ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಅರಣ್ಯವಲಯದ ಕಡಲ ಮರಳುತೀರ ಕನಾ೯ಟಕದಲ್ಲಿ ಅತಿಹೆಚ್ಚು ಆಲಿವ ರೆಡ್ಲಿ ಕಡಲಾಮೆಗಳು ಮೊಟ್ಟೆಯಿಡಲು ಬರುವ ಸ್ಥಳ, ಇದನ್ನು ಗುರುತಿಸಿದ ಹೊನ್ನಾವರ ಅರಣ್ಯ ವಿಭಾಗ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಕಡಲಾಮೆ ಸಂರಕ್ಷಣೆಗೆ ೧೯೮೪ ರಿಂದ ವಿಶೇಷ ಕಾಯ೯ಕ್ರಮವನ್ನು ಹಮ್ಮಿಕೊಂಡಿತು,
ಅದರಂತೆ ತನ್ನ “ವಕಿ೯೦ಗ್ ಪ್ಯಾನ್ ನಲ್ಲಿ “ ದಾಖಲೆಗಳನ್ನ ಅಳವಡಿಸಿ “ಆಮೆ ರಿಜಿಸ್ಟರ್” ಮೂಲಕ ಮೊಟ್ಟೆ ಇಡಲು ಬಂದ ಆಮೆಗಳ ಸಂಪೂಣ೯ವಿವರಗಳನ್ನು ಕಲೆಹಾಕಿತು. ಪಾರಂಪರಿಕವಾಗಿ ಮಳೆಗಾಲದಲ್ಲಿ ಅತಿಹೆಚ್ಚು ಕಡಲ ಮರಳು ಕೊರೆತ (Erosion) ಹಾಗೂ ಮಳೆಗಾಲದ ನಂತರ ಅತಿ ಹೆಚ್ಚು ಕಡಲಲ್ಲಿ ಮರಳು ಬರತದ (Accretion) ನೈಸಗಿ೯ಕ ಪಕ್ರಿಯ ಪ್ರದೇಶವಾದ ಶರಾವತಿ ನದಿ ಸಂಗಮ ಪ್ರದೇಶ ಸರಕಾರಕ್ಕೆ ಅಭಿವೃದ್ಧಿ ರಹಿತ ಪ್ರದೇಶವಾಗಿ ಗುರುತಿಸಲ್ಪಟ್ಟು, ಕಡಲಾಮೆಗಳಿಗೆ ತನ್ನ ಸಂತಾನೋತ್ಪತ್ತಿಗೆ ಮೊಟ್ಟೆಇಡಲು ಪ್ರಾಶಸ್ಸ್ಥ ತಾಣ ಎಂದು ಗುರುತಿಸಿ ನಿಧ೯ರಿಸಿಕೊಳ್ಳಲು ಸಹಕಾರಿಯಾಯಿತು. ಕಡಲಾಮೆಗಳು ಕೇವಲ ಮೂಟ್ಟೆ ಇಡಲು ಮಾತ್ರ ಮರಳು ತೀರ ಅವಲಂಬಿಸಿದೆ, ಈ ಮೂಕ ಕೂಮ್‌೯ಗಳು ತನ್ನ ಮೊಟ್ಟೆಗಳಿಗೆ ತಾಯಿಯಾಗಿ ಆರೈಕೆ ಮಾಡುವದಿಲ್ಲ ಮೊಟ್ಟೆ ಇಟ್ಟಿ ಹೋದ ಮೇಲೆ ಮತ್ತೆ ಮರಳಿ ನೋಡುವದಿಲ್ಲ, ತೀರ ಪ್ರದೇಶದ ಗಡಿ ಸೈನಿಕರಾದ ಮೀನುಗಾರ ಮೇಲೆ ಅತಿಯಾದ ವಿಶ್ವಾಸದ ಮೇಲೆ ಮೊಟ್ಟೆ ಮರಿಗಳ ಜವಾದ್ದಾರಿ ನೀಡಿ ಹೋಗುತ್ತದೆ. ಬದಲಾದ ವಿದ್ಯಮಾನದಲ್ಲಿ ಕನಾ೯ಟಕ ಕಡಲಮರಳು ತೀರದ ಮೇಲೆ ರಸ್ತೆ, ಶಿಲೆಕಲ್ಲುಗಳ ತಡೆಗೋಡೆಗಳು, ರಾತ್ರಿಯ ಸಮಯದಲ್ಲಿ ಪ್ರಕರವಾದ ವಿದ್ಯುತ್ ದೀಪಗಳು, ಮರಳುತೀರದ ಮೇಲೆ ಕಟ್ಟಡಗಳು, ಅನವಶ್ಯಕ ಮರಗಳ ನೇಡುತೋಪುಗಳು, ಅನಧಿಕೃತ ಕಡಲ ತೀರಮರಳು ಗಣಿಗಾರಿಕೆ ಕಡಲಾಮೆಗಳ ಮೊಟ್ಟೆಇಡುವ ಪ್ರದೇಶಗಳ ಕಬಳಿಕೆ ಓಂದಡೆಯಾದರೆ ಜಾಗತಿಕ ತಾಪಮಾನದಿಂದ ಸಮುದ್ರದ ಮಟ್ಟದಲ್ಲಿ ಆದ ಎರಿಕೆ ಅವು ಮೊಟ್ಟೆ ಇಡುವ ಪ್ರದೇಶಗಳನ್ನು ಕಸಿದುಕೊಂಡಿತು. ಕನಾ೯ಟಕದ ಇತರೆಡಗೆ ತಮ್ಮ ಮೊಟ್ಡೆ ಇಡುವ ಪಾರಂಪರಿಕ ಸ್ಥಾನಗಳನ್ನು ಕಳೆದು ಕೊಂಡ ಕಡಲಾಮೆಗಳಿಗೆ ಸ್ವಾಂತನ ಮಾಡಿದ ಹೊನ್ನಾವರದ ಟೊಂಕಾ (ಕಾಸರಕೋಡ) ಮರಳು ತೀರದಲ್ಲಿ ಬರುವ ಕಡಲಾಮೆಗಳು “ಅಕ್ಕ ಕಾಸರಕೋಡನಲ್ಲಿ ಮೊಟ್ಟೆ ಇಡಲು ಬಾರೇ…” ಎಂದು ಆವ್ವಾನಿಸಿತು.
ಹೊನ್ನಾವರ ಟೊಂಕಾ (ಕಾಸರಕೋಡ) ಮೀನುಗಾರರ ಕಡಲಾಮೆಗಳ ಬಗ್ಗೆ ವಿಶಿಷ್ಟವಾದ ಪಾರಂಪರಿಕವಾಗಿ ಅಳವಡಿಸಿಕೊಂಡ ಕಾಳಜಿ-ಭಕ್ತಿ-ಪ್ರೀತಿ ಕಡಲಾಮೆಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆಗೆ ಆನೆ ಬಲವಾಗಿ ಮಾಪಾ೯ಡಾಯಿತು.ಜಗತ್ಪಾಲಕ ದಶಾವತಾರ ರೂಪಿ ಶ್ರೀಹರಿಯ ಪ್ರತಿಕವಾದ ಕಡಲಾಮೆಗಳು ತಮ್ಮ ಮೀನುಗಾರಿಕೆಯ ನೆಲೆಗಳನ್ನು ಲೋಳೆ ಮೀನು (Jelly fish) ಗಳ ದಾಳಿಯಿಂದ ರಕ್ಷಿಸಿಸುವದು ಅವರಿಗೆ ಗೊತ್ತಿರುವ ವಿಷಯವಾಗಿತ್ತು, ಸಮುದ್ರದ ಹವಾಮಾನದ ಮೂನ್ಸೂಚನೆ ಮತ್ತು ಮಾಹಿತಿಯ ಬಂಡಾರವಾದ ಕಡಲಾಮೆ ಮಳೆಗಾಲ, ಮತ್ಸಕ್ಷಾಮ, ಪ್ರಕ್ರತಿ ವಿಕೋಪದ ಬಾತ್ಮಿದಾರನಾಗಿ ಸಹಾಯಕಾರಿಯಾಗಿದ್ದು, ಟೊಂಕದ ಮೀನುಗಾರ ಮಹಿಳೆಯರಿಗೆ ನೂರಾರು ಮೊಟ್ಟೆಗಳನ್ನು ಪ್ರಸವವೆದನೆಯಲ್ಲೂ ಓಂದೊಂದಾಗಿ ಓಂದು ಗಂಟೆ ಸಮಯದಲ್ಲಿ ಇಡುವ ಮಾಹಾ ಶಕ್ತಿಯ ಸ್ವರೂಪದ ಮಾಹಾ ತಾಯಿಯ ಪ್ರತಿಕವಾಗಿ ಪೂಜ್ಯನಿಯವಾಗಿತ್ತು. ಮೂಕ ಕಡಲಾಮೆಗಳು ತಾನು ನೂರಾರು ಮೊಟ್ಟೆ ಇಟ್ಟ ಹಲವು ಗೂಡುಗಳನ್ನು ಕೆಂಪು ಮಣ್ಣು –ಶಿಲೆಕಲ್ಲುಗಳಿಂದ ಮುಚ್ಚುಲು ಬಂದ ಪೋಲಿಸರ ವಿರುದ್ದ ಹೋಡೆದಾಟ-ಬಡಿದಾಟಕ್ಕು ಸಿದ್ದರಾಗಿ ಜೈಲು-ಕೋಟ೯ ಪಾಲಾದ ಮೀನುಗಾರರ ಪ್ರೀತಿಗೆ ಮಾರುಹೊಗಿತ್ತು, ಪಕ್ಕದ ರಾಜ್ಯದಲ್ಲಿ ನೆಲೆಕಂಡ ಸಂಶೋಧನಾ ಸಂಸ್ಸ್ಥೆ ತಾನು ಮೊಟ್ಟೆ ಇಡಲು ಬಾರದ ಸಮಯದಲ್ಲಿ ಬಂದು ಎರಡು ದಿನದಲ್ಲಿ ರಚಿಸಿದ ವರದಿಯ ವಿರುದ್ದ ತಂಡೋಪ ತಂಡವಾಗಿ ಬಂದು ಮೂಟ್ಟೆ ಇಟ್ಟು ತನ್ನ ಅಸ್ಥಿತ್ವದ ಛಾಪು ಓತ್ತಿ ಮೀನುಗಾರರ ಜೋತೆ ನಿಂತು ಹೊನ್ನಾವರ ಅರಣ್ಯ ವಲಯದ ಉದ್ದಗಲಕ್ಕೂ ಹತ್ತು ಸಾವಿರ ಮೊಟ್ಟೆ ಇಟ್ಟು ಮರಿ ಮಾಡಲಾರಂಬಿಸಿ ತನ್ನ ಮರಿಗಳಿಗೂ ನೀವು ಕೂಡಾ ಇಲ್ಲೆ ಮೊಟ್ಟೆ ಇಡಲು ಬನ್ನಿ ಎಂದು ತೋರಿಸಿಕೋಡುತ್ತಿದೆ. ಆಲಿವ ರೆಡ್ಲಿ ಕಡಲಾಮೆಗಳು ತಾನು ಹುಟ್ಟಿದ ಸ್ಥಳದಲ್ಲಿ ಮೊಟ್ಟೆಇಡಲು ಬರುವ ಗುಣಹೊಂದಿದೆ. ನಾವು ಓಪ್ಪಿಕೊಂಡ ಭಾರತಿಯರು ಸಂವಿಧಾನದ ಕತ೯ವ್ಯಗಳನ್ನು ಪಾಲಿಸುತ್ತೆವೆ ಇತರ ಪ್ರಾಣಿಗಳ ಬಗ್ಗೆ ಅನುಕಂಪವು ನಮ್ಮ ಕತ೯ವ್ಯ ಎಂದು ಭಾರತಿಯರಾಗಿ ಸರಕಾರಿ ಸೇವೆ ಗಿಟ್ಟಿಸಿಕೊಂಡವರು ಟೊಂಕಾ ಸಾಂಪ್ರಂದಾಯಿಕ ಮೀನುಗಾರಿಂದ ಭಾರತೀಯರ ಕತ೯ವ್ಯದ ಪಾಠ ಕಲಿಯಬೇಕಾಗಿದೆ.

ಲೇಖಕರು
ಡಾ ।। ಪ್ರಕಾಶ್ ಮೇಸ್ತ
ಜೀವ ವೈವಿಧ್ಯ ವಿಜ್ಞಾನಿ
ಹೊನ್ನಾವರ