ಮರೆತುಹೋದ ಸಂಸ್ಸೃತಿಯನ್ನು ಮರಳಿ ಅನ್ವೇಶಿಸುವುದು ಅತ್ಯಗತ್ಯ’ಗೇರಸೊಪ್ಪ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ವಾರ್ಷಿಕೋತ್ಸವದಲ್ಲಿ ಮಾರುತಿ ಗುರೂಜಿ

ಹೊನ್ನಾವರ: ಅನ್ವೇಶ ಅಂದರೆ ಹುಡುಕುವುದು. ಕೇವಲ ಹೊಸತನ್ನು ಮಾತ್ರವಲ್ಲ, ಮರೆತು ಹೋದ ನಮ್ಮ ಸಂಸ್ಸೃತಿಯನ್ನು ಸಹ ಮರಳಿ ಅನ್ವೇಶಿಸುವುದು ಅತ್ಯಗತ್ಯ.

ಈ ಕಾರಣಕ್ಕಾಗಿಂಯೇ ನಮ್ಮ ಸಂಸ್ಥೆಯ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್‌ನ ವಾರ್ಷಿಕೋತ್ಸವಕ್ಕೆ ‘ಅನ್ವೇಶ’ ಕರೆದಿದ್ದೇವೆ ಎಂದು ಶ್ರೀ ವೀರಾಂಜನೇಯ ಎಜುಕೇಶನ್ ಚೆರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಶ್ರೀ ಮಾರುತಿ ಗುರೂಜಿ ಅವರು ತಿಳಿಸಿದರು.

ಅವರು ಗೇರಸೊಪ್ಪ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ ನ ವಾರ್ಷಿಕೋತ್ಸವದ ಉದ್ಘಾಟನಾ ಕಾರ್ಯಕ್ರಮದ ಸಾಧ್ಯತ ವಹಿಸಿ ಆಶೀರ್ವಚನ ನೀಡುತ್ತ ಸಾಧನೆ ಯಾರೊಬ್ಬರ ಸ್ವತ್ತಲ್ಲ. ಅದು ಯಾರು ಶ್ರಮಿಸುತ್ತಾರೋ ಅವರಿಗೆ ಒಲಿಯುತ್ತದೆ. ಮಕ್ಕಳೊಳಗಿನ ಪ್ರತಿಭೆ ಅನ್ವೇಶಿಸಲು ಈ ವೇದಿಕೆ ನೆರವಾಗಿರಲಿ ಎಂದು ಗುರೂಜಿ ನುಡಿದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕೈಗಾರಿಕಾ ರಸಾಯನ ಶಾಸ್ತç ವಿಭಾಗದ ಅಧ್ಯಕ್ಷ ಪ್ರೊ. ಬಿ.ಇ.ಕುಮಾರಸ್ವಾಮಿ ಗ್ರಾಮೀಣ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಈ ವಿದ್ಯಾಸಂಸ್ಥೆ ವಿಶ್ವವಿದ್ಯಾಲಯ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಸಂಸ್ಥೆಯ ಕಾರ್ಯzರ್ಶಿ ಅರ್ಪಿತಾ ಮಾರುತಿ ಗುರೂಜಿ, ಆಡಳಿತಾಧಿಕಾರಿಯಾದ ಮಂಜುನಾಥ ಎಂ.ಎನ್. ಆಡಳಿತ ನಿರ್ದೇಶಕ ಜಿ.ಟಿ.ಹೆಗಡೆ, ಪಾಲಕ-ಶಿಕ್ಷಕ ಸಂಘದ ಉಪಾಧ್ಯಕ್ಷ ವಿನಾಯಕ ನಾಯ್ಕ, ಕಾರ್ಯದರ್ಶಿ ವಿಷ್ಣುಮೂರ್ತಿ ಹೆಗಡೆ, ಪ್ರಾಂಶುಪಾಲ ಜಾನ್ ಬಾಸ್ಕೋ ಮುಂತಾದವರು ಉಪಸ್ಥಿತರಿದ್ದರು. ತಮ್ಮ ಶಾಲೆಯ ವಾರ್ಷಿಕೋತ್ಸವದ ನಿರೂಪಣೆಯನ್ನು ವಿದ್ಯಾರ್ಥಿಗಳೇ ನಿರೂಪಿಸಿದರು.

Leave a Reply

Your email address will not be published. Required fields are marked *