ಐಬಿಪಿಎಸ್ ನಿಂದ 2024-25 ನೇ ಸಾಲಿನ ವಿವಿಧ ಹುದ್ದೆಗಳಪರೀಕ್ಷಾ ವೇಳಾಪಟ್ಟಿ ಪ್ರಕಟ

ಐಬಿಪಿಎಸ್ ನಿಂದ 2024-25 ನೇ ಸಾಲಿನ ವಿವಿಧ ಹುದ್ದೆಗಳ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಈ ವಾರದಿಂದ ಪ್ರಸ್ತುತ ಅಂಕಣದಲ್ಲಿ ಬ್ಯಾಂಕಿಂಗ್ ಕುರಿತಾದ ಸಂಪೂರ್ಣ ಮಾಹಿತಿ ನೀಡುತ್ತಿದ್ದೇನೆ – ಆರ್.ಕೆ.ಬಿ.

ಬ್ಯಾಂಕ್ ನಲ್ಲಿ ಅಧಿಕಾರಿ/ ಗುಮಾಸ್ತರಾಗಬೇಕೆಂದು ಕನಸು ಹೊತ್ತವರಿಗೆ 2024-25 ರಲ್ಲಿ ಸಿಹಿ ಸುದ್ದಿ ದೊರಕಿದೆ. IBPS ಇದಕ್ಕೆ ಸಂಭಂದಿಸಿದಂತೆ ಅದಿಸೂಚನೆ ಹೊರಡಿಸಿದೆ.ಈ ವರ್ಷ ಹಿಂದೆಂದಿಗಿಂತಲೂ ಅತಿ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಸಾದ್ಯತೆ ಇದೆ. ದೇಶದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಅಧಿಕಾರಿ/ಗುಮಾಸ್ತ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ನೇಮಿಸಿಕೊಳ್ಳಲು ಪ್ರತಿ ವರ್ಷ IBPS ಕ್ಲರ್ಕ್ ಪರೀಕ್ಷೆಯನ್ನು

ನಡೆಸಲಾಗುತ್ತದೆ. ಬ್ಯಾಂಕಿಂಗ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮಾಡಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. IBPS ನ ಅಧಿಕಾರಿ/ಗುಮಾಸ್ತ ಹುದ್ದೆಗಳು ಬ್ಯಾಂಕಿಂಗ್ ವಲಯದಲ್ಲಿ ಪ್ರತಿಷ್ಠಿತ ಮತ್ತು ಉತ್ತಮ ಸಂಬಳದ ಕೆಲಸವಾಗಿದೆ.

Banking ವಲಯದಲ್ಲಿ ಉದ್ಯೋಗ ಬಯಸುವವರು IBPS ಪರೀಕ್ಷೆ ಬಗ್ಗೆ ತಿಳಿದಿರಲೇಬೇಕಾದ ಮಾಹಿತಿ ಇದು.
IBPS ಈ ಕೆಳಕಂಡ ಹುದ್ದೆಗಳಿಗೆ ಪರೀಕ್ಷೆ ಯನ್ನು ನಡೆಸುತ್ತದೆ. PO(ಅಧಿಕಾರಿ)/SO(ವಿಶೇಷ ಅಧಿಕಾರಿಗಳು)/Clerk(ಗುಮಾಸ್ತರು) ಮತ್ತು RRB Exam( ಮಲ್ಟಿಪರ್ಪಸ್ ವರ್ಕರ್ಸ್ ಹಾಗೂ ಅಧಿಕಾರಿಗಳು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಬಯಸುವ ಪ್ರತಿಯೊಬ್ಬರು IBPS ಪರೀಕ್ಷೆ ಕುರಿತಾಗಿ ತಿಳಿದಿರಲೇಬೇಕು. IBPS ಪರೀಕ್ಷೆಯನ್ನು IBPS (ಇನ್ಸ್ಟಿಟ್ಯೂಟ್ಆ ಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್) ಮೂಲಕ ಅಧಿಕಾರಿ/ಗುಮಾಸ್ತ ಹುದ್ದೆಗಳ ನೇಮಕಾತಿಯನ್ನು ಪ್ರತಿ ವರ್ಷ ನಡೆಸಲಾಗುತ್ತದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

IBPS ನ ಪೂರ್ಣ ರೂಪವೆಂದರೆ ಇನ್ಸ್ಟಿಟ್ಯೂಟ್ಆ ಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್. IBPS ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, SBI ಹೊರತುಪಡಿಸಿ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್ ಗಳ ನೇಮಕಾತಿ ಪರೀಕ್ಷೆಯನ್ನು
ನಡೆಸುತ್ತದೆ.SBI ಹಾಗೂ ಇತರೆ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳು/ನಬಾರ್ಡ್ ಸಂಸ್ಥೆಗಳು ಕೂಡ ತಮ್ಮ ನೇಮಕಾತಿಗಳನ್ನು IBPS ಮೂಲಕವೆ ಭರ್ತಿ ಮಾಡಿಕೊಳ್ಳುತ್ತವೆ. IBPS ಅನ್ನು ವಿವಿಧ ಸರ್ಕಾರಿ ಸಂಸ್ಥೆಗಳು, RBI ನಂತಹ ಬ್ಯಾಂಕುಗಳು ಮತ್ತು ಹಣಕಾಸು ಸಚಿವಾಲಯದ ನಾಮನಿರ್ದೇಶನ ಮಂಡಳಿ, IIT ಬಾಂಬೆ, NIBM ಮತ್ತು IBA ನಡೆಸುತ್ತದೆ. ಇದನ್ನು 1984 ರಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕ್ ಮ್ಯಾನೇಜ್ ಮೆಂಟ್ ನಿಂದ ಮೂಲ ಪರೀಕ್ಷಾ ಸಂಸ್ಥೆಯಾಗಿ

ರಚಿಸಲಾಯಿತು. IBPS ಬ್ಯಾಂಕಿಂಗ್ ಉದ್ಯೋಗಕ್ಕಾಗಿ PO ಪರೀಕ್ಷೆ, IBPS SO ಪರೀಕ್ಷೆ, IBPS ಕ್ಲರ್ಕ್ ಪರೀಕ್ಷೆ, IBPS RRB ಪರೀಕ್ಷೆಯನ್ನು ನಡೆಸುತ್ತದೆ. ಈ ಪರೀಕ್ಷೆಗಳ ಮೂಲಕ ಭರ್ತಿ ಮಾಡಲಾದ ಹುದ್ದೆಗಳಲ್ಲಿ ಸ್ಪೆಷಲಿಸ್ಟ್ ಅಧಿಕಾರಿಗಳು, ಪ್ರೊಬೇಷನರಿ ಅಧಿಕಾರಿಗಳು (ಪಿಒ), ಮ್ಯಾನೇಜ್ ಮೆಂಟ್ ಟ್ರೈನಿ (ಎಂಟಿ) ಸೇರಿದ್ದಾರೆ.ಇನ್ನೂ ಯಾವೆಲ್ಲಾ ಹುದ್ದೆಗಳನ್ನು IBPS SO ಮೂಲಕ ನೇಮಕ ಮಾಡಲಾಗುತ್ತದೆ ಎಂದು ನೋಡುವುದಾದರೆ, ಐ.ಟಿ. ಅಧಿಕಾರಿ (ಸ್ಕೇಲ್-I), ಕೃಷಿ ಕ್ಷೇತ್ರ ಅಧಿಕಾರಿ (ಸ್ಕೇಲ್ I), ರಾಜಭಾಷಾ ಅಧಿಕಾರಿ (ಸ್ಕೇಲ್ I), ಕಾನೂನು ಅಧಿಕಾರಿ (ಸ್ಕೇಲ್ I), ಮಾನವ ಸಂಪನ್ಮೂಲ / ಸಿಬ್ಬಂದಿ ಅಧಿಕಾರಿ (ಸ್ಕೇಲ್ I),
ಮಾರ್ಕೆಟಿಂಗ್ ಅಧಿಕಾರಿ (ಸ್ಕೇಲ್ I).ಗ್ರೂಪ್ A- ಆಫೀಸರ್ಸ್ (ಸ್ಕೇಲ್-I, II & and III) ಮತ್ತು ಗ್ರೂಪ್ B- ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ನೇಮಕಾತಿಯನ್ನು IBPS RRB ಪರೀಕ್ಷೆಯ ಮೂಲಕ ಮಾಡಲಾಗುತ್ತದೆ. IBPS SO ಮತ್ತು IBPS RRB ಜೊತೆಗೆ, IBPS PO ಮತ್ತು IBPS ಕ್ಲರ್ಕ್ ಗಳನ್ನು PO ಮತ್ತು ಕ್ಲರ್ಕ್ ಗಳನ್ನು ಪರೀಕ್ಷೆಗಳ ಮೂಲಕ ಭರ್ತಿ ಮಾಡಲಾಗುತ್ತದೆ.

ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯನ್ನು ಪ್ರತಿ ವರ್ಷ ಐಬಿಪಿಎಸ್ 11 ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ನಡೆಸುತ್ತದೆ. ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳು ಈ ಹುದ್ದೆಯನ್ನು ಭರ್ತಿ ಮಾಡಲು ಸಿಆರ್ ಪಿಯನ್ನು(CRP) ಆಧಾರವಾಗಿ ಬಳಸುತ್ತವೆ.

IBPS FY 2024-25 ಗಾಗಿ 13 ನೇ ವರ್ಷದ ಕ್ಲರ್ಕ್ ಪರೀಕ್ಷೆಯನ್ನು ನಡೆಸಲಿದೆ. ಆದ್ದರಿಂದ ಇದನ್ನು IBPS ಕ್ಲರ್ಕ್ CRP XIII ಎಂದು ಹೆಸರಿಸಲಾಗಿದೆ. IBPS ಕ್ಲರ್ಕ್ ನೇಮಕಾತಿಗೆ ವಯಸ್ಸಿನ ಮಿತಿ 20 ರಿಂದ 28 ವರ್ಷಗಳು.IBPS ಕ್ಲರ್ಕ್ ಅಧಿಸೂಚನೆ 2024 ಅನ್ನು ಜುಲೈ 2024 ರಲ್ಲಿ ಬಿಡುಗಡೆ ಮಾಡಲಾಗುತ್ತದೆ. 2022-23ರಲ್ಲಿ ಒಟ್ಟು 6.59 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಈ ಪೈಕಿ ಒಟ್ಟು 4.91 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ
ಹಾಜರಾಗಿದ್ದರು.

ಐಬಿಪಿಎಸ್ ಕ್ಲರ್ಕ್ ಪರೀಕ್ಷೆಗೆ ಪ್ರತಿ ವರ್ಷ ಸುಮಾರು 6-7 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ.ಈ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು IBPS ಕ್ಲರ್ಕ್ ಪರೀಕ್ಷೆಯ ದಿನಾಂಕ, ಪರೀಕ್ಷೆಯ ಮಾದರಿ, ಪಠ್ಯಕ್ರಮ, ಆಯ್ಕೆ ಪ್ರಕ್ರಿಯೆ ಮತ್ತು ಇತರ ಪ್ರಮುಖ ವಿವರಗಳ ಬಗ್ಗೆ ತಿಳಿದಿರಬೇಕು.

(ಮುಂದಿನ ವಾರ ಉಳಿದ ಪರೀಕ್ಷೆಯ ವೇಳಾಪಟ್ಟಿ ಕುರಿತಾದ ವಿವರವಾದ ಮಾಹಿತಿಯನ್ನು ಪಡೆದುಕೊಳ್ಳೋಣ.)

ಲೇಖಕರು :
ಆರ್.ಕೆ. ಬಾಲಚಂದ್ರ
ಬೆಂಗಳೂರು

Leave a Reply

Your email address will not be published. Required fields are marked *