ಗಳ ಗಳ ಅತ್ತಂತೆ, ಕ್ಷಣವೇ ನಕ್ಕಂತೆ
ಕಾಲಮಾನ
ವಿಸಂಗತ
ತೊಯ್ದಾಟದ
ಯಾನ.
ಸರಮಾಲೆ ಕನಸಾಗಿ
ಮುತ್ತಬಹುದು!

ಮೈ ಚೆಲ್ಲಿದರೆ ಸಾಕು
ಮುಗಿ ಬೀಳುತ್ತದೆ ದಿಗಿಲು
ಭಯದ ಭುಗಿಲು.
ನಿನ್ನೆ ಸಂಜೆ ಸೇತುವೆಯ ಬಳಿ ಕಂಡ ಸಣಕಲು ದೇಹದ ಅಜ್ಜಿಯ
ಹಸಿವಿನ
ಕತೆ
ಬರ್ಬರ ಬದುಕಿನ
ಕೂಗು
ಕಾಳಿ ತೀರದಲ್ಲಿ.
ತಾಳೆಯಾಗದು
ಉಸಿರಿನ ಲೆಕ್ಕಾಚಾರ.

ಬೆಳಗಿನ ಕನಸಿನಲ್ಲಿ ತೂರಿ ಬರುತ್ತಾಳೆ.
ನಿಟ್ಟುಸಿರಲ್ಲೂ ಕಾಡುತ್ತಾಳೆ ನೆರಿಗೆಯ ಹಣೆಯಲ್ಲಿ
ಹಂದಾಡುವ ಹಣ್ಣು ಕೂದಲ ಸರಿಸಿ.
ಹೌದು, ಮುಟ್ಟಿ ಮಾಸುವ ಬಯಕೆಗಳು,
ಬೆಂದ
ಕನಸುಗಳೆಲ್ಲ

ಈಗ ಕರಕಲು.
ತಾಳೆಯಾಗದು
ಉಸಿರಿನ ಲೆಕ್ಕಾಚಾರ.

ಲೇಖಕರು :
ಎನ್. ಜಯಚಂದ್ರನ್, ದಾಂಡೇಲಿ
ಕವಿ, ಪತ್ರಕರ್ತರು