ಮನೆಗೆ ಬಂದ ತಕ್ಷಣ ಚಿಕ್ಕ ಮಕ್ಕಳು ಕೇಳುವುದು, ಆಟವಾಡಲು ನಿಮ್ಮ ಮೊಬೈಲ್ ಫೋನ್ ಕೊಡಿ ಎಂದು ??????? ಇದು ಬಹಳ ಮನೆಯ ಸಾಮಾನ್ಯ ಸಮಸ್ಯೆಯಾಗಿದೆ. ಮಕ್ಕಳು ಇಂದು ಮೊಬೈಲ್‌ನಲ್ಲಿ ಎಲ್ಲ ಆಪ್ಷ್ನ್‌ಗಳನ್ನು

ಬಳಸುವುದು ನಮಗಿಂತ ಹೆಚ್ಚಿನದಾಗಿ ಅವರಿಗೆ ತಿಳಿದಿದೆಯೆಂದರೆ ಅತಿಶಯೋಕ್ತಿಯಲ್ಲವೆಂಬುದು ಹಲವರ ಅಂಬೋಣವಾಗಿದೆ. ಮೊಬೈಲ್‌ನಲ್ಲಿ ಆಟಗಳನ್ನು ಆಡುವುದು, ಚೋಟಾ ಭೀಮ್, ಕ್ರಿಷ್ಣ ಇತ್ಯಾದಿ ಆಪ್‌ಗಳು ಮತ್ತು ಯೂಟ್ಯೂಬ್‌ನಲ್ಲಿನ ಹಾಡುಗಳು ಮತ್ತು ವಿಡಿಯೋಗಳನ್ನು ಹುಡುಕಿ ನೋಡುವುದನ್ನು ಗಮನಿಸಿದರೆ ಅಜ್ಜ-ಅಜ್ಜಿಯಂದಿರಿಗೆ ಬಹಳಷ್ಟು ಆಶ್ಚರ್ಯವನ್ನು ಉಂಟು ಮಾಡುತ್ತದೆ.

ಇದನ್ನು ಅವರ ಬುದ್ದಿವಂತಿಕೆಯ ಪರಮಾವಧಿಯೆನ್ನಬೇಕೋ ಅಥವಾ ಅವರ ಆರೋಗ್ಯಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತದೆoದು ವ್ಯಥೆ ಪಡಬೇಕೋ, ತಿಳಿಯದಾದಂತಾಗಿದೆ. ನನ್ನಲ್ಲಿ ಬರುವ ಬಹಳಷ್ಟು ಪೋಷಕರ ಅಳಲೆಂದರೆ, ಮಗು ಮೊಬೈಲ್ ಕೊಡದಿದ್ದರೆ ಊಟವನ್ನು ಮಾಡುವುದಿಲ್ಲವೆಂಬುದು, ಮಗುವಿನ ಅಳುವನ್ನು ನಿಲ್ಲಿಸಬೇಕೆಂದರೆ ಮೊಬೈಲ್ ಒಂದೇ ದಾರಿಯೆಂಬುದು, ಪೋಷಕರು ತಮ್ಮ ಕೆಲಸವನ್ನು ಮಾಡಿಕೊಳ್ಳಬೇಕೆಂದರೆ ಮೊಬೈಲ್‌ನ್ನು ನೀಡಿದರೆ ಮಾತ್ರ ಸಾಧ್ಯವೆನ್ನುವುದು ಇತ್ಯಾದಿಗಳು.

ಮಕ್ಕಳು ಮೊಬೈಲ್ ಹಿಡಿಯುವರೆಂಬುದು ಬಹಳಷ್ಟು ಪೋಷಕರ ದೂರಾದರೂ, ಇದರ ಮೂಲಕಾರಣವು ಅವರೇ ಆಗಿರುತ್ತಾರೆಂಬುದು ನನ್ನ ವೈಯುಕ್ತಿಕ ಅಭಿಪ್ರಾಯ. ಮಕ್ಕಳು ತಂದೆ ತಾಯಿಯನ್ನು ನೋಡಿ ಕಲಿಯುವುದು ಹೆಚ್ಚು. ಇವರ ಮೊಬೈಲ್ ಬಳಕೆಯು ಮಕ್ಕಳ ಮೇಲೆ ಪ್ರಭಾವವನ್ನು ಬೀರುತ್ತದೆ, ಜೊತೆಗೆ ಅವರ ಆರೋಗ್ಯದ ಮೇಲೆಯು ಬಹಳಷ್ಟು ಪ್ರಭಾವವನ್ನು ಬೀರುತ್ತದೆ. ಪೋಷಕರು ಮನೆಗೆ ಬಂದ ನಂತರ ತಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಲಾರಂಭಿಸಿದರೆ ಅದು ಮಗುವಿನ ಬೌದ್ದಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಬಹಳಷ್ಟು ಪೋಷಕರು ಮನೆಗೆ ಬಂದ ನಂತರವೂ ಡಿಜಿಟಲ್ ಸ್ಕಿçÃನ್‌ಗಳಿಗೆ ಅಂಟಿಕೊAಡಿರುವುದು ವಾಡಿಕೆಯಾಗಿದೆ. ಇದನ್ನು ನೋಡುತ್ತಾ ಬೆಳೆಯುವ ಮಕ್ಕಳು ಇದರ ದಾಸರಾಗುವುದರಲ್ಲಿ ಆಶ್ಚರ್ಯ ಪಡುವಂತಹ ಸಂಗತಿಯೇನಿಲ್ಲ…………..
ಕರೋನಾ ಬಂದಾಗಿನಿAದ ಮಕ್ಕಳು, ದೊಡ್ಡವರು ಎಂಬ ಭೇಧ ಭಾವವಿಲ್ಲದೆ ಎಲ್ಲರೂ ಡಿಜಿಟಲ್ ಸ್ಕ್ರೀನ್ ನ ದಾಸರಾಗುವುದು ಅನಿವಾರ್ಯವಾಗಿದೆ. ವರ್ಕ್ ಫ್ರಂ ಹೋಂ ಮತ್ತು ಆನ್ ಲೈನ್ ಶಿಕ್ಷಣದ ಅನಿವಾರ್ಯತೆಯು ಡಿಜಿಟಲ್ ಸ್ಕ್ರೀನ್ ಕೆಟ್ಟದೆಂದು ತಿಳಿದಿದ್ದರೂ, ಬಳಕೆಯು ಅನಿವಾರ್ಯ ಎನ್ನುವ ಪರಿಸ್ಥಿತಿಯನ್ನು ತಂದೊಡ್ಡಿದೆ.
ಪೋಷಕರು ಮೊಬೈಲ್ ಬಳಕೆಯನ್ನು ಹೆಚ್ಚು ಮಾಡಿದಂತೆ ಮಕ್ಕಳ ಮೇಲಿನ ಗಮನ ದೂರವಾಗುತ್ತದೆ. ಇದನ್ನು ಗಮನಿಸುವ ಮಗು ತನ್ನ ಗಮನವನ್ನು ಮೊಬೈಲ್ ಕಡೆಗೆ ತಿರುಗಿಸಿಕೊಳ್ಳಲಾರಂಭಿಸುತ್ತದೆ. ಈ ಅತಿಯಾದ ಮೊಬೈಲ್ ಬಳಕೆಯು ಪೋಷಕರ ಮತ್ತು ಮಕ್ಕಳ ನಡುವಿನ ಅಂತರಕ್ಕೆ ಕಾರಣವಾಗುತ್ತದೆ. ಮೊಬೈಲ್ ಸಿಗ್ನಲ್‌ಗಳಿಂದ ಉತ್ಪತ್ತಿಯಾಗುವ ಕಿರಣಗಳು ಮಗುವಿನ ದೈಹಿಕ, ಮಾನಸಿಕ ಮತ್ತು ಬೌದ್ದಿಕ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳನ್ನು ಬೀರುತ್ತದೆಂಬುದು ವೈಜ್ಞಾನಿಕವಾಗಿ ದೃಡಪಟ್ಟಿದೆ. ಒಂದು ಸರ್ವೇ ಅಧ್ಯಯನದ ಪ್ರಕಾರ ಮೊಬೈಲ್‌ನ ಅತಿಯಾದ ಬಳಕೆಯು ಮಗುವನ್ನು ಓವರ್ ಸೆನ್ಸಿಟಿವ್, ಹೈರ‍್ಯಾಕ್ಟಿವ್ ಮತ್ತು ಮಂದತನದಿAದ ಕೂಡಿದ ಬೆಳವಣಿಗೆಗೆ ಪ್ರೇರಣೆ ನೀಡುತ್ತದೆ.
ಇಂದಿನ ಡಿಜಿಟಲ್ ಜಗತ್ತಿನ ಜೀವನದಲ್ಲಿ ಮೊಬೈಲ್ ಸಾಧನವು, ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಸಾಮಾನ್ಯವಾಗಿ ಈ ತಂತ್ರಜ್ಞಾನವು ನಮ್ಮ ಬುದ್ದಿಶಕ್ತಿಗೆ ಹಿಡಿದ ಕೈಗನ್ನಡಿಯಂತಾಗಬೇಕೆ ಹೊರತು ನಮ್ಮನ್ನು ಪ್ರಯೋಜನಕ್ಕೆ ಬಾರದಂತೆ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ. ನಮ್ಮಲ್ಲಿ ಸ್ಥಾನಿಕ ದೂರವಾಣಿಗಳಿದ್ದಾಗ, ಎಲ್ಲರ ಮೊಬೈಲ್ ನಂಬರ್‌ಗಳು ನಮ್ಮ ನಾಲಗೆಯ ತುದಿಯಲ್ಲಿದ್ದವು, ಈಗಲೂ ಕೂಡ ಬಹಳಷ್ಟು ಜನರು ತಮ್ಮ ಇಷ್ಟದವರ, ನೆರೆ-ಹೊರೆಯವರ ಮತ್ತು ಸಂಬoಧಿಕರ ಮೊಬೈಲ್ ನಂಬರ್‌ಗಳನ್ನು ನೋಡದೇ ಹೇಳುವುದುಂಟು. ಸ್ಮಾರ್ಟ್ ಫೋನ್‌ಗಳು ಬಂದ ನಂತರ, ಬಹಳಷ್ಟು ಜನರು ಇತರರ ಮೊಬೈಲ್ ಅಲ್ಲ ತಮ್ಮದೇ ನಂಬರ್ ಹೇಳಬೇಕೆಂದರೂ ಮೊಬೈಲ್‌ನ ಕಾಂಟ್ಯಾಕ್ಟ ಹುಡುಕಿ ಹೇಳುವ ಸ್ಥಿತಿಯಲ್ಲಿದ್ದಾರೆಂಬುದು ಕಟು ಸತ್ಯ. ನಮ್ಮ ಬಳಕೆಯ ಸಾಧನೆಗಳು ನಮ್ಮ ಮೆದುಳಿನ ಕಾರ್ಯಗಳನ್ನು ಕುಂಠಿತಗೊಳಿಸುತ್ತಿವೆ ಮತ್ತು ನಮ್ಮ ಅಧಿಕ ಬಳಕೆಯು ಕಣ್ಣು ಮತ್ತು ದೇಹದ ಇತರ ಅವಯವಗಳನ್ನೂ ಹಾಳು ಮಾಡಲಾರಂಭಿಸಿವೆ.
ಟೈಮ್ ಪಾಸ್ ಮಾಡುವುದಕ್ಕೆ ಅಥವಾ ವಿಶ್ರಾಂತಿ ತೆಗೆದುಕೊಳ್ಳುವುದಕ್ಕೂ ನೀವು ಸ್ಮಾರ್ಟ್ ಫೋನ್‌ನ ಮೊರೆ ಹೋಗುತ್ತೀರಿ ಎಂದಾದರೆ ಖಂಡಿತವಾಗಿಯೂ ನಿಮ್ಮ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಆಸ್ಟ್ರೇಲಿಯಾದ ಡೀಕಿನ್ ವಿಶ್ವವಿದ್ಯಾಲಯದ ಸಂಶೋಧಕರ, ಸ್ಮಾರ್ಟ್ ಫೋನ್‌ನ ನಿರಂತರ ಬಳಕೆ ಮತ್ತು ಮಾನಸಿಕ ಯೋಗಕ್ಷೇಮದ ಬಗೆಗಿನ ಅಧ್ಯಯನವು ತಿಳಿಸುತ್ತದೆ.
ಮಾನಸಿಕ ಆರೋಗ್ಯದ ಮಟ್ಟ ಅತ್ಯುತ್ತಮವಾಗಿಲ್ಲದವರು, ನಕಾರಾತ್ಮಕ ಭಾವನೆಯುಳ್ಳವರು, ಸಂಯಮ ಕಡಿಮೆಯುಳ್ಳವರು, ಜೀವನದ ಉದ್ದೇಶವೇ ಕಳೆದುಕೊಂಡಿರುವoತಾಗಿರುವವರು, ಸಾಮಾಜಿಕ ಒತ್ತಡವನ್ನು ನಿಯಂತ್ರಿಸುವ ಸಾಮರ್ಥ್ಯ ಕುಗ್ಗಿದವರು ಟೈಮ್‌ಪಾಸ್, ವಿಶ್ರಾಂತಿಗಾಗಿ ಸ್ಮಾರ್ಟ್ ಫೋನ್ ನೋಡುತ್ತಿರುತ್ತಾರೆ ಎಂಬುದನ್ನು ಸಂಶೋಧಕರು ಮನಗಂಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ೬ ವರ್ಷದ ಒಳಗಿನ ಮಕ್ಕಳು ಒಂದು ಗಂಟೆಗಿoತ ಹೆಚ್ಚಿನ ಸಮಯವನ್ನು ಡಿಜಿಟಲ್ ಸ್ಕ್ರೀನ್ ನೋಡುವುದಕ್ಕೆ ಆಕ್ಷೇಪಿಸುತ್ತದೆ. ಒಂದು ಗಂಟೆಗಿoತ ಅಧಿಕ ವೀಕ್ಷಣೆಯು ಮಕ್ಕಳ ಕಣ್ಣುಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುವುದಲ್ಲದೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನೂ ಹಾಳು ಮಾಡುತ್ತದೆ. ಆದ್ದರಿಂದ ೬ ವರ್ಷದೊಳಗಿನ ಮಕ್ಕಳನ್ನು ಡಿಜಿಟಲ್ ಸ್ಕ್ರೀನ್ ಬಳಕೆಯಿಂದ ದೂರವಿರಿಸುವುದು ಉಪಯುಕ್ತ. ಈ ಮಕ್ಕಳಿಗೆ ಆನ್‌ಲೈನ್ ಅಥವಾ ಸ್ಕ್ರೀನ್ ಆಧಾರಿತ ಶಿಕ್ಷಣ ಅಥವಾ ತರಬೇತಿಯೂ ಕೂಡ ಒಳ್ಳೆಯದಲ್ಲ.
ನೇರ ಸಂಪರ್ಕ ಹೊಂದುವುದಕ್ಕೆ ಸ್ಮಾರ್ಟ್ ಫೋನ್‌ಗಳನ್ನು ಬಳಕೆ ಮಾಡುವುದು ಒಳ್ಳೆಯದು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಏನು ಮಾಡುತ್ತಿದ್ದಾರೆ ಎಂಬುದನ್ನು ನಿಷ್ಕಿçಯವಾಗಿ ಗಮನಿಸುತ್ತಾ ಕೂರುವುದು ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಂಶೋಧಕರು ಕಂಡುಕೊAಡಿರುವ ಸತ್ಯ.
(ಮುಂದುವರೆಯುವುದು…)