‘ಸಿಂಗಳೀಕ’ದ ಕೊನೆಯ ತಳಿಯನ್ನಾದರೂ ಉಳಿಸಿಕೊಳ್ಳೋಣ ಸ್ವಾಮಿ!

ಉತ್ತರ ಕನ್ನಡ ಅತ್ಯಮೂಲ್ಯವಾದ ಅರಣ್ಯ ಸಂಪತ್ತನ್ನು ಹೊಂದಿದ ಜಿಲ್ಲೆ. ವಿಶೇಷವಾಗಿ ಕರಾವಳಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹಲವಾರು ಪ್ರಭೇದದ ಪ್ರಾಣಿ, ಪಕ್ಷಿ, ಕ್ರಿಮಿ ಕೀಟ, ಸರೀಸೃಪಗಳು ವಾಸ ಮಾಡುತ್ತಿವೆ.

ದೇಶ ಭಾಷಾ ಮಾಧ್ಯಮದ ಬೋಧನೆ ಮತ್ತು ಸೃಜನಶೀಲ ಮನಸ್ಸು

ಮಕ್ಕಳನ್ನು ಇಂಗ್ಲಿಷಿನ ವ್ಯಾಮೋಹ ಮತ್ತು ಆದಷ್ಟು ಬೇಗ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಲೆಂಬ ಮಹದಾಸೆಯಿಂದ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುತ್ತಾರೆ ಸರಿಹೊತ್ತಿನ ಶಿಕ್ಷಣ ಪದ್ಧತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕೆಲವು ವಿಚಾರಗಳು ಸ್ಪಷ್ಟವಾಗಿ ಗೋಚರವಾಗುತ್ತವೆ. ಅದರಲ್ಲಿ ಮುಖ್ಯವಾಗಿ,

ನೋಡಬನ್ನಿ ಸಾಣಿಕಟ್ಟೆಯ ಉಪ್ಪಿನಾಗರವ…

ಸಾನು ನಾಯ್ಕ ಅವರು ಕಟ್ಟಿದ ಕಟ್ಟಿನಿಂದಾಗಿ ಈ ಊರು ಸಾಣಿಕಟ್ಟೆಯಾಗಿ ಪ್ರಸಿದ್ಧವಾಯಿತು. ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಎಂಬುದು ಗಾದೆಮಾತು. ಈ ಮಾತನ್ನು ಅಕ್ಷರಶಃ ಸತ್ಯವಾಗಿಸಿದವರು ಸಾಣಿಕಟ್ಟೆಯ ಉಪ್ಪು ಮಾಲೀಕರ ಸಂಘ.

ಆ ಕ್ಷಣದ ಮಾತುಗಳ ಸಾಮರ್ಥ್ಯದ ನಿರ್ಧರಣೆ

ಹಿಂದಿನ ವಾರ ಇಂದಿನ ದಿನದಲ್ಲಿ ವ್ಯಾವಹಾರಿಕ ಪ್ರಪಂಚದ ಸಂದರ್ಭಗಳಲ್ಲಿ ವ್ಯಕ್ತಿಯೊಬ್ಬನ ಸಂವಹನ ಸಾಮರ್ಥ್ಯವೇ ಹೆಚ್ಚು ಗಣನೆಗೆ ಬರುತ್ತಿದ್ದು, ಅಲ್ಲಿ ಸ್ಪಷ್ಟವಾದ ಮಾತುಗಾರಿಕೆ, ಗಹನವಾಗಿ ಕೇಳಿಸಿಕೊಳ್ಳುವಿಕೆ,

ಒಂದು ದಾರಿ… ಇಬ್ಬರು ದಾರಿಗರು… ಒಬ್ಬ ಕಳ್ಳ… ಇನ್ನೊಬ್ಬ ಸಿಪಾಯಿ…

ಅಂದು ನನ್ನ ಇಬ್ಬರು ಜನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಿದ್ದೆ. ಆಗ ಒಬ್ಬ ಗೆಳೆಯ ತನ್ನ ಜೇಬಿನಿಂದ ಒಂದು ಗುಟ್ಕಾ ಪ್ಯಾಕ್ ತೆಗೆದು ಬಾಯಿಗೆ ಸುರಿದ ಅದರ ಜೊತೆ ಇನ್ನೊಂದನ್ನು ಸುರಿದ…

ವಾಲ್ಮೀಕಿ ಕವಿಯಾದುದು ಈ ನೆಲದ ಬಹುದೊಡ್ಡ ಪುಣ್ಯ

‘ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಷ್ಮೆ ತೊಗಲು’ ಕವಿ ಅಡಿಗರು ಹೇಳಿದ ಮಾತಿದು. ರೇಷ್ಮೆ ಹುಳು ತನ್ನ ಮೈಯಿಂದ ಜಿನುಗುವ ಮೃದುವಾದ ನೂಲಿನಿಂದತನ್ನಗೂಡನ್ನು ಕಟ್ಟಿಕೊಳ್ಳುತ್ತದೆ. ಅದರ ಮೈಯೂ ಮೃದು. ಜಿನುಗುವ ನೂಲೂ ಮೃದು.

….ಆದರೆ, ಇನ್ನೂ ನನಗೆ ಅವರ ಮೇಲೆ ಕೋಪವಿದೆ !

(ನನ್ನ ವಿದ್ಯಾ ಗುರುಗಳಾದ ಹಳದೀಪುರದ ಎಚ್.ಎನ್.ಪೈ ಸರ್ ಅವರಿಗೆ ಜನವರಿ 21 ರಂದು ಭಾನುವಾರ ಅವರ ಶಿಷ್ಯವೃಂದ ಹಾಗೂ ಊರ ನಾಗರಿಕೆರೆಲ್ಲ ಸೇರಿ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ನೀಲಿ ನಕ್ಷತ್ರವೊಂದರ ನೆನಪ ಇಬ್ಬನಿಯಲ್ಲಿ ……….

ಈ ಅಂಕಣವನ್ನು ಬರೆಯಲು ಕುಳಿತ ಹೊತ್ತಿಗೆ ಆತನ ಹೋರಾಟದ ಬದುಕು ಮತ್ತು ಆ ಬದುಕನ್ನು ಆವರಿಸಿದ್ದ ತಲ್ಲಣಗಳು ವ್ಯಕ್ತಿಗೊಬ್ಬನಿಗಷ್ಟೇ ಸಂಬಂಧಿಸಿದ್ದಲ್ಲವೆಂಬ ಸಂಕಟ ನನ್ನನಾವರಿಸಿಬಿಟ್ಟಿತ್ತು. ನಭದ ಚುಕ್ಕಿ, ಚಂದ್ರಮ, ಗ್ರಹ, ತಾರಾದಿಗಳಷ್ಟು ಹೊಳಪನ್ನು ಕಣ್ಣುಗಳಲ್ಲಿ ತುಂಬಿಕೊಂಡು […]

ಅಯೋಧ್ಯಾ ರಾಮನಿಗೆ ಅಳಿಲು ಸೇವೆ ಸಲ್ಲಿಸಿದ ಕೆಕ್ಕಾರದ ಹುಡುಗ

ನಾನು ಹೊನ್ನಾವರ ತಾಲೂಕಿನ ಚಂದಾವರ ಚರ್ಚ್ ಬಳಿ ಬೈಕ್ ನಿಲ್ಲಿಸಿ ವಿನಾಯಕನಿಗೆ ಕಾಲ್ ಮಾಡಿದೆ. ಐದು ನಿಮಿಷದಲ್ಲೇ ಆತ ನಾನಿದ್ದಲ್ಲಿಗೆ ಬಂದ. ಆತನ ಕಣ್ಣಿನಲ್ಲಿ ಇನ್ನೂ ಮೂರು ದಿನಗಳ ನಿದ್ದೆ ತುಳುಕುತ್ತಿತ್ತು. ನನ್ನ ಕಾಲ್ […]

ಪ್ರಜಾಪ್ರಭುತ್ವದ ಎರಡು ಬಿಡಿ ಚಿತ್ರಗಳು !

ಅವರು ನಾಗರೀಕ ಸಮಾಜದ ಮುಖ್ಯವಾಹಿನಿಯಿಂದ ಹೊರಗೇ ವಾಸಿಸಲು ಇಷ್ಟಪಡುವ ಜನ. ತಮ್ಮದೇ ವಿಶಿಷ್ಟ ಸಂಸ್ಕೃತಿ-ಆಚರಣೆಗಳನ್ನು ಮೈಗೂಡಿಸಿಕೊಂಡವರು. ಸಮುದಾಯದ ಬಹುಪಾಲು ತಳಸ್ತರದ ಕೂಲಿ ಕಾರ್ಮಿಕರು. ಬಹುಶಃ ಸರ್ಕಾರಗಳಿನ್ನೂ ಅವರನ್ನು ತಲುಪಲು ಸಾಧ್ಯವೇ ಆಗಿಲ್ಲ.

ಸ್ವಾಧ್ಯಾಯವೆಂಬ ಜ್ಞಾನಾರ್ಜನೆಯ ಏರುಪಥ

ಪತಂಜಲಿಗಳ ಯೋಗಸೂತ್ರದ ಕೊನೆಯ ಎರಡು ನಿಯಮಗಳು ಸ್ವಾಧ್ಯಾಯ ಮತ್ತು ಈಶ್ವರ ಪ್ರಣಿಧಾನ. ವ್ಯಾಸಭಾಷ್ಯದ ಅನುಸಾರ ಮೋಕ್ಷಶಾಸ್ತ್ರದ ಅಧ್ಯಯನ ಹಾಗೂ ಪ್ರಣವ ಜಪವೇ ಸ್ವಾಧ್ಯಾಯ. ಸ್ವಾಧ್ಯಾಯದ ನೇರವಾದ ಅರ್ಥ ತನ್ನನ್ನೇ ತಾನು ಅಧ್ಯಯನ ಮಾಡಿಕೊಳ್ಳುವುದು, ಆತ್ಮಾವಲೋಕನ […]

ಇನ್ನಷ್ಟು ಉತ್ತಮ ಮಾತುಗಾರರಾಗಲು ನಾವೇನು ಮಾಡಬಹುದು ?

ಹಿಂದಿನವಾರ ಉತ್ತಮ ಮಾತುಗಾರ ರಾಗಬೇಕೆಂದರೆ ಯಾವ ವಿಚಾರಗಳನ್ನು ಗಮನದಲ್ಲಿಟ್ಟು ಕೊಳ್ಳಬೇಕು ಎಂಬುದನ್ನು ಗಮನಿಸಿದೆವು. ಕೆಲವೊಮ್ಮೆ ಮೌನವೂ ಅತ್ಯುತ್ತಮ ಉತ್ತಮ ಸಂವಹನವಾಗಬಹುದಾಗಿದ್ದು, ಯಾವ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರತಿಕ್ರಿಯೆಗಳನ್ನು ನೀಡಬಾರದೋ ಅಲ್ಲಿ ಮೌನವಾಗಿರುವುದೇ ಲೇಸು. ಇದರಿಂದಾಗಿ […]

ಬದುಕಲು ವಿಷ ತಿನ್ನಬೇಕು….

ಉದ್ಯಾನವನವೊಂದರಲ್ಲಿ ನಿಂತಿದ್ದೆ… ಅಲ್ಲಿಯ ಮರವೊಂದರಲ್ಲಿ ಹಕ್ಕಿಯೊಂದು ಆಚೆ ಈಚೆ ಹಾರಾಡುತ್ತ ತನ್ನ ಆಹಾರ ಹುಡುಕುತ್ತಿತ್ತು… ಅದರ ಚುರುಕು ಚಟುವಟಿಕೆ ನನಗೆ ತುಂಬಾ ಆಕರ್ಷಕ ಎನಿಸಿತು.

ಜೋಯಿಡಾದಲ್ಲಿ ಮಳೆಯಾದರೆ…

ಜೋಯಿಡಾದಲ್ಲಿ ಮಳೆಯಾದರೆ ಹಳ್ಳ ಕೊಳ್ಳವೆಲ್ಲ ತುಂಬಿದಾಟಲಾಗದೆ ಶಾಲೆ ಕನಸುಕಾಣುವ‌ ಮಕ್ಕಳ ಮನಮರಿ ದುಂಬಿಯಾಗಿಹಾರಿ ಹಾರಿಅಕ್ಷರವಾಗುವ ಹೊತ್ತು

ಕೆರೆಗಳ ಅಂಗಳದಲ್ಲಿ ಸರ್ವೇ ಕಲ್ಲು ಮಾಯ, ಇಟ್ಟಂಗಿ ಬಟ್ಟಿಗೆ ಉಪಾಯ

ಇಂದು ಹಳಿಯಾಳ, ದಾಂಡೇಲಿ, ಜೋಯಿಡಾ (ಸೂಪಾ) ತಾಲ್ಲೂಕಿನ ಕೆರೆಗಳ ಸ್ಥಿತಿ ಚಿಂತಾಜನಕವಾಗಿದೆ. ಒತ್ತುವರಿ, ಹೂಳು ತುಂಬುವಿಕೆ ನೀರು ಶೇಖರಣಾ ಸಾಮರ್ಥ್ಯವನ್ನು ಕುಂಠಿತಗೊಳಿಸಿದೆ. ಕೆರೆಗೆ ನೀರು ಹರಿದು ಬರುವಕಾಲುವೆಗಳು, ಏರಿ, ಕೋಡಿಗಳು ಶಿಥಿಲಾವಸ್ಥೆ ತಲುಪಿದೆ.

ಉತ್ತಮ ಮಾತುಗಾರರಾಗಲು ನಾವೇನು ಮಾಡಬಹುದು

ಹಿಂದಿನ ವಾರ ಮಾತು ವ್ಯಕ್ತಿ ವ್ಯಕ್ತಿಗಳ ಮಧ್ಯೆ ಸ್ನೇಹವನ್ನು ಬೆಳೆಸುವಲ್ಲಿ, ಸಂಬಂಧವನ್ನುಕೆಡಿಸುವಲ್ಲಿ ವ್ಯಕ್ತಿಗಳ ನಡುವೆ ಸರಸವನ್ನು ಸೃಷ್ಟಿಸುವಲ್ಲಿ ಹಾಗೂ ವಿರಸವನ್ನು ಮೂಡಿಸುವಲ್ಲಿಪ್ರಮುಖ ಪಾತ್ರವಹಿಸಬಲ್ಲುದು.ಹಾಗೂ ನಮ್ಮ ಮಾತಿನ ಶೈಲಿಯಿಂದ ಬಲು ದೊಡ್ಡದಾದಸಂಘಟನೆಯನ್ನು ಯಶಸ್ವಿಯಾಗಿ ನಿರ್ಮಿಸಿದರೆ, ಅಸಂಬದ್ಧ […]

ಹಾಕಿದ ಹುಲ್ಲು …. ಕಟ್ಟಿದ ಗೂಟ…

ಆನ್ ಲೈನ್ ನಲ್ಲಿ ಒಬ್ಬರ ಪ್ರವಚನವೊಂದನ್ನು ಕೇಳುತ್ತಾ ಇದ್ದೆ… ಪ್ರವಚನದ ವಿಷಯ ” ಒಂದು ವ್ಯವಹಾರ ಅಥವಾ ಹಲವು ವ್ಯವಹಾರಗಳನ್ನು ಹೊಂದಿ ಅದೆಷ್ಟೋ ಜನ ಜೀವನದಲ್ಲಿ ಯಶಸ್ವಿಯಾದವರು ಇದ್ದಾರೆ. ಆದರೆ, ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ […]

ನನ್ನ ದೋಸ್ತ ವೇಂಕಟೇಶ ಮೇಸ್ತ ಮರೆಯಾಗಿಬಿಟ್ಟ…

ಹೊಸ ವರ್ಷದ ಮೊದಲ ವಾರವೇ ‘ನದಿ’ ಅಂಕಣವನ್ನು ತುಂಬ ನೋವಿನಿಂದ ಬರೆಯುವಸಂದರ್ಭ ನನ್ನ ಪಾಲಿಗೆ. ಆದರೂ ಬರೆಯಲೇ ಬೇಕು. ಅವನ ಬಗ್ಗೆ ನೋವಿನಿಂದಮಾತ್ರವಲ್ಲ, ಸಿಟ್ಟಿನಿಂದಲೂ ಬರೆಯಬೇಕಾಗಿದೆ. ಯಾರಿಗೂ ಮೋಸ ಮಾಡದ ಆತ ಕೊನೆಗೂಎಲ್ಲರಿಗೂ ಮೋಸ […]