ಕುಮಟಾ ತಾಲೂಕು ಭಂಡಾರಿ ಸಮಾಜೋನ್ನತಿ ಸಂಘದಸ್ನೇಹ ಸಮ್ಮೇಳನದಲ್ಲಿ ಕರೆ
ಕುಮಟಾ: ಇಲ್ಲಿಯ ಮಹಾಸತಿ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಭಂಡಾರಿಸಮಾಜೋನ್ನತಿ ಸಂಘದ ಕುಮಟಾ ಶಾಖೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರವಾರ ದೇವರಬಾಗದ ಪ್ರಾಥಮಿಕ ಆರೋಗ್ಯ ಕೇಂದ್ರ ಡಾ. ಸುವಿಧಾ ಕೆ ಪೆಡ್ನೇಕರ್, ನಮ್ಮ ಸಮಾಜ ಆರ್ಥಿಕವಾಗಿ ಬಡತನದಲ್ಲಿರಬಹುದು. ಆದರೆ ಭೌತಿಕವಾಗಿ ಸ್ವಾಭಿಮಾನದಂದ ಕೂಡಿದೆ. ನಾವು ಪರಾವಲಂಬಿಯಾಗದೇ ಆರ್ಥಿಕವಾಗಿ ಸ್ವತಂತ್ರವಾಗಬೇಕು. ನಮ್ಮ ಯುವಕರು ವ್ಯಸನ ಪೀಡತರಾಗದೇ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಬೇಕು. ಎಲ್ಲರೂ ಸೇರಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿ ಸದೃಢ ಸಮಾಜ ಕಟ್ಟುವಲ್ಲಿ ಒಗ್ಗಟ್ಟಾಗಿ ಹೋರಾಡುವ ತುರ್ತು ಇದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಇಲ್ಲಿಯ ಬಿರ್ಲಾ ಆಸ್ಪತ್ರೆಯ ಡಾ. ಸಿದ್ದೇಶ್ ಯು. ಅವರು ಮಾತನಾಡಿ ನಮ್ಮ ಸಮಾಜಕ್ಕೆ ಶಿವಾಜಿಯ ನಂಬಿಕೆ ಉಳಿಸಿಕೊಂಡ ಸಮಾಜ. ದೇಶ ಪ್ರೇಮ, ಪ್ರಾಮಾಣಿಕತೆಗೆ ಹೆಸರಾದ ಸಮಾಜ ಎಂಬ ಹೆಗ್ಗಳಿಕೆ ಇದೆ ಎಂದರು.

ಸಂಘಟನೆಯ ಜಿಲ್ಲಾ ಅಧ್ಯಕ್ಷ ಅರುಣ ಮಣಕೀಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಸಿ, ಸಮಾಜದ ಸಂಘಟನೆಯಲ್ಲಿ ಯುವಕರು ಪಾಲ್ಗೊಳ್ಳಬೇಕು.ನಮಗೆ ರಾಮಚಂದ್ರಾಪುರ ಮಠದ ಅನುಗ್ರಹ ಇದೆ. ಗುರುಗಳ ಮಾರ್ಗದರ್ಶನದಲ್ಲಿ ಗೋಕರ್ಣದ ಅಶೋಕೆಯಲ್ಲಿ ಜಿಲ್ಲೆಯ ಸಮಾಜದ ವತಿಯಿಂದ ಸಮ್ಮೇಳನ ಆಯೋಜಿಸುವ ಬಯಕೆ ಇದೆ ಸರ್ವರೂ ಸಹಕಾರ ನೀಡಬೇಕು ಎಂದರು.
ಜಿಲ್ಲಾ ಗೌರವಾಧ್ಯಕ್ಷ ವಿ ಎಂ ಭಂಡಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ,ಪಿಯುಸಿ ಹಾಗೂ ಪದವಿಯಲ್ಲಿ ಪ್ರತಿಭೆ ತೋರಿದ ಮಕ್ಕಳಿಗೆ ಶಿಷ್ಯವೇತನವನ್ನು ನೀಡಲಾಯಿತು. ಅನಾರೋಗ್ಯ ಪೀಡಿತ ಆರ್ಥಿಕವಾಗಿ ಸಬಲರಲ್ಲದವರಿಗೆ ವೈದ್ಯಕೀಯ ಸಹಾಯಧನ ನೀಡಲಾಯಿತು.
ಸಭೆಯಲ್ಲಿ ನಾರ್ಥ್ ಕೆನರಾ ಭಂಡಾರಿ ಸಮಾಜ ಸಂಘ ಗೋವಾದ ಅಧ್ಯಕ್ಷ ಶರತ್ ಪಡುವಳಕರ್, ಕಾರವಾರ ತಾಲೂಕ ಅಧ್ಯಕ್ಷ ಮೋಹನ ಕಿಂದಳಕರ್, ಭಟ್ಕಳದ ಅಧ್ಯಕ್ಷ ಗಣೇಶ ದೇಶಭಂಡಾರಿ, ಹೊನ್ನಾವರ ತಾಲೂಕಾ ಅಧ್ಯಕ್ಷ ಶ್ರೀಕಾಂತ ದೇಶಭಂಡಾರಿ ಅವರ್ಸಾ ಘಟಕದ ಅಧ್ಯಕ್ಷ. ಸುಧಾಕರ್ ಮಯೇಕರ್ ಕುಮಟಾ ತಾಲೂಕ ಅಧ್ಯಕ್ಷ ಶ್ರೀಧರ ಬೀರಕೋಡಿ, ಮಹಿಳಾ ಸಂಘದ ಸುಷ್ಮಾ ಗಾಂವ್ಕರ್, ಕಾರ್ಯದರ್ಶಿ ಹಾಗೂ ಕೊಂಕಣಿ ಅಕಾಡೆಮಿ ಮಾಜಿ ಸದಸ್ಯ ಚಿದಾನಂದ ಭಂಡಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತಾಲೂಕಾ ಸಂಘಟನೆಯ ವತಿಯಿಂದ ಜಿಲ್ಲಾಧ್ಯಕ್ಷ ಅರುಣ ಮಣಕೀಕರ್ ಹಾಗೂ ಲೋಕೋಪಯೋಗಿ ಇಲಾಖೆ ಕುಮಟಾದ ಅಭಿಯಂತರರಾದ ಸೋಮನಾಥ ಭಂಡಾರಿ ಇವರನ್ನು ಸನ್ಮಾನಿಸಲಾಯಿತು.
ಸಮಾಜದ ವಿದ್ಯಾರ್ಥಿಗಳು ವಿವಿಧ ಮನರಂಜನೆ ಕಾರ್ಯಕ್ರಮ ನೆಡೆಸಿಕೊಟ್ಟರು ಕುಮಾರಿ ಬಿಂದು ಪ್ರೀತಂ ಮಣಕೀಕರ್ ಯಕ್ಷಗಾನ ನೃತ್ಯ ಮಾಡಿ ಸರ್ವರ ಗಮನ ಸೆಳೆದರೆ, ಕುಮಾರ ಸನತ್ ಭಂಡಾರಿ ಪ್ರಾರ್ಥಿಸಿದರು, ಶ್ರೀಧರ ಬೀರಕೋಡಿ ಸ್ವಾಗತಿಸಿದರು. ಗೌರೀಶ ಭಂಡಾರಿ,ಹರ್ಷಿತಾ ಭಂಡಾರಿ, ಯಶಸ್ವಿನಿ ಮಣಕೀಕರ್, ವೈಭವಿ ಭಂಡಾರಿ
ಕಾರ್ಯಕ್ರಮ ನಿರೂಪಿಸಿದರು.