದವ್ಯಾಪ್ತಿಯಲ್ಲಿದೆ. ಕಾಂಗ್ರೆಸ್‌ ಪಾಲಿಗಿದು ‘ಮುಸ್ಲಿಮ್‌ ಮೀಸಲುಕ್ಷೇತ್ರ’. ಲಾಗಾಯ್ತಿನಿಂದಕಾಂಗ್ರೆಸ್‌ ಮುಸ್ಲಿಮ್‌ ಸಮುದಾಯದವರನ್ನೇ ಅಭ್ಯರ್ಥಿಯಾಗಿಸುತ್ತಬಂದಿದೆ. ಈ ಬಾರಿ ಕಾಂಗ್ರೆಸ್‌ ರಣ ತಂತ್ರ ಬದಲಿಸಿ ಲಿಂಗಾಯತ ಮುದಾಯದವರಿಗೆ ಆಖಾಡಕ್ಕಿಳಿಸಲು ಯೋಚಿಸುತ್ತಿರುವುದು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.

ಕ್ಷೇತ್ರದರಾಜಕೀಯಸೂತ್ರ-ಸಮೀಕರಣ 2004 ರ ಚುನಾವಣೆ ಸಂರ್ಭದಿಂದ ಸಂಪೂರ್ಣ ಬದಲಾಗಿದೆ. ಲಿಂಗಾಯತ ಪ್ರತಿಷ್ಠೆಯ ಜಾತಿ ರಾಜಕಾರಣದೊಂದಿಗೆ ಕೇಸರಿಧರ್ಮ ಕಾರಣ ನಾಜೂಕಾಗಿ ಮಿಳಿತವಾಗಿದೆ. ಕಳೆದನಾಲ್ಕುಚುನಾವಣೆಯಲ್ಲಿಕಾಂಗ್ರೆಸ್‌ನಐ.ಜಿ.ಸನದಿಮತ್ತುಸಲೀಮ್‌ ಅಹಮ್ಮದ್‌ ಮತ್ತೆ ಮತ್ತೆಸ್ಫರ್ಧಿಸಿ ಸೋತಿದ್ದಾರೆ. ಸಲೀಮ್‌ ಅಹಮ್ಮದ್‌ ಜಾತ್ಯತೀತ ಇಮೇಜಿನವರಾದರೂ ಬಿಜೆಪಿ ಪರಿವಾರ ಕಾಂಗ್ರೆಸ್‌ ಕ್ಯಾಂಡಿಡೇಟ್ಮುಸ್ಲಿಮ್‌ ಎಂಬುದನ್ನು ಚುನಾವಣಾ ವಿಷಯಮಾಡಿ ಕೊಂಡು ಮತ ಧ್ರುವೀಕರಣದಿಂದ ಗೆಲ್ಲುತ್ತಿದೆ.

ಕಾಂಗ್ರೆಸ್‌ ಕೆಲಸಕ್ಕೆ ಬಾರದ ಕೋಟಾ ಆಧಾರಿತ ಟಿಕೆಟ್‌ ಹಂಚಿಕೆ ತಂತ್ರಗಾರಿಕೆಗೆ ಮಾರ್ಪಡಿಸಿ ಲಿಂಗಾಯತ ಅಭ್ಯರ್ಥಿ ಹೂಡುವ ಪ್ರಯೋಗ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದುರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಶಿಗ್ಗಾವಿಕಾಂಗ್ರೆಸ್‌ನಮಾಜಿಎಮ್ಮೆಲ್ಲೆಯಾಗಿದ್ದಮಂಜುನಾಥ್ಕುನ್ನೂರ್‌ 2004 ಇಲೆಕ್ಷನ್‌ ಹೊತ್ತಲ್ಲಿ ಬಿಜೆಪಿ ಸೇರಿ ಆ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಿದ್ದರು. ಕ್ಷೇತ್ರದ ಬಹುಸಂಖ್ಯಾತ ಲಿಂಗಾಯತರ ಪ್ರಬಲ ಪಂಚಮಸಾಲಿ ಒಳ ಪಂಗಡದ ಕುನ್ನೂರ್‌ಗೆ ಆಗ ‘ಭುಗಿಲೆದ್ದಿದ್ದ’ ಯಡಿಯೂರಪ್ಪ ಕೇಂದ್ರಿತ ಲಿಂಗಾಯತ ‘ಅಸ್ಮಿತೆ’ಯ ರಾಜಕಾರಣದ ಬಲವೂ ಸಿಕ್ಕಿತು. ಆಧುನಿಕ ಚುನಾವಣಾ ಹೋರಾಟದ ಸಕಲ ಪಟ್ಟುಗಳನ್ನು ಬಲ್ಲ ಕುನ್ನೂರ್‌ಗೆ ಕಾಂಗ್ರೆಸ್‌ನ ಮೃಧು ಮುಸ್ಲಿಮ್‌ ಮುಂದಾಳು ಐ.ಜಿ.ಸನದಿ ದೊಡ್ಡ ಮತದಂತರದಲ್ಲೇ ಮಣಿಯಬೇಕಾಯಿತು! ಆದರೆ ಬಿಜೆಪಿಯಲ್ಲಿ ಇದ್ದೂ ಇಲ್ಲದಂತಿದ್ದ ಕುನ್ನೂರ್‌ ಅಂದಿನ ಮನಮೋಹನ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರಕಾರದ ಭಾರತ-ಅಮೆರಿಕ ಅಣು ಒಪ್ಪಂದದ ಪರ ಅಡ್ಡ ಮತದಾನ ಮಾಡಿದ್ದರೆಂಬ ಗುಮಾನಿಗೆ ಒಳಗಾಗಿದ್ದರು. ಆಗ ಬಿಜೆಪಿ ಸಂಸದರಾದ ಕುನ್ನೂರ್‌, ಸಾಂಗ್ಲಿಯಾನ ಮತ್ತು ಮನೋರಮಾ ಮಧ್ವರಾಜ್‌ ಕಾಂಗ್ರೆಸ್‌ ಸರಕಾರ ಬೆಂಬಲಿಸಿದ್ದರೆಂಬ ಸುದ್ದಿ ಹಬ್ಬಿತ್ತು.

ಈ ದಿಲ್ಲಿ ರಾಜಕಾರಣದ ಸ್ಥಿಂತ್ಯಂತರದ ಬಳಿಕ ಬಿಜೆಪಿಯಲ್ಲಿ ಕುನ್ನೂರ್‌ ‘ಕಾಫೀರ್’ ಎಂದು ಪರಿಗಣಿಸಲ್ಪಟ್ಟಿದ್ದರು; 2008ರಲ್ಲಾದ ಸಂಸತ್‌ ಕ್ಷೇತ್ರಗಳ ಡಿಲಿಮಿಟೇಶನ್‌ನಲ್ಲಿ ಕುನ್ನೂರರ ಶಿಗ್ಗಾವಿ ಧಾರವಾಡ ಕ್ಷೇತ್ರಕ್ಕೆ ಸೇರಿಸಲಾಗಿತ್ತು. ಹೀಗಾಗಿ ಹಾವೇರಿ ಕ್ಷೇತ್ರಕ್ಕೆ ಕುನ್ನೂರ್‌ ಹೊರಗಿನವರಾದರು. ಇದೆಲ್ಲ ನೆವದಿಂದ 2009ರಚುನಾವಣೆಯಲ್ಲಿ ಕೇಸರಿ ಟಿಕೆಟ್‌ ನಿರಾಕರಿಸಲಾಯಿತು. ಆ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಪ್ರಶ್ನಾತೀತನಾಯಕರಾಗಿದ್ದ ಯಡಿಯೂರಪ್ಪ ರಖಾಸಾ ಆದ್ಮಿಯಾಗಿದ್ದ ಹಾವೇರಿ ಭಾಗದ ಶಕ್ತಿಶಾಲಿ ಲಿಂಗಾಯತ ನೇತಾರಸಿ.ಎಮ್.ಉದಾಸಿಪುತ್ರಶಿವಕುಮಾರ್‌ ಉದಾಸಿ ಪಟ್ಟಾಬಿಷೇಕಕ್ಕಾಗಿ ಕುನ್ನೂರ್‌ ಖೇಲ್‌ ಖತಮ್‌ ಮಾಡಲಾಯಿತೆಂಬ ಮಾತು ಇವತ್ತಿಗೂ ಅವಿಭಜಿತ ಧಾರವಾಡ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ಅಪ್ಪನ ಪ್ರಭಾವದಿಂದ ಶಿವಕುಮಾರ್‌ ಉದಾಸಿ ನಿರಾಯಾಸವಾಗಿ ಬಿಜೆಪಿ ಅಭ್ಯರ್ಥಿಯಾದರು. ಲಿಂಗಾಯತ ಪ್ರತಿಷ್ಠೆ ಮತ್ತು ಇಸ್ಲಾಮೋಫೋಬಿಕ್‌ ವರಸೆಗಳನ್ನು ಸಮನಾಗಿ ಪ್ರಯೋಗಿಸಿದ ಬಿಜೆಪಿ ಪರಿವಾರ ಕಾಂಗ್ರೆಸನ್ನು ಸುಲಭವಾಗಿ ಸೋಲಿಸಿತು. ಇದೇ ಸೂತ್ರ-ಸಮೀಕರಣ ಬಳಸಿ ಉದಾಸಿ ಮತ್ತೆರಡು ಬಾರಿ ಕಾಂಗ್ರೆಸ್‌ನ ಮುಸ್ಲಿಮ್‌ ಎದುರಾಳಿಯನ್ನು ಹಿಮ್ಮೆಟಿಸಿದರು.

ಮೂರು ಬಾರಿ ಎಂಪಿಯಾಗಿ ಆಯ್ಕೆಮಾಡಿದರೂ ಮೂರು ಬಿಲ್ಲಿ ಪ್ರಯೋಜನ ಹಾವೇರಿ ಮತ್ತು ಗದಗ ಯಾವ ಭಾಗಕ್ಕೂ ಶಿವಕುಮಾರ ಉದಾಸಿಯಿಂದ ಆಗಲಿಲ್ಲವೆಂಬ ಅಸಮಧಾ-ಆಕ್ರೋಶ ಜನರಲ್ಲಿದೆ. ಇಲೆಕ್ಷನ್‌ ಹೊತ್ತಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಶಿವಕುಮಾರ್‌ ಉದಾಸಿ ಗೆದ್ದನಂತರ ಉದಾಸೀನದಿಂದ ನಾಟ್‌ರಿಚೇಬಲ್‌ ಆಗಿಬಿಡುತ್ತಾರೆ! ದುರಂತವೆಂದರೆ, ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಗದಗ ಜಿಲ್ಲೆಯ ರೋಣ,ಶಿರಹಟ್ಟಿ,ಮುಂಡರಗಿ ಮುಂತಾದ ಪ್ರದೇಶದವರು ತಮಗೆ ಎಂಪಿಯೇ ಇಲ್ಲವೆಂಬಂತಿದ್ದಾರೆ. ಸತತ ಹದಿನೈದು ವರ್ಷದಿಂದ ಸಂಸದನಾಗಿರುವ ಉದಾಸಿಗೆ ಕ್ಷೇತ್ರದ ರಾಜಕೀಯ,ಸಾಮಾಜಿಕ,ಆರ್ಥಿಕ ಸ್ಥಿತಿ-ಗತಿ ಬಿಡಿ, ಬೌಗೋಲಿಕ ಉದ್ದಗಲವೇ ಗೊತ್ತಿಲ್ಲ.

ಎಂ ಟಿ ಇನ್‌ಕಂಬೆನ್ಸ್‌ ಝಳಕ್ಕೆ ಬಾಡಿರುವ ಉದಾಸಿಗೆ ತಂದೆ ಸಿ.ಎಂ.ಉದಾಸಿ ಮರಣದ ನಂತರ ಬಿಜೆಪಿಯಲ್ಲಿ ಯಾವ ಮಾನ-ಮರ್ಯಾದೆಯೂ ಸಿಗುತ್ತಿಲ್ಲವೆನ್ನಲಾಗಿದೆ. ಬಿಜೆಪಿಯ ಲಿಂಗಾಯತ ಲಾಬಿಯಲ್ಲಿ ವರ್ಚಸ್ವಿ ಮುಂದಾಳೆನಿಸಿದ್ದ ಅಪ್ಪ ಸಿ.ಎಂ.ಉದಾಸಿಯಪ್ರಭಾವಳಿಯಲ್ಲಿಮಿಂಚುತ್ತಿದ್ದಶಿವಕುಮಾರ್‌ ಉದಾಸಿಗೆಸ್ವಯಂಪ್ರಭೆಬೀರಲಾಗಲಿಲ್ಲ. ಮತ್ತೆತನಗೆಬಿಜೆಪಿಎಂಪಿಟಿಕೆಟ್ಕೊಡುವುದಿಲ್ಲ; ಕೊಟ್ಟರೂ ಜನರು ಗೆಲ್ಲಿಸುವುದಿಲ್ಲಎಂಬುದು ಖಾತ್ರಿಯಾಗಿದ್ದಉದಾಸಿ ತಂದೆಯ ಸಾವಿನ ನಂತರದ ಹಾನಗಲ್‌ ಉಪಚುನಾವಣೆ(2021)ಯಲ್ಲಿ ಬಿಜೆಪಿಯಿಂದ ಸ್ಫರ್ಧಿಸುವ ಪ್ರಯತ್ನ ಮಾಡಿದ್ದರು. ಸಂಘೀಸರದಾರರು ಉದಾಸಿಯನ್ನು ದೂರತಳ್ಳಿದ್ದರು. ತನಗಲ್ಲದಿದ್ದರೆ ತನ್ನ ಮಡದಿಗಾದರೂ ಅಭ್ಯರ್ಥಿತನದಯ ಪಾಲಿಸುವಂತೆ ಅಂಗಲಾಚಿದ್ದರು. ಪ್ರಯೋಜನವಾಗದಿದ್ದಾಗ ಉಪಚುನಾವಣೆಯಲ್ಲಿ ತಮ್ಮ ಕುಟುಂಬದವರಿಗೆ ಬಿಜೆಪಿ ಅವಕಾಶಕೊಡದಿದ್ದರೆ ಎಂಪಿ ಚುನಾಚಣೆಗೂನಿಲ್ಲುವುದಿಲ್ಲವೆಂದು ಬೆದರಿಕೆಹಾಕಿದ್ದರು. ಇದ್ಯಾವುದಕ್ಕೂ ಬಿ.ಎಲ್.ಸಂತೋಷ್-ಪ್ರಹ್ಲಾದ್‌ ಜೋಶಿಪರಿವಾರಸೊಪ್ಪುಹಾಕಲಿಲ್ಲ! ಉದಾಸಿಯನ್ನುಕಡ್ಡಾಯ ನಿವೃತ್ತಿ ಮಾಡಲು ನಿರ್ಧರಿಸಿದ್ದ ಕೇಸರಿ ಹೈಕಮಾಂಡ್ ಹಾವೇರಿಯಿಂದ ಮಾಜಿ ಎಂ ಎಲ್ ಎ ಶಿವರಾಜ್‌ ಸಜ್ಜನರ್‌ರನ್ನು ಹಾನಗಲ್‌ಗೆ ರಫ್ತುಮಾಡಿ ಕಣಕ್ಕಿಳಿಸಿತ್ತು.

ಯಾವಾಗ ಬಿಜೆಪಿ ಬಾಸ್‌ಗಳು ಹಾನಗಲ್ ಟಿಕೆಟ್ ತನಗೆ ಅಥವಾ ತನ್ನ ಮಡದಿಗೆ ಕೊಡಲು ಒಪ್ಪಲಿಲ್ಲವೋ ಆ ಗಳಿಗೆಯಲ್ಲೇ ಸಂಸದ ಶಿವಕುಮಾರ್‌ ಉದಾಸಿ ರಾಜಕಾರಣದಿಂದ ಸಾವಕಾಶವಾಗಿ ಹೊರಬಂದು ಕೋಟಿಗಳ ಲೆಕ್ಕದ ತನ್ನ ವಿವಿಧ ಬಿಸ್ನೆಸ್‌ಗಳ ಮೇಲೆ ಪೂರ್ಣಪ್ರಮಾಣದಲ್ಲಿ ಗಮನ ಇಡುವ ತೀರ್ಮಾನಕ್ಕೆ ಬಂದಿದ್ದರೆನ್ನಲಾಗಿದೆ. ಈಗಂತೂ ಉದಾಸಿ ತಾನು 2024 ರ ಚುನಾವಣೆಯಲ್ಲಿ ಸ್ಪರ್ಧಿಸಲಾರೆನೆಂದು ಬಹಿರಂಗವಾಗೇ ಘೋಷಿಸಿಬಿಟ್ಟಿದ್ದಾರೆ. ಇಂಥದೊಂದು ಅವಕಾಶಕ್ಕಾಗಿ ಕಾದು ಕುಳಿತಿದ್ದ ಪಕ್ಕದ ಶಿವಮೊಗ್ಗೆಯ ಮಾಜಿ ಡಿ ಸಿ ಎಂ ಬಿಜೆಪಿಯ ಉಗ್ರಹಿಂದುತ್ವ ಮುಖವಾಣಿ ಈಶ್ವರಪ್ಪ ತನ್ನ ಮಗ ಕಾಂತೇಶನೇ ಹಾವೇರಿಗೆ ಸೂಕ್ತ-ಸಮರ್ಥ ಕೇಸರಿ ಕ್ಯಾಂಡಿಡೇಟ್‌ ಎಂದು ಬಿಂಬಿಸುತ್ತಿದ್ದಾರೆ. ಹಾಗಾಗಿ ಉದಾಸಿ ವೈರಾಗ್ಯ ವ್ಯಕ್ತಪಡಿಸುವ ಮೊದಲೇ ಈಶ್ವರಪ್ಪನ ಕಣ್ಣು ಹಾವೇರಿ -ಗದಗ ಕ್ಷೇತ್ರದ ಮೇಲೆ ಬಿದ್ದಿತ್ತು. ಈಶ್ವರಪ್ಪ ತನ್ನವಿಭಜಕ ಹಿಂದುತ್ವದ ಕಡು ನಿಷ್ಠೆ, ಬಿಜೆಪಿಯಲ್ಲಿನ ಹಿರಿತನ ಮತ್ತು ಸಂಘೀಸರದಾರಿಗೆ ತೋರಿಸುವ ವಿಧೇಯತೆಯ ಮೆರಿಟ್’ಗಳನ್ನು ಸಂಘಪರಿವಾರದ ಅಂಗಳದಲ್ಲಿ ಪಣಕ್ಕಿಟ್ಟು ಮಗಕಾಂತೇಶ್‌ಗೆ ಹಾವೇರಿ ಬಿಜೆಪಿ ಟಿಕೆಟ್‌ ಕೊಡಿಸಲು ಶತಾಯಗ ತಾಯ ಸೆಣಸಾಡುತ್ತಿದ್ದಾರೆ!

ಮುಗಿದ ಅಸೆಂಬ್ಲಿ ಇಲೆಕ್ಷನ್‌ ವೇಳೆ ಬಿಜೆಪಿ ಹೈಕಮಾಂಡ್‌ ಈಶ್ವರಪ್ಪರಿಗೆ ಶಿವಮೊಗ್ಗ ಅಭ್ಯರ್ಥಿತನ ನಿರಾಕರಿಸಿ ಕಡ್ಡಾಯ ನಿವೃತ್ತಿಯ ಮುನ್ಸೂಚನೆ ಕೊಟ್ಟಿತ್ತು.ಆಗ ಈಶ್ವರಪ್ಪ ಮಗನಿಗೆ ಅವಕಾಶ ಕೇಳಿದ್ದರು. ಬಜೆಪಿ ಟಿಕೆಟ್‌ ಹಂಚುವ ಯಜಮಾನರು-ಮಗನಿಗೆ ಕೊಡಲಾಗುವುದಿಲ್ಲ; ಸೊಸೆಗೆಬೇಕಿದ್ದರೆ ಕೊಡ್ತೇವೆ-ಎಂದಿದ್ದರು. ಸೊಸೆಯನ್ನು ರಾಜಕಾರಣಕ್ಕೆ ತಂದರೆ ತನ್ನ ವಂಶೋದ್ಧಾರಕನ ಭವಿಷ್ಯ ಬರಡಾಗುತ್ತದೆಂಬ ಕಾರಣಕ್ಕೆ ಈಶ್ವರಪ್ಪ ಹೈಕಮಾಂಡ್‌ ಆಫರ್‌ ಬೇಡವೆಂದಿದ್ದರು. ಆಗ ಅವರ ಮನಸ್ಸಿನಲ್ಲಿದ್ದದ್ದು ಮಗ ಕಾಂತೇಶ್‌ನನ್ನು ಹಾವೇರಿ ಎಂ ಪಿ ಮಾಡಿ ಯಡಿಯೂರಪ್ಪರ ಮಕ್ಕಳ ಸರಿಸಮಾನವಾಗಿ ನಿಲ್ಲಿಸುವ ಆಸೆಯಾಗಿತ್ತು;ಮುಂದೊಂದು ದಿನ ಬಿಜೆಪಿಯಲ್ಲಿ ಮಗನಿಗೆ ಒಳ್ಳೆಯ ಅವಕಾಶ ಸಿಗಬಹುದೆಂದು ಈಶ್ವರಪ್ಪ ಹೈಕಮಾಂಡಿನಿಂದಾದ ಅವಗಣನೆ-ಅವಮಾನ ನುಂಗಿಕೊಂಡಿದ್ದರು; ಮಾಜಿ ಸಿ ಎಂ ಜಗದೀಶ್‌ ಶೆಟ್ಟರ್‌ರಂತೆ ಸೆಟೆದು ನಿಲ್ಲುವಗೋಜಿಗೆ ಹೋಗದೆ ಭಯ-ಭಕ್ತಿಯಿಂದ ಹೈಕಮಾಂಡ್‌ನ ಕಡ್ಡಾಯ ನಿವೃತ್ತಿ ಆಜ್ಞೆಯನ್ನು ಪಾಲಿಸಿದ್ದರು!

ಈಶ್ವರಪ್ಪರ ‘ಶರಣಾಗತಿ’ ಮೆಚ್ಚಿ ಬಿಜೆಪಿಯ ಸುಪ್ರಿ ಮೋನಂ ಬರ್ಟೂ ಸಾಕ್ಷಾತ್‌ ಅಮಿತ್‌ ಶಾರೇ ಫೋನಾಯಿಸಿ ಬೆನ್ನು ತಟ್ಟಿದ್ದರು! ರಾಜ್ಯ ಬಿಜೆಪಿಯ ಸರ್ವಶಕ್ತ ನಾಯಕಾಗ್ರೇಸ ಬಿ.ಎಲ್. ಸಂತೋಷ್‌ ಈಶ್ವರಪ್ಪ ಮನೆಗೇ ಹೋಗಿ ‘ಭೇಶ್’ ಎಂದಿದ್ದರು. ಆಸಂದರ್ಭದಲ್ಲಿಈಶ್ವರಪ್ಪ ಮೌನವಾಗಿ ಕಳಿತಿದ್ದರಂತೆ; ಆದರೆ ಮಡದಿ-ಮಕ್ಕಳು ಸಂತೋಷ್‌ ಮೇಲೆ ಮುಗಿಬಿದ್ದು, ಈಶ್ವರಪ್ಪರ ತ್ಯಾಗ ಬದ್ಧತೆಗೆ ಪ್ರತಿಫಲವಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕುಲಕಂಠೀರವ ಕಾಂತೇಶ್‌ಗೆ ಹಾವೇರಿಯಲ್ಲಿ ಸ್ಪರ್ಧೆಗೆ ಅವಕಾಶ ಕೊಡುವಂತೆ ‘ಹಕ್ಕೊತ್ತಾಯ’ ಮಂಡಿಸಿದ್ದರೆಂಬ ಸಂಗತಿ ಈಗ ರಾಜಕೀಯ ಕಟ್ಟೆಯಲ್ಲಿ ಚರ್ಚೆಯಾಗುತ್ತಿದೆ. ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆಯೆ ಈಶ್ವರಪ್ಪ ಮಗಕಾಂತೇಶ್‌ ಕಟ್ಟಿಕೊಂಡು ಹಾವೇರಿ ಮತ್ತು ಗದಗದ ಉದ್ದಗಲಕ್ಕೆ ಓಡಾಟ ಶುರುಹಚ್ಚಿಕೊಂಡಿದ್ದಾರೆ. ತಾಲೂಕಾ ಮಟ್ಟದ ಪ್ರಭಾವಿಗಳ ಮನೆಬಾಗಿಲಿಗೆ ಎಡತಾಕುತ್ತಿದ್ದಾರೆ; ಸ್ವಜಾತಿ ಕುರುಬರ ಮಠ, ಮತ್ತಿತರ ಜಾತಿಯ ಸಣ್ಣ-ಪುಟ್ಟ ಸ್ವಾಮಿಗಳ ಸನ್ನಿಧಿಯಲ್ಲಿ ಅಡ್ಡಬೀಳುತ್ತಿದ್ದಾರೆ. ಮತ್ತೊಂದಡೆ ಸಂಘೀಶ್ರೇಷ್ಠರ ಗಮನಸೆಳೆಯಲೋ ಎಂಬಂತೆ ತಮ್ಮ ಎಂದಿನ ಕೋಮುಕ್ರೌರ್ಯದ ಮಾತುಗಾರಿಕೆ ಮತ್ತಷ್ಟು ಹರಿತಗೊಳಿಸಿಕೊಂಡಿದ್ದಾರೆ.

ಈಚೆಗೆ ಅಪ್ಪ-ಮಗ ಹಾವೇರಿಯ ಸಿಂದಗಿ ಮಠದಲ್ಲಿ ಭರ್ಜರಿ ಹೋಮ-ಹವನ, ವಿಶೇಷ ಪೂಜೆ ಆಯೋಜಿಸಿ ಚುನಾವಣೆಗೆ ಅಣಿಯಾಗಿರುವುದು ಬಿಜೆಪಿಯ ಸ್ಥಳಿಯ ಟಿಕೆಟ್‌ ಆಕಾಂಕ್ಷಿಗಳ ಕಣ್ಣುಕೆಂಪಾಗಿ ಸಿಬಿಟ್ಟಿದೆ. ಕ್ಷೇತ್ರದಲ್ಲಿರುವ ಸ್ವಜಾತಿ ಕುರುಬರ ಸುಮಾರು ಎರಡೂ ಕಾಲುಲಕ್ಷಮತಗಳು ಸಿ ಎಂ ಸಿದ್ದುರಿಂದ ಕಾಂಗ್ರೆಸ್‌ಗೆ ಹೋಗೋದು ತಪ್ಪಿಸಬೇಕೆಂದರೆ ತನ್ನಮಗನಿಗೆ ಬಿಜೆಪಿ ಟಿಕೆಟ್‌ ಕೊಡಬೇಕಾಗುತ್ತದೆಂಬ ವಾದ ಈಶ್ವರಪ್ಪರದು. ಆದರೆ ಬಿಜೆಪಿ ಹುರಿಯಾಳಾಗುವ ಕನಸು ಕಾಣುತ್ತಿರುವ ಬಾಂಬೈ ಬಾಯ್ಸ್‌ ಟೀಮಿನ ಮಾಜಿ ಶಾಸಕ ಬಿ.ಸಿ.ಪಾಟೀಲ್‌ ರಂಥವರು-ಕಾಂತೇಶ್‌ ಶಿವಮೊಗ್ಗ ದಿಂದ ಬರಬೇಕಾದ ಅನಿವಾರ್ಯತೆ ಸ್ಥಳಿಯ ಬೀಜೆಪಿಗಿಲ್ಲ; ಇಲ್ಲಿಯೇ ಬೇಕಷ್ಟು ಅರ್ಹಅಭ್ಯರ್ಥಿ ಆಗಬಲ್ಲವರಿದ್ದಾರೆ-ಎಂಬ ಪ್ರತಿತರ್ಕ ಹೂಡುತ್ತಿದ್ದಾರೆ. ತನಗಲ್ಲದಿದ್ದರೆ ತನ್ನ ಮಗಳು ಸೃಷ್ಟಿಪಾಟೀಲ್‌ಗಾದ ರೂಬಿಜೆಪಿ ಛಾನ್ಸ್‌ ಕೊಡಲಿ ಎಂಬ ಒಳಾಸೆ ಬಿ.ಸಿ.ಪಾಟೀಲರದೆನ್ನಲಾಗಿದೆ.

ಹಿಂದಿನೆರಡು ಚುನಾವಣೆ ಹೊತ್ತಲ್ಲಿದ್ದ ಗೆದ್ದೇಗೆಲ್ಲುತ್ತೇವೆಂಬ ಹುಮ್ಮಸ್ಸು, ಧೈರ್ಯ ಈ ಸಲ ಬಿಜೆಪಿಗರಿಲ್ಲವಾಗಿದೆ. ರಾಜ್ಯ ಬಿಜೆಪಿಯ ಒಳಸುಳಿಯ ನೇರ-ಅಡ್ಡಪರಿಣಾಮಗಳೆಲ್ಲ ಹಾವೇರಿ-ಗದಗ ಬಿಜೆಪಿ ಮೇಲಾಗುತ್ತಿದೆ. ಮಾಜಿ ಸಿಎಂ ಬೊಮ್ಮಾಯಿ ಹಾವೇರಿ ಜಿಲ್ಲೆಯವರಾದರೂ ಅವರಿಂದ ಸ್ಥಳಿಯ ಬಿಜೆಪಿಗೆ ಲಾಭವಾಗುತ್ತಿಲ್ಲ. ಕಳೆದ ಅಸೆಂಬ್ಲಿ ಇಲೆಕ್ಷನ್‌ನಲ್ಲಿಈ ಲೋಕಸಭಾ ಕ್ಷೇತ್ರದ ಸರಹದ್ದಿನ ಒಳಗಿನ ಎಂಟು ಅಸೆಂಬ್ಲಿ ಕ್ಷೇತ್ರಗಳ ಪೈಕಿ ಬಿಜೆಪಿ ಗೆದ್ದರುವುದು ಶಿರಹಟ್ಟಿ ಮೀಸಲು ಒಂದೇ ಒಂದು ಕ್ಷೇತ್ರದಲ್ಲಿ. ಕಾಂಗ್ರೆಸ್‌ ನ ಬಂಡಾಯದಿಂದ ಇಲ್ಲಿ ಬಿಜೆಪಿ ಅಚಾನಕ್‌ ಬಚಾವಾಗಿದೆ. ಆದರೂ ಪಾರ್ಲಿಮೆಂಟ್‌ ಇಲೆಕ್ಷನ್‌ ನಲ್ಲಿ ಕೇಸರಿ ಕ್ಯಾಂಡಿಡೇಟಾಗುವ ಉಮೇದಿಯ ಒಂದು ಡಜನ್ ಹೆಸರುಗಳು ಬಿಜೆಪಿ ವಲಯದಲ್ಲಿ ತೇಲಾಡುತ್ತಿವೆ. ಒಂದೆಡೆ ಕಾಂತೇಶ್‌ ಮತ್ತುಬಿ.ಸಿ.ಪಾಟೀಲರ ಹೈವೋಲ್ಟೇಜ್‌ ಕಸರತ್ತಾದರೆ, ಮತ್ತೊಂದೆಡೆ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜಕಲಕೋಟಿ, 2018ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಕ್ಯಾಂಡಿಡೇಟಾಗಿ ರಾಣೆಬೆನ್ನೂರಲ್ಲಿ ಸೋಲನುಭವಿಸಿದ್ದ ಡಾ.ಬಸವರಾಜಕೇಲಕಾರ್‌, ಹಿರೇಕೆರೂರಿನ ಪಾಲಾಕ್ಷಗೌಡಪಾಟೀಲ್, ಬ್ಯಾಡಗಿಯ ಮುರುಗೆಪ್ಪಶೆಟ್ಟರ್‌, ಕಳೆದ ಚುನಾವಣೆಯಲ್ಲಿ ಗದಗದಲ್ಲಿ ಪರಾಜಿತರಾದ ಅನಿಲ್‌ ಮೆಣಸಿನಕಾಯಿ, ಹಾವೇರಿಯ ಮಂಜುನಾಥ ಮಡಿವಾಳರ, ರಾಣೆಬೆನ್ನೂರಿನ ಕೆ.ಶಿವಲಿಂಗಪ್ಪ ಮತ್ತು ಪವನಕುಮಾರ್‌ ಮಲ್ಲಾಡದ ಅವಕಾಶ ಸಿಕ್ಕರೆ ನಾವ್ಯಾಕೆ ಒಂದುಕೈನೋಡಬಾರದೆಂಬ ಯೋಜನೆಯಲ್ಲಿ ತಮ್ಮ ತಮ್ಮಗಾಡ್‌ಫಾದರ್‌ಗಳನ್ನು ಹಿಡಿದುಕೊಂಡು ಟಿಕೆಟ್‌ ತಂತ್ರಗಾರಿಕೆನಡೆಸಿದ್ದಾರೆ.

ಇದೆಲ್ಲಕ್ಕಿಂತ ಕುತೂಹಲಕರ ಸಂಗತಿಯೆಂದರೆ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಹಾವೇರಿ ಎಂಪಿ ಮಾಡುವ ಮೂಲಕ ಪುನರ್ವಸತಿಕಲ್ಪಿಸಿಲಿಂಗಾಯತಓಟ್‌ ಬ್ಯಾಂಕ್‌ ಕೈಜಾರದಂತೆ ನೋಡಿಕೊಳ್ಳುವ ಪ್ಲಾನುಸಂಘಪರಿವಾರಹಾಕಿದೆಎನ್ನಲಾಗುತ್ತಿದೆ. ಬೊಮ್ಮಾಯಿಲೋಕಸಮರನಾನೊಲ್ಲೆಎನ್ನುತ್ತಿದ್ದಾರಂತೆ. ಆದರೆರಾಜ್ಯಬಿಜೆಪಿಅಧ್ಯಕ್ಷತೆಮತ್ತುವಿಧಾನಸಭೆವಿರೋಧಪಕ್ಷದನಾಯಕನಸ್ಥಾನಜಾತಿವಾರುಲೆಕ್ಕಾಚಾರದಲ್ಲಿಹಂಚಿಕೆಮಾಡುವಾಗಬೊಮ್ಮಾಯಿಗೆಬೆಲೆ ಬಂದಿಲ್ಲ. ಈ ಎರಡೂ ಹುದ್ದೆ ನಿಭಾಯಿಸುವ ಸಾಮರ್ಥ್ಯ ವಿಫಲ ಮುಖ್ಯಮಂತ್ರಿ ಎನಿಸಿದ್ದ ಬೊಮ್ಮಾಯಿಗಿಲ್ಲಎಂಬಭಾವನೆ ಕೇಸರಿಹೈಕಮಾಂಡಿನದು. ಹಾಗಂತ ನಿರ್ಣಾಯಕ ಸಮುದಾಯ ವಾದಲಿಂಗಾಯ ತರ ಮುಂದಿನ ಸಾಲಿನ ಮುಂದಾಳು ಬೊಮ್ಮಾಯಿಯನ್ನುಏಕಾಏಕಿನೇಪಥ್ಯಕ್ಕೆ ಸರಿಸಿದರೆ ಪರಿಣಾಮದು ಬಾರಿ ಆಗುತ್ತದೆಂಬ ಆತಂಕವೂ ಕೇಸರಿ ವಲಯದಲ್ಲಿದೆ. ಸಂತೋಷ್-ಪ್ರಹ್ಲಾದ್‌ ಜೋಶಿಯ ಬ್ರಾಹ್ಮಣ ಲಾಬಿಯ ಮಾತು ಕಟ್ಟಿಕೊಂಡು ಯಡಿಯೂರಪ್ಪರನ್ನು ಬದಿಗೆಸರಿಸಿದ ‘ದುಷ್ಪರಿಣಾಮ’ ಬಿಜೆಪಿ ಎದುರಿಸುವಂತಾಗಿದೆ. ಹಾಗಾಗಿ ಬೊಮ್ಮಾಯಿಯನ್ನುಎಂಪಿ ಮಾಡಿಕೇಂದ್ರ ಮಂತ್ರಿಗಿರಿಗೆ ಏರಿಸಿಲಿಂಗಾಯತರ ಓಲೈಸುನದೂರಾ ಲೋಚನೆಬಿಜೆಪಿ ‘ಚಾಣಾಕ್ಯ’ರ ದೆಂಬ ಮಾತು ಹರಿದಾಡುತ್ತಿದೆ.

ಹಾವೇರಿ ಲೋಕಕ್ಷೇತ್ರ ರಚನೆಯಾದ ನಂತರದ ಸತತ ಮೂರು ಚುನಾವಣೆಯಲ್ಲಿ ಮುಗ್ಗರಿಸಿರುವ ಕಾಂಗ್ರೆಸ್‌ನ ವರಿಷ್ಠರು ಈ ಬಾರಿ ಗೆಲ್ಲೇಬೇಕೆಂಬ ರಣತಂತ್ರ ಹೆಣೆಯುತ್ತಿದ್ದಾರೆ. ಕೆ ಪಿ ಸಿ ಸಿ ಅಧ್ಯಕ್ಷ ಡಿಕೆಶಿ ಮತ್ತು ಸಿಎಂ ಸಿದ್ದುರ ಗೆಲ್ಲಬಹುದಾದ ಕ್ಷೇತ್ರಗಳ ಪಟ್ಟಿಯಲ್ಲಿ ಹಾವೇರಿಯೂ ಸೇರಿದೆ ಎನ್ನಲಾಗುತ್ತಿದೆ. ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಯಶಸ್ಸು ಹಾವೇರಿ-ಗದಗದಲ್ಲಿ ಸಾಧಿಸಿರುವುದೇ ಈ ಭರವಸೆಗೆ ಕಾರಣ. ಕುರುಬರು ಮತ್ತು ಮುಸಲ್ಮಾನರು ದೊಡ್ಡ ಸಂಖ್ಯೆಯಲ್ಲಿರುವುದರಿಂದ ಕ್ಷೇತ್ರದಲ್ಲಿ ಸಿಎಂ ಸಿದ್ದು ಚಾರಿಷ್ಮಾ ನಿರ್ಣಾಯಕವಾಗಿದೆ. ಖುದ್ದುಸಿದ್ದು, ಡಿಕೆಶಿಯೇ ಹಾವೇರಿ-ಗದಗ ಗೆಲುವಿನ ಬಗ್ಗೆ ಆಸಕ್ತಿ ವಹಿಸಿರುವುದರಿಂದ ಹೋರಾಟ ಸುಲಭವೆಂದು ಹಲವರು ಕಾಂಗ್ರೆಸ್‌ ಟಿಕೆಟ್‌ಗೆ ಲಾಬಿ ಆರಂಭಿಸಿದ್ದಾರೆ.

ಇವರಲ್ಲಿ ಪ್ರಮುಖರೆಂದರೆ, ಕಳೆದ ಲೋಕ ಚುನಾವಣೆಯಲ್ಲಿ ಸೋತ ಅಭ್ಯರ್ಥಿ-ವಿಧಾನ ಪರಿಷತ್‌ನ ಆಡಳಿತ ಪಕ್ಷದ ಮುಖ್ಯ ಸಚೇತಕ ಸಲೀಮ್‌ ಅಹಮ್ಮದ್‌, ಮಾಜಿ ಸಂಸದ ಐ.ಜಿ.ಸನದಿ ಮಗ ಜಾಕೀರ್‌ ಸನದಿ, ಕೆಪಿಸಿಸಿ ಪದವೀಧರ ಘಟಕದ ಅಧ್ಯಕ್ಷ-ಮೂರ್ನಾಲ್ಕು ಬಾರಿ ಪಶ್ಚಿಮ ಶಿಕ್ಷಕರ ವಿಪ ಕ್ಷೇತ್ರದಲ್ಲಿ ಸೋತಿರುವ ರಾಣೆಬೆನ್ನೂರಿನ ಡಾ.ಎಂ.ಆರ್.ಕುಬೇರಪ್ಪ, ತನ್ನ ಚಿತ್ರವಿರುವ ಬ್ಯಾರ್-ಪೋಸ್ಟರ್‌ ಹಾಕಿಸುತ್ತತಾನೇ ಕಾಂಗ್ರೆಸ್‌ ಕ್ಯಾಂಡಿಡೇಟೆಂದು ಬಿಂಬಿಸಿಕೊಳ್ಳುತ್ತಿರುವ ಶಿರಹಟ್ಟಿಯ ಮಾಜಿ ಎಂ ಎಲ್ ಎ ಜಿ.ಎಸ್.ಗಡ್ಡ ದೇವರಮಠ ಮಗ ಆನಂದ ಸ್ವಾಮಿಗಡ್ಡದೇವರಮಠ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಮತ್ತು ಕಳೆದ ಅಸೆಂಬ್ಲಿಇಲೆಕ್ಷನ್‌ ಹೊತ್ತಲ್ಲಿಎಂಪಿ ಕ್ಯಾಂಡಿಡೇಟಾಗುವ ಲೆಕ್ಕಾಚಾರ ಹಾಕಿಯೇ ಬಿಜೆಪಿಗೆ ಬೈ ಹೇಳಿ ಕಾಂಗ್ರೆಸ್‌ ಸೇರಿರುವ ಮಾಜಿ ಸಂಸದ ಮಂಜುನಾಥ ಕುನ್ನೂರ್.ವರೆಲ್ಲರಿಗಿಂತ ಜನಪರ ಕೆಲಸಗಾರ ಎಂಬ ಇಮೇಜಿನ ಗದಗದ ಮಾಜಿ ಶಾಸಕ ಡಿ.ಆರ್.ಪಾಟೀಲ್‌ ಪ್ರಬಲ ಅಭ್ಯರ್ಥಿ ಎಂಬ ತೀರ್ಮಾನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಬಂದಂತಿದೆ. ದಿಲ್ಲಿಗೆ ಹೋಗಿರುವ ಶಾರ್ಟ್‌ ಲಿಸ್ಟ್‌ನಲ್ಲಿ ಪಾಟೀಲರ ಹೆಸರು ಫಸ್ಟ್‌ ಎನ್ನಲಾಗುತ್ತಿದೆ. ಸಚಿವ ಎಚ್‌.ಕೆ.ಪಾಟೀಲರ ದಾಯಾದಿ ಅಣ್ಣನಾಗಿರುವ ಡಿ.ಆರ್.ಪಾಟೀಲ್‌ ಲಿಂಗಾಯತರ ಅಚ್ಚುಮೆಚ್ಚಿನ ಕರಿ ಕುದುರೆ ಆಗುವ ಸಕಲ ಸೂಚನೆಗಳೂ ಗೋಚರಿಸಲಾರಂಭಿಸಿದೆ. ಈ ಡಿಆರ್ಪಿ ಅದೆಷ್ಟು ಜನಾನೂರಾಗಿಯೆಂದರೆ ಸಚಿವ ಎಚ್ಕೆ ಪಾಟೀಲ್‌ ಗೆಲ್ಲುವುದೆ ಇವರಿಂದ ಎಂಬು ಮಾತು ಸ್ಥಳಿಯ ರಾಜಕೀಯ ವಲಯದಲ್ಲಿದೆ.

ಹಾವೇರಿ-ಗದಗ ರಣರಂಗದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ ಹೊಸಮುಖಗಳು ಮುಖಾಮುಖಿಯಾಗುವ ಸಾಧ್ಯತೆ ಕಾಣಿಸುತ್ತಿದೆ. ಈ ಬಾರಿ ಕಾಂಗ್ರೆಸ್‌ ಮುಸ್ಲಿಂಮೇತರ ಅಭ್ಯರ್ಥಿಯನ್ನುಅಖಾಡಕ್ಕಿಳಿಸಿ ಅಸೆಂಬ್ಲಿ ಚುನಾವಣೆಯಲ್ಲಿ ಗಳಿಸಿದ ಮುಸ್ಲಿಮ್‌ ,ಕುರುಬ ಮತ್ತು ದಲಿತಮತಗಳ ಗಂಟನ್ನುಉಳಿಸಿಕೊಂಡರೆ ಬಿಜೆಪಿ ಸೋಲು ಗ್ಯಾರಂಟಿಯೆಂದು ಹಾವೇರಿ-ಗದಗದ ಇಲೆಕ್ಷನ್‌ ಸೂತ್ರ-ಸಮೀಕರಣದ ನಾಡಿಬಲ್ಲ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ವರದಿಗಾರರು
ಶೂದ್ರ ಶಂಭೂಕ

Leave a Reply

Your email address will not be published. Required fields are marked *