ದಾಂಡೇಲಿಯಲ್ಲಿ ಶಿವರಾತ್ರಿ I ಬ್ರಹ್ಮಕುಮಾರಿ ವಿ.ವಿ.ಯಿಂದ ಜ್ಯೋತಿರ್ಲಿಂಗ ದರ್ಶನ

ದಾಂಡೇಲಿ : ನಗರದ ಬೃಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಮಹಾ ಶಿವರಾತ್ರಿಯ ನಿಮಿತ್ತ ಮೂರುದಿನಗಳ ದ್ವಾದಶ ಜ್ಯೋತಿರ್ಲಿ೦ಗ ದರ್ಶನ,

ಅನಂತಕೋಟಿ ಶಿವಲಿಂಗ ದರ್ಶನ, ಆಧ್ಯಾತ್ಮಿಕ ಪ್ರದರ್ಶನ ಜೊತೆಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ದಾಂಡೇಲಿ ಘಟಕದಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾನೂನು ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊ ಳ್ಳಲಾಯಿತು.

ಸ್ಥಳೀಯ ಹಳೇ ನಗರಸಭೆಯ ಮೈದಾನದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ದಾಂಡೇಲಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರೋಹಿಣಿ   ಬಸಾಪುರ ಅವರು’ ಮನುಷ್ಯ ಒಳಗಡೆಯಿಂದ ಪರಿವರ್ತನೆಯಾಗಬೇಕು, ಆಗ ಮಾತ್ರ ಸಮಾಜವನ್ನು ಆರೋಗ್ಯಕರ ರೀತಿಯಲ್ಲಿ ಮುನ್ನಡೆಸಲು ಸಾಧ್ಯ. ಇಂದಿನ ಜಗತ್ತಿನಲ್ಲಿ ಆಧ್ಯಾತ್ಮಿಕತೆಯ ಅವಶ್ಯಕತೆ ಇದೆ. ಜೀವನವನ್ನು ನಡೆಸುವಂತ ಶೈಲಿ ಬೇಕಾಗಿದೆ. ಅದನ್ನು ಶಾಲಾಕಾಲೇಜುಗಳಲ್ಲಿ
ಕಲಿಸಲಾಗುವುದಿಲ್ಲ. ಇಂತಹ ಸಂಸ್ಕಾರವನ್ನು ಈಶ್ವರೀಯ ವಿಶ್ವವಿದ್ಯಾಲಯ ಕಲಿಸಿಕೊಡುತ್ತದೆ’ ಎ೦ದು ನುಡಿದರು.

‘ಮನುಷ್ಯನಿಗೆ ಬೇಕಾಗಿರುವದು ಮನಸ್ಸಿನೊಳಗಿನ ಶಾಂತಿ. ಶಾಂತಿಯಿದ್ದರೆ ಮಾತ್ರ ಹೊರಗಿನ ಯಾವುದೇ ಕೆಲಸವನ್ನು ಚೆನ್ನಾಗಿ ಮಾಡಲು ಸಾಧ್ಯ. ಇಂದು ಸಮಾಜದಲ್ಲಿ  ಮೂಡಿರುವ ಅರಾಜಕತೆ ಭೃಷ್ಠಾಚಾರವನ್ನೇ ನೋಡಿದರೆ ಆತಂಕವಾಗುತ್ತದೆ. ಧನಕನಕ ಉಳ್ಳವರಲ್ಲೇ ಅತಿಯಾದ  ದುರಾಸೆ ತುಳುಕುತ್ತಿದ್ದು ಸಮಾಜದ ವ್ಯವಸ್ಥೆಯನ್ನೆ ಬದಲಿಸಿದೆ. ಕಿತ್ತು ತಿನ್ನುವ ಬಡತನದಲ್ಲಿ ಚಿಕ ಮಕ್ಕಳು, ಮಹಿಳೆಯರು ಶೋಷಿತರಾಗುತ್ತಿದ್ದು ಅವರಿಗೆ ಶಾಂತಿ, ಸೌಹಾರ್ದತೆ, ಸಂಸ್ಕಾರ ರೂಪಿಸಿ ರಕ್ಷಣೆ ಒದಗಿಸಲು ಇಂತಹ ಸಮಾಜಮುಖಿ ಕಾರ್ಯಕ್ರಮಗಳ
ಆಯೋಜನೆಯಾಗಬೇಕು’ ಎಂದು ನಾಯಾಧೀಶೆ ರೋಹಿಣಿ   ಬಸಾಪುರ ಅಭಿಪ್ರಾಯ ವ್ಯಕ್ತಪಡಿಸಿದರು.

ವೇದಿಕೆಯಲ್ಲಿದ್ದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಬಿ.ಕೆ. ಗೀತಕ್ಕ ‘ಶಿವಸ್ಮರಣೆಯ ಸನ್ನಿಧಿಯಲ್ಲಿ ಶಿವನಾಮ ಸ್ಮರಣೆ ಮಾಡುತ್ತಾ ಆಧ್ಯಾತ್ಮದ ತಲ್ಲೀನತೆಯಿಂದ ಕೈಗೊಳ್ಳುವ ಉಪವಾಸವೇ ನಿಜ ಸ್ವರೂಪದ ದರ್ಶನ. ನಿರಾಕಾರ ನಿರ್ಗುಣನು ಆಗಿರುವ ಶಿವ ಎಲ್ಲವೂ ಆಗಿದ್ದಾನೆ ಎಂದು ಉಪನ್ಯಾಸ ನೀಡಿದರು.

ಮೂರು ದಿನಗಳ ಕಾಲ ಜರುಗಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇಲ್ಲಿಯ ದ್ವಾದಶ ಜ್ಯೋತಿರ್ಲಿಂಗ ದರ್ಶನ, ಅನಂತಕೋಟಿ ಶಿವಲಿಂಗ ದರ್ಶನ ಆಧ್ಯಾತ್ಮಿಕ ಪ್ರದರ್ಶನ, ಸಾ೦ಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಆನಂದಿಸಿದರು.

ಕಾರ್ಯಕ್ರಮದಲ್ಲಿ ತಹಶೀಲದಾರ ಎಂ. ಎನ್. ಮಠದ, ಡಿ.ವೈ ಎಸ್.ಪಿ. ಶಿವಾನಂದ ಎನ್.ಎಂ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಚವ್ಹಾಣ, ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವರಾಯ ಎಚ್. ದೇಸಾಯಿ, ಪೌರಾಯುಕ್ತರಾದ ರಾಜಾರಾಮ ಪವಾರ, ತಾ. ಪಂ. ಕಾರ್ಯಾ ನಿರ್ವಾಹಕ ಅಧಿಕಾರಿ ಪ್ರಕಾಶ ಹಾಲಮ್ಮನವರ, ವಕೀಲರ ಸಂಘದ ಅಧ್ಯಕ್ಷ ಎಚ್.ಎಸ್.ಕುಲಕರ್ಣಿ, ನಗರಸಭಾ ಸದಸ್ಯರು,ಮತ್ತಿತರ ಇಲಾಖೆಯ ಅಧಿಕಾರಿಗಳು,
ಸಿಬ್ಬಂಧಿಗಳು ಪಾಲ್ಗೊಂಡು ಸಹಕಾರ ನೀಡಿದರು. ನಿರ್ಮಲಕ್ಕ ಕಾರ್ಯಕ್ರಮ ಸಂಯೋಜಿಸಿದರು.

ಉಚಿತ ಕಾನೂನು ಸಲಹೆ ಮತ್ತು ಜನತಾ ನ್ಯಾಯಾಲಯ

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಹಾಗೂ ದಾಂಡೇಲಿ ತಾಲೂಕು ಕಾನೂನು ಸೇವಾ ಘಟಕದ ಸಹಯೋಗದೊಂದಿಗೆ ದಾಂಡೇಲಿ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಘಟಕವು ಆಯೋಜಿಸಿದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತ ಕಾನೂನು ಸಲಹೆ ಮತ್ತು ಜನತಾ ನ್ಯಾಯಾಲಯ ಯೋಜನೆ ಕುರಿತು ತಿಳುವಳುಕೆ ನೀಡಲಾಯಿತು.

ಸ್ಥಳೀಯ ನ್ಯಾಯಾಧೀಶರಾದ ರೋಹಿಣಿ ಬಸಾಪೂರ ಅವರ ಮಾರ್ಗದರ್ಶನದಲ್ಲಿ ಮಳಿಗೆಯೊಂದನ್ನು ತೆರೆದು ಪ್ರಸ್ತುತ ವಿಷಯದ ಬಗ್ಗೆ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸತತ ಮೂರು ದಿನಗಳ ಕಾಲ ಜರುಗಿದ ಈ ಮಳಿಗೆಯ ಮೂಲಕ ವಿದ್ಯಾರ್ಥಿಗಳಿಗೆ ಕಾನೂನಿನ ಪ್ರಾಥಮಿಕ ಜ್ಞಾನ, ಮಹಿಳೆಯರಿಗೆ ಕಾನೂನಿನ ಮೂಳಕ ಅವರ ರಕ್ಷಣೆ, ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತ ಮಾಹಿತಿ, ಸಾರ್ವಜನಿಕ ರಿಗೆ ಉಚಿತ ಕಾನೂನು
ನೆರವು ಸಮಿತಿಯ ಪ್ರಯೋಜನಗಳ ಕುರಿತು ನ್ಯಾಯವಾದಿ ರಾಘವೇಂದ್ರ ವಿ. ಗಡೆಪ್ಪವರ್ ಉಪನ್ಯಾಸ ನೀಡಿದರು. ನ್ಯಾಯವಾದಿ ಜಯಾ ಡಿ.ನಾಯ್ಕ ನಿರ್ವಹಿಸಿದರು. ಕಾನೂನು ಸೇವಾ ಸಮಿತಿಯ ಸಿಬ್ಬಂದಿ ರಾಹುಲ ಮಡಿವಾಳ, ಮಹೇಶ ಮಾಯಣ್ಣವರ ಸಹಕರಿಸಿದರು.

Leave a Reply

Your email address will not be published. Required fields are marked *