ಕುಮಟಾ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.18 ರಂದು ಒಂದು ದಿನದ ಜಿಲ್ಲಾ ಮಟ್ಟದ IQAC ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಆಂತರಿಕ ಗುಣಮಟ್ಟ ಅಭಿವೃದ್ಧಿ ಕೋಶ (IQAC)ದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಪದವಿ ಕಾಲೇಜುಗಳ ಪ್ರಾಚಾರ್ಯರು , ಐಕ್ಯೂಎಸಿ ಸಂಚಾಲಕರು, ಸಹ ಸಂಚಾಲಕರು ಹಾಗೂ NAAC ಮಾನದಂಡ-2 ಸಂಚಾಲಕರುಗಳಿಗೆ ಪ್ರಸ್ತುತ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಕಾಲೇಜುಗಳ ಸರ್ವತೋಮುಖ ಬೆಳವಣಿಗೆಗೆ ಅತ್ಯಗತ್ಯವಾಗುವ NAAC ಗ್ರೇಡನ್ನು ಉತ್ತಮವಾಗಿಸಿಕೊಳ್ಳಲು ಸಹಾಯಕವಾಗುವಂತೆ ರೂಪಿಸಲಾಗಿದ್ದು, ಕಾಲೇಜು ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಪ್ರಾದೇಶಿಕ ಜಂಟಿ ನಿರ್ದೇಶಕರಾದ ಪ್ರೊ. ಪ್ರಕಾಶ ಹೊಸಮನಿ ಉದ್ಘಾಟಕರಾಗಿ ಆಗಮಿಸಲಿದ್ದು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ವಿಜಯಾ ಡಿ. ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಜಂಟಿ ನಿರ್ದೇಶಕರ ಕಚೇರಿಯ ವಿಶೇಷಾಧಿಕಾರಿಗಳಾದ ಪ್ರೊ. ಅಫ್ತಾಬ್ ಬಾಯ್ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ. ಕಾಲೇಜಿನ ಐಕ್ಯುಎಸಿ ಸಂಚಾಲಕ ಪ್ರೊ. ಐ.ಕೆ.ನಾಯ್ಕ, ಸಹ ಸಂಚಾಲಕ ಪ್ರೊ ಸಂದೇಶ ಎಚ್., ಸಾಂಸ್ಕತಿಕ ವಿಭಾಗದ ಪ್ರೊ.ಗೀತಾ ನಾಯಕ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಡಾ. ವಿನಾಯಕ ನಾಯಕ ಉಪಸ್ಥಿತರಿರಲಿದ್ದಾರೆ.
ಓ.ಓ.ಡಿ. ಸೌಲಭ್ಯ : ಈ ಕಾರ್ಯಾಗಾರಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವ ಉದ್ದೇಶದಿಂದ ಜಂಟಿ ನಿರ್ದೇಶಕರು, ಜಿಲ್ಲೆಯ ಕಾಲೇಜುಗಳ ಸಂಬಂಧಪಟ್ಟ ಅಧ್ಯಾಪಕರುಗಳಿಗೆ 18-1-2023ರಂದು ಅನ್ಯಕಾರ್ಯ ನಿಮಿತ್ತ ರಜೆ (ಓ.ಓ.ಡಿ.) ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಎಲ್ಲರೂ ಎಲ್ಲರೂ ಈ ಕಾರ್ಯಾಗಾರದ ಸದುಪಯೋಗ ಪಡೆಯಬೇಕೆಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ಕೋರಿದ್ದಾರೆ.