ಭಟ್ಕಳದ ಆಸರಕೇರಿಯ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ಸಭಾಭವನಲ್ಲಿ
ಎಚ್.ಡಿ.ಎಫ್.ಸಿ. ಬ್ಯಾಂಕ್ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡು ಜನರ ಪ್ರಶಂಸೆಗೊಳಗಾಯಿತು. ಎಚ್.ಡಿ.ಎಫ್.ಸಿ.ಬ್ಯಾಂಕ್ ಭಟ್ಕಳ ಮಾತ್ರವಲ್ಲದೇ ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ ಮುಂದಾಡೆಯೂ ಯುವ ಜನತೆಯಲ್ಲಿ ಜಾಗೃತಿ ಮೂಡಿಸಿ ರಕ್ತದಾನ ಶಿಬಿರವನ್ನು ಸ್ಥಳೀಯ ಸಂಘಟನೆಗಳ ನೆರವಿನೊಂದಿಗೆ ಹಮ್ಮಿಕೊಂಡು ರೋಗಿಗಳ ಬದುಕಿನಲ್ಲಿ ಆಶಾಕಿರಣ ಮೂಡಿಸಲು ಪ್ರಯತ್ನಿಸುತ್ತಿದೆ.

ಇವರಿಗೆ ಸಾಥ್ ಕೊಟ್ಟವರು ಸ್ಥಳೀಯ ಸ್ಪಂದನಾ ಚಾರಿಟೇಬಲ್ ಟ್ರಸ್ಟ್ ಹಾಗೂ ಕುಂದಾಪುರದ ಇಂಡಿಯನ್ ರೆಡ್ ಕ್ರಾಂಸ್ ಸೊಸೈಟಿ. ಸ್ಪಂದನಾ ಚಾರಿಟೇಬಲ್ ಸೊಸೈಟಿ ಕೂಡ ಕಳೆದ ಕೆಲವು ವರ್ಷಗಳಿಂದ ಸಮಾಜಮುಖಿ ಚಟುವಟಿಕೆ ಮಾಡುವುದರ ಮೂಲಕ ಮನೆ ಮಾತಾಗಿದೆ. ಕೊರೋನಾ ಪಿಡುಗು ಹರಡಿದಾಗ ಈ ಸಂಘಟನೆ ನೂರಾರು ಜನರಿಗೆ ಸಾರ್ವಜನಿಕರ ಸಹಕಾರದಿಂದ ದಿನಸಿ, ತರಕಾರಿ ಪೂರೈಸಿತು ಮಾತ್ರವಲ್ಲ, ಪ್ರಾಣಾಪಾಯದಲ್ಲಿದ್ದ ಆರ್ಥಿಕ ಅಸಹಾಯಕ ರೋಗಿಗಳಿಗೆ ಖರ್ಚುವೆಚ್ಚಗಳಿಗೆ ನೆರವಾಗಿ ಹೃದಯವಂತಿಕೆ ಮೆರೆಯುತ್ತಿದೆ. ಕುಂದಾಪುರದ ರೆಡ್ ಕ್ರಾಸ್ ಸಂಸ್ಥೆ ಕೂಡ ನೂರಾರು ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳುವುದರ ಮೂಲಕ ಆರೋಗ್ಯಕರ ಕೈಂಕರ್ಯ ಕೈಗೊಂಡು ಸಾರ್ಥಕತೆಯ ಹೆಜ್ಜೆಯನ್ನುಅದೆಷ್ಟೋ ವರ್ಷಗಳಿಂದ ಮೂಡಿಸುತ್ತಿದೆ.

ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷರಾದ ಅರುಣ ನಾಯ್ಕ, ಎಚ್ ಡಿ ಎಪ್ ಸಿ ಬ್ಯಾಂಕಿನ ರಾಘವೇಂದ್ರ ನಾಯಕ ಹಾಗೂ ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷರಾದ ದೀನೇಶ ನಾಯ್ಕ, ಸ್ಪಂದನಾ ಚಾರಿಟಬಲ್ ಟ್ರಸ್ಟ್ ನ ಭವಾನಿಶಂಕರ ನಾಯ್ಕ್ ಹಾಗೂ ಇಂಡಿಯನ್ ರೇಡ್ ಕ್ರಾಸ್ ಸೋಸೈಟಿಯ ಎ ಸ್ ಜಯಕರ ಶೆಟ್ಟಿ ಮುಂತಾದವರು ದೀಪಬಳಗುವುದರ ಮೂಲಕ ರಕ್ತದಾನ ಶಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ದಲ್ಲಿ ನಾಮದಾರಿ ಗರುಮಠದ ಅಧ್ಯಕ್ಷ ರಾದ ಅರುಣ ನಾಯ್ಕ್, ರಕ್ತದಾನ ಜೀವದಾನಕ್ಕೆ ಸಮಾನವಾದುದು. ಓರ್ವ ವ್ಯಕ್ತಿ ನೀಡುವ ಒಂದು ಯುನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು. ಅನ್ನದಾನ, ವಿದ್ಯಾದಾನದಂತೆ ರಕ್ತದಾನ ಕೂಡ ಶ್ರೇಷ್ಠವಾದುದು. ಅದ್ದರಿಂದ ಪ್ರತಿಯೋಬ್ಬರು ಹಿಂಜರಿಕೆಯಿಲ್ಲದೇ ರಕ್ತದಾನಮಾಡಿ ಎಂದು ತಿಳಿಸಿದರು.
ವೇದಿಕೆಯಲ್ಲಿ ವಿಶೇಷವಾಗಿ 31ಬಾರಿ ರಕ್ತದಾನ ಮಾಡದಂಥ ಭಟ್ಕಳದ ಮಹೇಶ ಖಾರ್ವಿ ಅವರನ್ನು ಸಂಘದ ಪಧಾದಿಕಾರಿಗಳು ಪ್ರೋತ್ಸಾಹಿಸಿದರು. ಕುಮಟಾ ಎಚ್.ಡಿ.ಎಫ್.ಸಿ.ಬ್ಯಾಂಕ್ ಸರ್ವಿಸ್ ಮ್ಯಾನೆಜರ್ ರಾಘವೇಂದ್ರ ನಾಯಕ್, ಪತ್ರಕರ್ತ ಮನಮೋಹನ ನಾಯ್ಕ, ನಿವ್ರತ್ತ ಸೈನಿಕ ಕಾಂತನಾಯ್ಕ, ಶಿವಾನಂದ ನಾಯ್ಕ, ಅರುಣ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು. ಗಂಗಾದರ ನಾಯ್ಕ ಕಾರ್ಯಕ್ರಮ ನಿರೂಪಿಸಿ.
ಹೊನ್ನಾವರದಲ್ಲೂ ರಕ್ತದಾನ ಶಿಬಿರ : ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲೂ ಎಚ್.ಡಿ.ಎಫ್.ಸಿ. ಬ್ಯಾಂಕ್ ನೇತೃತ್ವದಲ್ಲಿ ರಕ್ತದಾದ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಈ ಮಹತ್ವದ ಕಾರ್ಯಕ್ಕೆ ಸಾಥ್ ನೀಡಿದ್ದ ಇಲ್ಲಿಯ ಎಸ್.ಡಿ.ಎಂ ಕಾಲೇಜು. ಕಾಲೇಜಿನಲ್ಲಿ ರಕ್ತದಾನ ಶಿಬಿರದ ಅಂಗವಾಗಿ ಸರಳವಾಗಿ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ತಾಲೂಕು ಆರೋಗ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ ಅವರು, ನಿತ್ಯ ವಿವಿಧ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೊಳಗಾಗುವ ಅಗತ್ಯ ರೋಗಿಗಳಿಗೆ ರಕ್ತ ನೀಡುವುದು ಅನಿವಾರ್ಯವಗುತ್ತದೆ. ಅಲ್ಲದೇ ಕೆಲ ನಿಶ್ಯಕ್ತಿಗೊಳಗಾದ ರೋಗಿಗಳಿಗೂ ರಕ್ತ ನೀಡಲಾಗುತ್ತದೆ. ಕ್ಯಾನ್ಸರ್ ಪೀಡಿತ ರೋಗಿಗಳಿಗೂ ವೈದ್ಯರ ಸಲಹೆಯಂತೆ ರಕ್ತ ಕೊಡುವುದು ಅತ್ಯಗತ್ಯವಾಗುತ್ತದೆ. ಹೀಗೆಲ್ಲ ಸವಾಲುಗಳಿರುವಾಗ ಎಲ್ಲ ಆಸ್ಪತ್ರೆಗಳಿಗೂ ಅಗತ್ಯಕ್ಕೆ ತಕ್ಕಂತೆ ರಕ್ತ ಪೂರೈಸುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ನಾವು ಮಾನವೀಯ ಹಿನ್ನೆಲೆಯಲ್ಲೂ ಕಾಲಕಾಲಕ್ಕೆ ರಕ್ತದಾನ ಮಾಡುತ್ತಿದ್ದರೆ ಎಷ್ಟೋ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದರು. ಪುರುಷರಾದರೆ ಮೂರು ತಿಂಗಳಿಗೊಮ್ಮೆ, ಮಹಿಳೆಯರಾದರೆ ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ವಿದ್ಯಾರ್ಥಿಗಳು ಕಾಲಕಾಲಕ್ಕೆ ರಕ್ತ ನೀಡುವುದುನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು ಎಂದರು.

ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಮಾತನಾಡಿ, ಹೊನ್ನಾವರ ಎಸ್.ಡಿ.ಎಂ. ಕಾಲೇಜಿನ ವಿದ್ಯಾರ್ಥಿ ಸಮುದಾಯ ಪ್ರತಿ ವರ್ಷ ನಡೆಸುವ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡುತ್ತಿರುವುದು ಪ್ರಶಂಸನಾರ್ಹ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಸಂಜೀವ ನಾಯಕ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಂ.ಜಿ.ಹೆಗಡೆ, ಪ್ರೊ. ನಾಗರಾಜ ಹೆಗಡೆ ಅಪಗಾಲ,ಕಾಲೇಜಿನ ವಿದ್ಯಾರ್ಥಿವೃಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಒಟ್ಟೂ 50 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಕಾಲೇಜಿನ ವಿದ್ಯಾರ್ಥಿ ಒಕ್ಕೂಟ, ಯುಥ್ ರೆಡ್ ಕ್ರಾಸ್ ಸಂಸ್ಥೆ, ಆರೋಗ್ಯ ಇಲಾಖೆ, ರಕ್ತ ಸಂಗ್ರಹಣಾ ವಿಭಾಗ, ತಾಲೂಕು ಆಸ್ಪತ್ರೆ ಹೊನ್ನಾವರ ಇವುಗಳೆಲ್ಲ ರಕ್ತದಾನ ಶಿಬಿರಕ್ಕೆ ಸಹಕಾರ ನೀಡಿದವು.
