ಹೊನ್ನಾವರ: ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ ತಾಲೂಕಿನ ಚಿಕ್ಕನಕೋಡ ಗ್ರಾಮದ ಗುಂಡಿಬೈಲ್ ಭಾಗದಲ್ಲಿ ಬೆಳೆದ ಭತ್ತದ ಫಸಲು ಹಾನಿಯಾಗದ್ದ ಬಗ್ಗೆ ‘ಹಣತೆ ವಾಹಿನಿ’ ಮಾಡಿದ ವರದಿಗೆ ಸ್ಪಂದಿಸಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪುನೀತಾ ಕಿರಣ್ ಅವರು ಕಂದಾಯ ಇಲಾಖೆ ಅಧಿಕಾರಿಗಳ ಜೊತೆಗೂಡಿ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದರು.
ಸರಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದ ಸಹಾಯಕ ನಿರ್ದೇಶಕರು ಅಗತ್ಯ ದಾಖಲೆಗಳನ್ನು
ಇಲಾಖೆಗೆ ನೀಡಲು ರೈತರಿಗೆ ಸೂಚಿಸಿದ್ದಾರೆ.