ಸರ್ಕಾರಕ್ಕೆ ಭಾರವಾಗಲಿರುವ ‘ಗ್ಯಾರಂಟಿ ಅಧ್ಯಕ್ಷರುಗಳು’

ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ (Congress Government) ಪಂಚ ‘ಗ್ಯಾರಂಟಿ’ ಯೋಜನೆಗಳ ಭರವಸೆ ನೀಡಿ, ಜನರ ಮನ ಒಲಿಸಿ ಅಧಿಕಾರಕ್ಕೆ ಬಂದು ಇದೀಗ 8 ತಿಂಗಳಾಗುತ್ತ ಬಂದಿದೆ.

ಚುನಾವಣಾ ಪ್ರಣಾಳಿಕೆಯಲ್ಲಿಕೊಟ್ಟ ಮಾತಿನಂತೆ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದು ಜನರಿಗೆ ಖುಷಿಯಾಗುವಂತೆ ಮಾಡಿದ್ದಾರೆ, ಮಾತ್ರವಲ್ಲ, ಮೂಗಿಗಿಂತ ಮೂಗುತಿಯೇ ಭಾರ ಎಂಬಂತೆ ರಾಜ್ಯದ ಬಜೆಟ್
ಗಾತ್ರದ ಮಿತಿ ಮೀರಿ ಹಣಕಾಸನ್ನುಬೇಡುವ ಈ ಗ್ಯಾರಂಟಿ ಯೋಜನೆಯನ್ನು (Guarantee schemes) ಹರಸಾಹಸ ಪಟ್ಟು ನಿರ್ವಹಿಸುವಲ್ಲಿ ಸರ್ಕಾರ ಬಸವಳಿದು ಹೈರಾಣಾಗುತ್ತಿರುವ ವಿಷಯ ಕೂಡ ಜನಸಾಮನ್ಯನಿಗೆ ಗೊತ್ತಾಗದೇ ಇರದು.

ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾರ್ಯಕ್ರಮ ಹೆಚ್ಚು ಕಡಿಮೆ ನಿಂತೇ ಹೋಗಿದೆ ಎಂಬುವಷ್ಟರ ಮಟ್ಟಿಗೆ ತಟಸ್ಥವಾಗಿದೆ. ಹೊಸ ಟೆಂಡರ್ ಪ್ರಕ್ರಿಯೆಗಳೂ ಆಗುತ್ತಿಲ್ಲ ಎಂಬ ಗೊಣಗಾಟ ಗುತ್ತಿಗೆದಾರರಿಂದ ಕೇಳಿ ಬರುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಕಾಮಗಾರಿಗಳ ಬಿಲ್ಬಾಕಿ ಇಟ್ಟು ಕೈ ತೊಳೆದು ಕೊಂಡು ಹೋದ ಪರಿಣಾಮ ಪಾವತಿ ಆಗದ ಮೊತ್ತವನ್ನು ನೀಡಲು ಕೂಡ ಸರಕರದ ಬಳಿ ಹಣವಿಲ್ಲ. ಮೇಲಾಗಿ ‘ಗ್ಯಾರಂಟಿ’ಯನ್ವಯ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ತಿಂಗಳಿಗೆ ತಲಾ ರೂ. 2000, ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ವ ರೆಗೆ ಪುಕ್ಕಟೆ ಕರೆಂಟ್, 10 ಕೆ.ಜಿ. ಉಚಿತ ಪಡಿತರ ಅಕ್ಕಿ, ಇದೀಗ ಮುಖ್ಯಮಂತ್ರಿ ಶಿವಮೊಗ್ಗದಲ್ಲಿ ಯುವ ನಿಧಿ ಯೋಜನೆಗೆ ಚಾಲನೆ ನೀಡಿದ್ದಾರೆ. ಯುವ ನಿಧಿ ಯೋಜನೆಯಡಿ
ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಪದವಿ ಮುಗಿಸಿದ ಹುಡುಗ-ಹುಡುಗಿಯರಿಗೆ ಎರಡು ವರ್ಷಗಳವರೆಗೆ ತಿಂಗಳಿಗೆ ತಲಾ ರೂ. 3000- ಡಿಪ್ಲೋಮಾ ಮಾಲಿಟೆಕ್ನಿಕ್ ಓದಿರುವವರಿಗೆ ಎರಡು ವರ್ಗಳ ಕಾಲ ತಿಂಗಳಿಗೆ ತಲಾ ರೂ.1500 ನೀಡುತ್ತೆವೆ ಎಂದು ಭರವಸೆ ನೀಡಿದ್ದು ಕೂಡ ಬಹುಮತದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು

ಇದೀಗ ಇನ್ನೊಂದು ಸುದ್ದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Karnataka Chief Minister Siddaramaiah) ಹರಿಬಿಟ್ಟಿದ್ದಾರೆ. ಗ್ಯಾರಂಟಿ ಯೋಜನೆಯ ಸಮರ್ಪಕ ನಿರ್ವಹಣೆಗಾಗಿ ಸಂಪುಟ ದರ್ಜೆಯ ರಾಜ್ಯಾಧ್ಯಕ್ಷ, ರಾಜ್ಯ ಸಚಿವ ದರ್ಜೆಯ ಐವರು ಉಪಾಧ್ಯಕ್ಷರು, ಪ್ರತಿ ಜಿಲ್ಲೆಗೆ ರೂ. 50 ಸಾವಿರ ಗೌರವಧನ ಪಡೆಯಲಿರುವ ಜಿಲ್ಲಾಧ್ಯಕ್ಷರು,
ರೂ. 25 ಸಾವಿರ ಗೌರವ ಧನ ಪಡೆಯಲಿರುವ ತಾಲೂಕಾಧ್ಯಕ್ಷರನ್ನು ನೇಮಕ ಮಾಡಲಾಗುವುದು. ಮತ್ತು ಈ ಎಲ್ಲ ಹಂತದ ಸಮಿತಿ ಸದಸ್ಯರಿಗೆ ಮೀಟಿಂಗ್ ಭತ್ಯೆ ಪಡೆಯಲಿರುವ ಸದಸ್ಯರುಗಳನ್ನು ಸರ್ಕಾರ ನೇಮಕ ಮಾಡಲಿದೆ.

ಮತ್ತು ಎಲ್ಲ ಖುರ್ಚಿಗಳನ್ನು ಅಧಿಕಾರ ವಂಚಿತ ನಿರಾಶ್ರಿತ ಕಾಂಗ್ರೆಸ್ ಶಾಸಕರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ನೀಡಲಾಗುವುದೆಂದು ಮುಖ್ಯಮಂತ್ರಿಗಳು ಪಕ್ಷದ ಸಭೆಯಲ್ಲಿ ಘೋಷಿಸಿದ್ದಾರೆ.

ಗ್ಯಾರಂಟಿ ಯೋಜನೆಯ ನಿರ್ವಹಣೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರಿಗೆ, ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಪಂಚಾಯತ ಸಿಇಓ ಗಳಿಗೆ, ತಹಸೀಲ್ದಾರರಿಗೆ, ತಾ.ಪಂ ಇ.ಓ ಗಳಿಗೆ, ಜೊತೆಗೆ ಸ್ಥಳೀಯ ಮಟ್ಟದಲ್ಲಿ ಕ್ಲಾಸ್ 1 , ಕ್ಲಾಸ್ 2 ಅಧಿಕಾರಿಗಳಿಗೆ, ಪಿಡಿಓ ಗಳಿಗೆ ತಾಕೀತು ಮಾಡಿದರೆ ಸಾಲದೇ? ಇವರೆಲ್ಲ
ನಿರ್ವಹಿಸಬಹುದಾದ ಕೆಲಸಗಳಿಗೆ ಮತ್ತೆ ‘ಗ್ಯಾರಂಟಿ ಅಧ್ಯಕ್ಷರುಗಳು’ ಬೇಕಿತ್ತೇ? ಇದು ಸರ್ಕಾರಕ್ಕೆ ಅನಗತ್ಯ ಹೊರೆ ಅಲ್ಲವೇ? ಈ ಕ್ರಮದಿಂದ ವಿರೋಧ ಪಕ್ಷಗಳ ಬಾಯಿಗೆ ಆಹಾರ ವಾಗುತ್ತಾರೆ ಅನ್ನುವುದಕ್ಕಿಂತಲೂ ಜನರ ಹಣ ಈ ರೀತಿ ಫೋಲಾಗುವುದು ಎಷ್ಟರ ಮಟ್ಟಿಗೆ ಸರಿ ಅನ್ನುವುದು ಜಿಜ್ಞಾಸೆಗೊಳಪಟ್ಟ ಸಂಗತಿಯಾಗಿದೆ.

ಈಗಾಗಲೇ 15 ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ನಕ್ಷೆಯನ್ನು ಅತ್ಯಂತ ನಾಜೂಕಾಗಿ ರೂಪಿಸಬಲ್ಲರು ಎಂಬ ವಿಶ್ವಾಸವನ್ನು ಆರ್ಥಿಕ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಹೀಗಿರುವಾಗ ಯಾರ್ಯಾರೋ ಅಧಿಕಾರ ವಂಚಿತ ನಿರಾಶ್ರಿತರನ್ನು ಸಮಾಧಾನ ಪಡಿಸಲು ಈ ರೀತಿ ಬೇಕಾಬಿಟ್ಟಿ ‘ಗ್ಯಾರಂಟಿ ಅಧ್ಯಕ್ಷ’ರನ್ನು ನೇಮಕ ಮಾಡುವುದು ರಾಜ್ಯದ ಹಣಕಾಸು ಸ್ಥಿತಿಗತಿಯ ಹಿನ್ನೆಲೆಯಲ್ಲಿ ಸರಿಯಾದ ಕ್ರಮವಲ್ಲ. ಈ ಹಿಂದೆ 2013-18 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ
ಸಿದ್ದರಾಮಯ್ಯ ಇಂಥ ಅತಿರೇಕದ ನಿರ್ಧಾರಗಳನ್ನು ತೆಗೆದುಕೊಂಡ ಉದಾಹರಣೆ ಇರಲಿಲ್ಲ. ಆಗ ‘ಅನ್ನಭಾಗ್ಯ’ ಜೊತೆ ಇನ್ನಿತರ ಜನಪರ ಭಾಗ್ಯಗಳನ್ನುಜಾರಿ ತಂದಾಗಲೂ ಹಣಕಾಸು ನಿರ್ವಹಣೆ ಹಳಿತಪ್ಪದಂತೆ ನೋಡಿಕೊಂಡಿದ್ದರು. ಆದರೆ ಈಗ ಗ್ಯಾರಂಟಿ ಯೋಜನೆಗಾಗಿ, ಅದರ ನಿರ್ವಹಣೆಗಾಗಿ ಅಧ್ಯಕ್ಷರು ಮತ್ತು ಅದಕ್ಕೊಂದು ಸಮಿತಿ ರಚಿಸಿ ಅವರನ್ನೆಲ್ಲ ‘ಸಾಕುವುದು’ ಸಮಂಜಸ ಕ್ರಮವಲ್ಲ. ಸರ್ಕಾರ ‘ಗ್ಯಾರಂಟಿ ಅಧ್ಯಕ್ಷ’ರ ನೇಮಕದ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸುವುದು ಒಳ್ಳೆಯದು.

Arvind karkikodi

ಲೇಖಕರು
ಅರವಿಂದ ಕರ್ಕಿಕೋಡಿ
ಪ್ರಧಾನ ಸಂಪಾದಕರು
ಹಣತೆವಾಹಿನಿ

Leave a Reply

Your email address will not be published. Required fields are marked *